ತಪ್ಪು ಮಾಹಿತಿ ಟ್ವೀಟ್‌ ಮಾಡಿದರೆ ‘Manipulated media’ ಲೇಬಲ್ ಹಾಕಲಿದೆ ಟ್ವಿಟರ್

ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗೆ ಕಡಿವಾಣ ಹಾಕಲು ಪ್ರಸ್ತುತ ವರ್ಷ ಟ್ವಿಟರ್ ಹಲವಾರು ಕ್ರಮಗಳನ್ನು ಕೈಗೊಂಡಿದೆ. ತಿರುಚಿದ ಯಾವುದೇ ಫೋಟೊ ಅಥವಾ ವಿಡಿಯೊವನ್ನು ತಿರುಚಿದ ಫೋಟೊ/ ವಿಡಿಯೊ ಎಂದು ವರ್ಗೀಕರಿಸುವುದಾಗಿ ಟ್ವಿಟರ್ 2020 ಫೆಬ್ರುವರಿಯಲ್ಲಿ ಘೋಷಿಸಿತ್ತು.

ತಪ್ಪು ಮಾಹಿತಿ ಟ್ವೀಟ್‌ ಮಾಡಿದರೆ 'Manipulated media' ಲೇಬಲ್ ಹಾಕಲಿದೆ ಟ್ವಿಟರ್
ಟ್ವಿಟರ್
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Dec 02, 2020 | 6:50 PM

ನವದೆಹಲಿ: ತಿರುಚಿದ ವಿಡಿಯೊ ಅಥವಾ ಫೋಟೊಗಳನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದರೆ ಆ ಟ್ವೀಟ್‌ ಕೆಳಗಡೆ ‘Manipulated media’ (ತಿರುಚಿದ್ದು) ಎಂಬ ಲೇಬಲ್ ಕಾಣಿಸಿಕೊಳ್ಳುತ್ತದೆ. ತಿರುಚಿದ ಅಥವಾ ವಿರೂಪಗೊಳಿಸಿದ ಯಾವುದೇ ಫೋಟೊ ಅಥವಾ ವಿಡಿಯೊವನ್ನು ತಿರುಚಿದ ಫೋಟೊ/ ವಿಡಿಯೊ ಎಂದು ವರ್ಗೀಕರಿಸುವುದಾಗಿ ಟ್ವಿಟರ್ 2020 ಫೆಬ್ರುವರಿಯಲ್ಲಿ ಘೋಷಿಸಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗೆ ಕಡಿವಾಣ ಹಾಕಲು ಪ್ರಸ್ತುತ ವರ್ಷ ಟ್ವಿಟರ್ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅಮೆರಿಕದ ಚುನಾವಣೆ ವೇಳೆ ತಪ್ಪಾದ ಮಾಹಿತಿಗಳನ್ನು ಲೇಬಲ್ ಮಾಡುವ ಕಾರ್ಯವನ್ನು ಟ್ವಿಟರ್ ಮಾಡಿದೆ. ಆದಾಗ್ಯೂ, ಮುಂಬರುವ ದಿನಗಳಲ್ಲಿ ಭಾರತದಲ್ಲಿ ನಡೆಯುವ ಚುನಾವಣೆ ವೇಳೆ ಇದೇ ರೀತಿ ಟ್ವಿಟರ್ ಕಾರ್ಯವೆಸಗಲಿದೆಯೇ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಯಾವೆಲ್ಲ ಸಂಗತಿಗಳಿಗೆ ಟ್ವಿಟರ್ Manipulated media ಎಂಬ ಲೇಬಲ್ ಬಳಸುತ್ತದೆ?

