Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಲಾಮಗಿರಿಯ ನಾನಾ ರೂಪ: ಸಿಗುವುದೇ ಆಧುನಿಕ ಗುಲಾಮಗಿರಿಯಿಂದ ಮುಕ್ತಿ

ವಿರೋಧದ ನಡುವೆಯೂ ಗುಲಾಮಗಿರಿ ಚಾಲ್ತಿಯಲ್ಲಿದೆ. ಆಫ್ರಿಕಾ, ಏಷ್ಯಾ, ಮಧ್ಯಪೂರ್ವ ರಾಷ್ಟ್ರಗಳಲ್ಲಿ ಇನ್ನೂ ಗುಲಾಮರು ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದಾರೆ.

ಗುಲಾಮಗಿರಿಯ ನಾನಾ ರೂಪ: ಸಿಗುವುದೇ ಆಧುನಿಕ ಗುಲಾಮಗಿರಿಯಿಂದ ಮುಕ್ತಿ
ವಿಶ್ವ ಗುಲಾಮಗಿರಿ ನಿರ್ಮೂಲನಾ ದಿನ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: ganapathi bhat

Updated on:Apr 07, 2022 | 5:44 PM

ಪ್ರತಿಯೊಬ್ಬ ಮಾನವನಿಗೂ ತನ್ನ ಸ್ವಾತಂತ್ರ್ಯವನ್ನು ಇನ್ನೊಬ್ಬರಿಗೆ ತೊಂದರೆ ಕೊಡದಂತೆ ಅನುಭವಿಸುವ ಹಕ್ಕಿದೆ. ಇಲ್ಲಿ ಎಲ್ಲರೂ ತಮ್ಮ ಬದುಕಿನ ಬಗ್ಗೆ ಕನಸು ಕಾಣುವ ಹಕ್ಕಿಗಳು. ಯಾರೂ ಯಾರ ಗುಲಾಮರಲ್ಲ. ಗುಲಾಮರಾಗಲು ಬಯಸುವುದೂ ಇಲ್ಲ. ಕಾನೂನಿನ ದೃಷ್ಠಿಯಲ್ಲೂ ಗುಲಾಮಗಿರಿ ತಪ್ಪು.

ಆದರೆ, ಕಾನೂನಿನ ವಿರೋಧದ ನಡುವೆಯೂ ಗುಲಾಮಗಿರಿ ಚಾಲ್ತಿಯಲ್ಲಿದೆ. ಆಫ್ರಿಕಾ, ಏಷ್ಯಾ, ಮಧ್ಯಪೂರ್ವ ರಾಷ್ಟ್ರಗಳಲ್ಲಿ ಇನ್ನೂ ಗುಲಾಮರು ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಕಳ್ಳ ಸಾಗಣೆ, ಯುವಜನರ ದುರ್ಬಳಕೆ ಇತ್ಯಾದಿಗಳ ಮೂಲಕ ಗುಲಾಮಗಿರಿ ನಡೆಯುತ್ತಿದೆ. ವಿಶ್ವ ಗುಲಾಮಗಿರಿ ನಿರ್ಮೂಲನಾ ದಿನವಾದ ಇಂದು ಈ ಬಗ್ಗೆ ನಾವು ಜಾಗೃತರಾಗಬೇಕಿದೆ.

ವಿಶ್ವ ಗುಲಾಮಗಿರಿ ನಿರ್ಮೂಲನಾ ದಿನ International day against slavery 2020 ವಿಶ್ವ ಗುಲಾಮಗಿರಿ ನಿರ್ಮೂಲನಾ ದಿನವನ್ನು ಡಿಸೆಂಬರ್ 2ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತಿದೆ. 1986ರಿಂದ ಆಚರಿಸಲಾಗುತ್ತಿರುವ ಈ ದಿನದಂದು ಎಲ್ಲಾ ವಿಧದ ಗುಲಾಮಗಿರಿಯಿಂದ ಮುಕ್ತರಾಗುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಆಧುನಿಕ ಗುಲಾಮಗಿರಿಯಿಂದ ಮುಕ್ತರಾಗೋಣ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ILO) ಮಾಹಿತಿಯಂತೆ ವಿಶ್ವದಲ್ಲಿ ಸುಮಾರು 4 ಕೋಟಿ ಜನರು ಗುಲಾಮಗಿರಿಗೆ ಸಿಲುಕಿದ್ದಾರೆ. ಬಲವಂತವಾಗಿ ಮಾಡುವ ಕೆಲಸ, ಬಲವಂತದಿಂದ ನಡೆಯುವ ಮದುವೆ, ಮಾನವ ಸಾಗಣೆ, ಸಾಲದ ತೊಂದರೆ ಇತ್ಯಾದಿಗಳನ್ನು ಆಧುನಿಕ ಗುಲಾಮಗಿರಿ ಎಂದೇ ಪರಿಗಣಿಸಲಾಗುತ್ತದೆ. ಈ ಬಗ್ಗೆ ಸೂಕ್ತ ಕಾನೂನು ಇನ್ನೂ ರಚನೆಯಾಗಿಲ್ಲ. ಆದರೆ ನಾವು ಜಾಗೃತರಾಗಿರುವುದು ಅವಶ್ಯವಾಗಿದೆ.

