27 ವರ್ಷಗಳ ಹಿಂದಿನ ಹೆಪ್ಪುಗಟ್ಟಿದ ಭ್ರೂಣಕ್ಕೆ ಈಗ ಬಂತು ಜೀವ!
1992ರ ಅಕ್ಟೋಬರ್ನಲ್ಲಿ ಹೆಪ್ಪುಗಟ್ಟಿದ ಭ್ರೂಣದಿಂದ ಒಂದು ತಿಂಗಳ ಹಿಂದೆಯಷ್ಟೇ ಮೊಲ್ಲಿ ಜನಿಸಿದಳು. 3 ಕೆ.ಜಿ ತೂಕ ಹೊಂದಿರುವ ಮೊಲ್ಲಿ ಈಗಾಗಲೇ ಇತಿಹಾಸವ ನಿರ್ಮಿಸಿದ್ದಾಳೆ. ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾದ ಭ್ರೂಣ 27 ವರ್ಷಗಳ ಕಾಲ ಹಾಗೆ ಇದ್ದು, ನಂತರ ಜನ್ಮ ಪಡೆದಿರುವುದರಿಂದ ವಿಶ್ವ ದಾಖಲೆ ಮಾಡಿದೆ.
ವಾಷಿಂಗ್ಟನ್: ಅಚ್ಚರಿಗಳು ಆಧುನಿಕ ಕಾಲದಲ್ಲಿ ಒಂದರ ಮೇಲೆ ಒಂದರಂತೆ ನಡೆಯುತ್ತಲೇ ಇವೆ. ಇದಕ್ಕೆ ಮತ್ತೊಂದು ಸಾಕ್ಷಿ ಟೀನಾ ಮತ್ತು ಬೆನ್ ಗಿಬ್ಸನ್ಗೆ ಜನಿಸಿರುವ ಮಗು. ಮೊಲ್ಲಿ ಗಿಬ್ಸನ್ ಎಂದು ಹೆಸರಿಡಲಾದ ಒಂದು ತಿಂಗಳಿನ ಈ ಮಗುವಿನ ವಿಶೇಷವೆಂದರೆ 27 ವರ್ಷಗಳಲ್ಲಿ ಯಾವಾಗಬೇಕಾದರೂ ಈ ಮಗು ಜನಿಸಬಹುದಿತ್ತು. ಅದು ಹೇಗೆ ಎಂದು ಹುಬ್ಬೇರಿಸುವವರಿಗೆ ಉತ್ತರ ಇಲ್ಲಿದೆ.
ಅಮೆರಿಕಾದ ಟೀನಾ ಮತ್ತು ಬೆನ್ ಗಿಬ್ಸನ್ ಹಲವು ವರ್ಷಗಳಿಂದ ಮಗುವಿಗಾಗಿ ದೇವರಲ್ಲಿ ಪ್ರತಿನಿತ್ಯ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದರು. ಟೀನಾ ತನ್ನ ಬಂಜೆತನದಿಂದಾಗಿ ಬೇಸತ್ತು ಹೋಗಿದ್ದರು. ಆದರೆ ಈಗ ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಕುಟುಂಬದಲ್ಲಿ ಸಂತೋಷ ಸೃಷ್ಟಿಯಾಗಿದೆ. ವೈದ್ಯಕೀಯ ಲೋಕದಲ್ಲಿನ ಈ ಪ್ರಗತಿಗೆ ದಂಪತಿ ಧನ್ಯವಾದ ಹೇಳಿದ್ದಾರೆ.
1992ರ ಅಕ್ಟೋಬರ್ನಲ್ಲಿ ಹೆಪ್ಪುಗಟ್ಟಿದ ಭ್ರೂಣದಿಂದ ಒಂದು ತಿಂಗಳ ಹಿಂದೆಯಷ್ಟೇ ಮೊಲ್ಲಿ ಜನಿಸಿದಳು. 3 ಕೆ.ಜಿ ತೂಕ ಹೊಂದಿರುವ ಮೊಲ್ಲಿ ಈಗಾಗಲೇ ಇತಿಹಾಸವನ್ನು ನಿರ್ಮಿಸಿದ್ದಾಳೆ. ಹೆಪ್ಪುಗಟ್ಟಿದ ಸ್ಥಿತಿಯಲ್ಲಿದ್ದ ಭ್ರೂಣ 27 ವರ್ಷಗಳ ಕಾಲ ಹಾಗೆಯೇ ಇದ್ದು, ನಂತರ ಜನ್ಮ ಪಡೆದಿರುವುದರಿಂದ ವಿಶ್ವ ದಾಖಲೆ ಮಾಡಿದೆ.
ಮೊಲ್ಲಿ ಸಹೋದರಿ ಎಮ್ಮಾ 2017ರಲ್ಲಿ ದಾಖಲೆ ಬರೆದಿದ್ದರು, ಸದ್ಯ ಮೊಲ್ಲಿ ಅಕ್ಕನ ದಾಖಲೆ ಮುರಿದು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ ಎಂದು ಸಿಎನ್ಎನ್ ವರದಿ ತಿಳಿಸಿದೆ.
ಇಷ್ಟು ದಿನಗಳ ಕಾಲ ಮಗುವಿನ ನಿರೀಕ್ಷೆಯಲ್ಲಿ ಇದ್ದೆವು. ಈಗ ನಾವು ಮಗುವನ್ನು ಪಡೆದಿದ್ದೇವೆ. ಆ ಸನ್ನಿವೇಶವನ್ನು ನಾವು ಪ್ರತಿ ಕ್ಷಣ ನೆನಸುತ್ತಿದ್ದೇವೆ ಎಂದು ಟೀನಾ ಹೇಳಿದರು.
ಟೀನಾ ಮತ್ತು ಬೆನ್ ಗಿಬ್ಸನ್ ಭ್ರೂಣ ದತ್ತು ಪಡೆಯುವಿಕೆ ಪ್ರಕ್ರಿಯೆಯ ಮೂಲಕ ಪೋಷಕರಾದವರು. ಹೆಪ್ಪುಗಟ್ಟಿದ ಭ್ರೂಣಗಳನ್ನು ಸಂಗ್ರಹಿಸುವ ಲಾಭೋದ್ದೇಶವಿಲ್ಲದ ನಾಕ್ಸ್ವಿಲ್ಲೆಯಲ್ಲಿನ ರಾಷ್ಟ್ರೀಯ ಭ್ರೂಣ ದಾನ ಕೇಂದ್ರದ (NEDC) ಸಹಾಯದಿಂದ ಇದು ಸಂಭವಿಸಿತು.
ಇದು ಖಂಡಿತವಾಗಿಯೂ ವರ್ಷಗಳ ಹಿಂದೆ ಬಳಸಿದ ತಂತ್ರಜ್ಞಾನ ಮತ್ತು ಭವಿಷ್ಯದ ಬಳಕೆಗಾಗಿ ಭ್ರೂಣಗಳನ್ನು ಅನಿರ್ದಿಷ್ಟ ಸಮಯದೊಳಗೆ ಸಂರಕ್ಷಿಸುವ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಎನ್ಇಡಿಸಿಯ ನಿರ್ದೇಶಕ ಕರೋಲ್ ಸೊಮರ್ಫೆಲ್ಟ್ ಉಲ್ಲೇಖಿಸಿದ್ದಾರೆ.
ಚಿತ್ತರಂಜನ್ ಸರ್ಕಲ್ ಬಳಿ ಕಸದ ಬುಟ್ಟಿಗೆ ನವಜಾತ ಶಿಶು ಎಸೆದುಹೋದ ಪಾಪಿ ತಾಯಿ