ತಿರುಚಿರುವ ಯಾವುದೇ ವಿಡಿಯೊ ಅಥವಾ ಚಿತ್ರವನ್ನು ಟ್ವಿಟರ್ Manipulated media ಎಂದು ಗುರುತಿಸುತ್ತದೆ. ಟ್ವೀಟ್ ಮಾಡಿರುವ ಚಿತ್ರದ ಕೆಳಗೆ ಕಾಣಿಸಿಕೊಳ್ಳುವ ಈ ಲೇಬಲ್ ಕ್ಲಿಕ್ ಮಾಡಿದರೆ-ಹಾನಿಯುಂಟು ಮಾಡುವ ಸಾಧ್ಯತೆ ಇರುವ ಯಾವುದೇ ತಿರುಚಿದ ವಿಷಯಗಳನ್ನು ನೀವು ಶೇರ್ ಮಾಡಬಾರದು. ತಿರುಚಿದ ವಿಡಿಯೊಗಳನ್ನು ನಾವು Manipulated media ಎಂದು ವರ್ಗೀಕರಿಸುವ ಮೂಲಕ ಆ ಮಾಧ್ಯಮದ ವಿಶ್ವಾಸರ್ಹತೆ ಬಗ್ಗೆ ಜನರು ಪರಾಂಬರಿಸಿ ನೋಡಲು ಸಹಾಯ ಮಾಡುತ್ತೇವೆ ಎಂದು ಟ್ವಿಟರ್ ಹೇಳಿದೆ.

ತಿರುಚಿದ ಮಾಧ್ಯಮ ಎಂದು ಟ್ವಿಟರ್ ಹೇಗೆ ನಿರ್ಧರಿಸುತ್ತದೆ?

ಫೆಬ್ರುವರಿಯಲ್ಲಿ ಟ್ವಿಟರ್ ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಈ ಬಗ್ಗೆ ವಿವರಣೆ ನೀಡಿತ್ತು. ತಿರುಚಿದ ಅಥವಾ ಬದಲಾವಣೆ ಮಾಡಿದ ಚಿತ್ರ ವಿಡಿಯೊ ಎಂಬುದು ನಿರ್ಧರಿಸಲಿರುವ ಅಂಶಗಳು

1. ಯಾವುದೇ ಚಿತ್ರ/ ವಿಡಿಯೊದ ಸಂಕಲನ, ಅನುಕ್ರಮ ಅಥವಾ ಸಮಯವನ್ನು ತಿರುಚಿ ಎಡಿಟ್ ಮಾಡಿದ್ದರೆ

2. ವಿಡಿಯೊಗಳು ಡಬ್ ಮಾಡಿರುವುದಾದರೆ, ಹೊಸ ಫ್ರೇಮ್ ಅಥವಾ ಸಬ್‌ಟೈಟಲ್‌ಗಳನ್ನು ತಿದ್ದಿದ್ದರೆ ಅಥವಾ ಡಿಲೀಟ್ ಮಾಡಿದ್ದರೆ

3. ವ್ಯಕ್ತಿಯೊಬ್ಬನ ಬಗ್ಗೆ ತಪ್ಪಾದ ರೀತಿಯಲ್ಲಿ ಚಿತ್ರಿಸಿದ್ದರೆ

ಅವುಗಳನ್ನು ತಿರುಚಿದ ಮಾಧ್ಯಮ ಎಂದು ವರ್ಗೀಕರಿಸಲಾಗುವುದು

ತಿರುಚಿದ ಅಥವಾ ಸುಳ್ಳು ಚಿತ್ರಗಳು ನಿಜವಾದದು ಎಂದು ವಾದಿಸಿದ್ದರೆ ಅವುಗಳಿಗೂ ಈ ಲೇಬಲ್ ಬಳಸಲಾಗುವುದು. ಷೇರ್ ಮಾಡಿದ ಚಿತ್ರ/ವಿಡಿಯೊದೊಂದಿಗಿರುವ ಪಠ್ಯ, ಷೇರ್ ಮಾಡಿದ ವ್ಯಕ್ತಿಯ ಪ್ರೊಫೈಲ್‌ನಲ್ಲಿರುವ ವಿವರಣೆ, ಆ ಪ್ರೊಫ್ರೈಲ್‌ಗೆ ಲಿಂಕ್ ಆಗಿರುವ ವೆಬ್‌ಸೈಜ್ ಲಿಂಕ್ ಎಲ್ಲವನ್ನೂ ಟ್ವಿಟರ್ ಪರಿಶೀಲಿಸುತ್ತದೆ.

ತಿರುಚಿದ ವಿಡಿಯೊ/ ಚಿತ್ರಗಳನ್ನು ಟ್ವಿಟರ್ ತೆಗೆದು ಹಾಕುತ್ತದೆಯೇ?