ಆಧುನಿಕ ಗುಲಾಮಗಿರಿ ಎಂದರೇನು? ಮೇಲ್ನೋಟಕ್ಕೆ ಸಹಜ ಕೆಲಸದಂತೆ ಕಾಣುವ ವಿಷಯಗಳೂ ಕೆಲವೊಮ್ಮೆ ಗುಲಾಮಗಿರಿ ಆಗಿರುತ್ತದೆ. ಕೆಲಸಗಾರರು ಮಾಲೀಕರಿಂದ ಅತಿಯಾದ ನಿರ್ಬಂಧಕ್ಕೆ ಒಳಪಡುತ್ತಾರೆ. ಅವರ ಅಡಿಯಾಳಾಗಿ ಕೆಲಸ ಮಾಡುತ್ತಾರೆ. ಮುಂಗಡ ಹಣ ಪಡೆದು, ಅಗತ್ಯ ದಾಖಲೆಗಳನ್ನು ನೀಡಿ, ನಂತರ ಬೆದರಿಕೆಗೆ ಒಳಗಾಗುತ್ತಾರೆ. ಹಿಂಸಾಚಾರ ಅನುಭವಿಸುತ್ತಾರೆ.

ಬಡತನ, ಅಭದ್ರತೆ, ಕೌಟುಂಬಿಕ ಹಿತದೃಷ್ಠಿಯಿಂದ ನಡೆಯುವ ಇಂತಹ ಕೆಲಸಗಳು ಕೊನೆಗೆ ಕೆಲಸಗಾರರ ಬದುಕಿಗೆ ಮುಳುವಾಗುತ್ತದೆ. ಅದರಿಂದ ತಪ್ಪಿಸಿಕೊಳ್ಳಲಾಗದೆ ಪರದಾಡುವಂತಾಗುತ್ತದೆ.

ಬಾಲಕಾರ್ಮಿಕ ಪದ್ಧತಿ ಎಂಬ ಸಾಮಾಜಿಕ ಪಿಡುಗು ವಿಶ್ವಸಂಸ್ಥೆಯ ಪ್ರಕಾರ ಸುಮಾರು 15 ಕೋಟಿ ಮಕ್ಕಳು ಬಾಲಕಾರ್ಮಿಕ ಪದ್ಧತಿಗೆ ತುತ್ತಾಗಿದ್ದಾರೆ. ಹತ್ತರಲ್ಲಿ ಒಂದು ಮಗು ಬಾಲಕಾರ್ಮಿಕ ಪದ್ಧತಿಯ ಅಡಿಯಾಳಾಗಿದೆ. ಈ ಪದ್ಧತಿಯು ಮಾನವ ಹಕ್ಕುಗಳನ್ನು ವಿರೋಧಿಸುತ್ತದೆ.

International day for the abolition of slavery ವಿಶ್ವ ಗುಲಾಮಗಿರಿ ನಿರ್ಮೂಲನಾ ದಿನ 2020 ಎಲ್ಲಾ ವಿಧದ ಜೀತ, ಗುಲಾಮಗಿರಿ ಪದ್ಧತಿಗಳಿಂದ ಹೊರಬರಲು ಸಹಕರಿಸಬೇಕಿದೆ. ಸಾಮಾಜಿಕ ಜೀವನದ ಭಾಗವಾಗಿರುವ ನಾವೆಲ್ಲರೂ ಈ ಬಗ್ಗೆ ಜಾಗೃತರಾಗಬೇಕಿದೆ.

ಇನ್ನೂ ಜೀವಂತವಾಗಿದೆ ಜೀತ ಪದ್ಧತಿ, ದೇವನಹಳ್ಳಿ ಬಳಿ 204 ಜನರ ರಕ್ಷಣೆ

Published On - 12:54 pm, Wed, 2 December 20

ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು