ತೆಂಗಿನ ಮರಕ್ಕೆ ಹೂ ಮುಡಿಸಿ, ಅರಿಶಿಣ ಹಚ್ಚಿ ಸೀಮಂತ
ಮೊದಲ ಬಾರಿಗೆ ತೆಂಗಿನ ಮರ ಫಸಲು ಕೊಟ್ಟ ಹಿನ್ನೆಲೆಯಲ್ಲಿ ಮುದ್ದೇಬಿಹಾಳದ ಬಿಇಓ ಕಚೇರಿಯ ಮಹಿಳಾ ಸಿಬ್ಬಂದಿ ನೇತೃತ್ವದಲ್ಲಿ ತೆಂಗಿನ ಮರಕ್ಕೆ ಸೀಮಂತ ಕಾರ್ಯ ನೆರವೇರಿಸಲಾಯಿತು.
ವಿಜಯಪುರ: ಅಪರೂಪದಲ್ಲೇ ಅಪರೂಪ ಎಂಬಂತೆ ಮಹಿಳಾ ಸಿಬ್ಬಂದಿ ತೆಂಗಿನ ಮರಕ್ಕೆ ಸೀಮಂತ ಕಾರ್ಯ ನೆರವೇರಿಸಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಬಿಇಒ ಕಚೇರಿ ಆವರಣದಲ್ಲಿ ನಡೆದಿದೆ.
ತಮಾಷೆ ಅನ್ನಿಸಿದ್ರೂ ಇದು ನಿಜ. ಪ್ರಕೃತಿಯನ್ನು ದೇವರಿಗೆ ಹೋಲಿಸುತ್ತೇವೆ. ಹೀಗಾಗಿ ಪ್ರಕೃತಿ ಪೂಜೆ ನಮ್ಮಲ್ಲಿ ತೀರ ಸಾಮಾನ್ಯ. ಆದ್ರೆ ಇಲ್ಲಿ ಮಹಿಳೆಯರು ಕಲ್ಪವೃಕ್ಷಕ್ಕೆ ಸೀಮಂತ ಮಾಡಿದ್ದಾರೆ. ಯಾಕಂದ್ರೆ ಇದೇ ಮೊದಲ ಬಾರಿಗೆ ತೆಂಗಿನ ಮರ ಫಸಲು ಕೊಟ್ಟಿದೆಯಂತೆ.
ಹೀಗಾಗಿ ಬಿಇಒ ಕಚೇರಿಯ ಮಹಿಳಾ ಸಿಬ್ಬಂದಿ ನೇತೃತ್ವದಲ್ಲಿ ತೆಂಗಿನ ಮರಕ್ಕೆ ಸೀಮಂತ ಕಾರ್ಯ ನೆರವೇರಿಸಲಾಯಿತು. ತೆಂಗಿನ ಮರಕ್ಕೆ ಹೂವು ಮುಡಿಸಿ. ಕುಂಕುಮ-ಅರಿಶಿಣ ಹಚ್ಚಿ, ಬಳೆ ತೊಡಿಸಿ ಆರತಿ ಬೆಳಗಲಾಯಿತು. ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ಬಿಇಓ ವಿರೇಶ ಜೀವರಗಿ ಹಾಗೂ ಇತರರು ಭಾಗಿಯಾಗಿದ್ರು.
Published On - 12:59 pm, Wed, 2 December 20