ತಿರುಚಿದ ವಿಡಿಯೊ/ ಚಿತ್ರಗಳು ಯಾರಿಗಾದರೂ ಹಾನಿಯುಂಟು ಮಾಡಿದರೆ ಅವುಗಳನ್ನು ತೆಗೆದು ಹಾಕಲಾಗುವುದು. ವ್ಯಕ್ತಿ ಅಥವಾ ಗುಂಪಿನ ಸುರಕ್ಷತೆ . ಸಮೂಹಿಕ ಹಿಂಸಾಚಾರ, ಖಾಸಗಿತನ ಅಥವಾ ಗುಂಪೊಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದರೆ ಈ ವಿಡಿಯೊ/ ಚಿತ್ರಗಳನ್ನು ತೆಗೆದು ಹಾಕಲಾಗುವುದು.

ಈ ರೀತಿ ಲೇಬಲ್ ಮಾಡಿದ ಟ್ವೀಟ್‌ಗಳನ್ನು ರೀಟ್ವೀಟ್ ಮಾಡಿದರೆ? ಈ ರೀತಿ ಲೇಬಲ್ ಮಾಡಿದ ಟ್ವೀಟ್​ಗಳನ್ನು ರೀಟ್ವೀಟ್ ಮಾಡಿದರೆ, ಲೈಕ್ ಮಾಡಿದರೆ ಅಲ್ಲಿಯೂ ಟ್ವಿಟರ್ ಎಚ್ಚರಿಕೆ ಸಂದೇಶವನ್ನು ತೋರಿಸುತ್ತದೆ. ಅಷ್ಟೇ ಅಲ್ಲದೆ ಈ ರೀತಿ ಲೇಬಲ್ ಮಾಡಿದ ಟ್ವೀಟ್‌ಗಳು ಹೆಚ್ಚು ವೀಕ್ಷಣೆ ಗಳಿಸದಂತೆ ಟ್ವಿಟರ್ ತಡೆಯುತ್ತದೆ.

ಅಮಿತ್ ಮಾಳವಿಯಾ ಟ್ವೀಟ್‌ಗೆ manipulated ಲೇಬಲ್

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ವೇಳೆ ಪೊಲೀಸ್ ರೈತರಿಗೆ ಹೊಡೆದಿಲ್ಲ. ಲಾಠಿ ಬೀಸಿದ್ದರೂ ಅದು ರೈತರ ದೇಹಕ್ಕೆ ತಾಗಿಲ್ಲ ಎಂದು ನಿರೂಪಿಸುವ ವಿಡಿಯೊವೊಂದನ್ನು ಬಿಜೆಪಿ ಐಟಿ ಸೆಲ್ ಉಸ್ತುವಾರಿ ವಹಿಸಿರುವ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದರು.

ನವೆಂಬರ್ 28ರಂದು ಮಾಳವಿಯಾ ಈ ವಿಡಿಯೊ ಟ್ವೀಟ್ ಮಾಡಿದ್ದು Propaganda vs Reality ಎಂಬ ಶೀರ್ಷಿಕೆ ನೀಡಿದ್ದರು.

ಇದಾದನಂತರ ಫ್ಯಾಕ್ಟ್ ‌ಚೆಕಿಂಗ್ ವೆಬ್‌ಸೈಟ್‌ಗಳು ಮಾಳವಿಯಾ ಶೇರ್ ಮಾಡಿರುವುದು ವಿಡಿಯೊವೊಂದರ ತುಣುಕು ಅಷ್ಟೇ. ಇದೇ ವಿಡಿಯೊದ ಇನ್ನೊಂದು ಭಾಗದಲ್ಲಿ ಪೊಲೀಸರು ರೈತರ ಮೇಲೆ ಲಾಠಿ ಪ್ರಹಾರ ಮಾಡುತ್ತಿರುವುದು ಕಾಣುತ್ತದೆ ಎಂದು ಪೂರ್ತಿ ವಿಡಿಯೊವನ್ನು ಪ್ರಕಟಿಸಿದ್ದವು. ಮಾಳವಿಯಾ ಷೇರ್ ಮಾಡಿರುವ ಈ ವಿಡಿಯೊದ ಕೆಳಗಡೆ ಬುಧವಾರ ಟ್ವಿಟರ್ ತಿರುಚಿದ ವಿಡಿಯೊ ಎಂಬ ಲೇಬಲ್ ಹಾಕಿದೆ.

Published On - 6:47 pm, Wed, 2 December 20

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?