ಲಸಿಕೆ ಸಿಗೋ ಮುನ್ನ ಸಜ್ಜಾಗ್ತಿದೆ ‘ಕೊರೊನಾ ಮಾಫಿಯಾ’: ಭಾರತಕ್ಕೆ ಇಂಟರ್‌ಪೋಲ್ ಎಚ್ಚರಿಕೆ
ಕೊರೊನಾ ಲಸಿಕೆ ಇನ್ನೂ ಜನಸಾಮಾನ್ಯರ ಕೈಸೇರುವ ಮುನ್ನ ಅದರ ಸುತ್ತ ನಡೆಯಬಹುದಾದ ಅಪರಾಧ ಕೃತ್ಯಗಳ ಬಗ್ಗೆ ಅಂತಾರಾಷ್ಟ್ರೀಯ ಪೊಲೀಸ್ ಸಂಸ್ಥೆ ಇಂಟರ್‌ಪೋಲ್ ಎಚ್ಚರಿಕೆ ನೀಡಿದೆ. ಕೊರೊನಾ ಲಸಿಕೆ ಸಂಬಂಧ ಇಂಟರ್‌ಪೋಲ್ ಎಚ್ಚರಿಕೆ ನೀಡಿದೆ.

ಕೊರೊನಾ ಲಸಿಕೆ (ಎಡ); ಇಂಟರ್‌ಪೋಲ್ ಸಂಸ್ಥೆ (ಬಲ)
ದೆಹಲಿ: ಕೊರೊನಾ ಲಸಿಕೆ ಇನ್ನೂ ಜನಸಾಮಾನ್ಯರ ಕೈಸೇರುವ ಮುನ್ನ ಅದರ ಸುತ್ತ ನಡೆಯಬಹುದಾದ ಅಪರಾಧ ಕೃತ್ಯಗಳ ಬಗ್ಗೆ ಅಂತಾರಾಷ್ಟ್ರೀಯ ಪೊಲೀಸ್ ಸಂಸ್ಥೆ ಇಂಟರ್‌ಪೋಲ್ ಎಚ್ಚರಿಕೆ ನೀಡಿದೆ. ಕೊರೊನಾ ಲಸಿಕೆ ಸಂಬಂಧ ಇಂಟರ್‌ಪೋಲ್ ಎಚ್ಚರಿಕೆ ನೀಡಿದೆ.
ಕೊರೊನಾ ಲಸಿಕೆ ಲಭ್ಯವಾಗುವ ಬೆನ್ನಲ್ಲೇ ಮಾಫಿಯಾ ಸೃಷ್ಟಿಯಾಗುವ ಎಚ್ಚರಿಕೆ ನೀಡಿದೆ. ಭಾರತ ಸೇರಿ ತನ್ನ 194 ಸದಸ್ಯ ರಾಷ್ಟ್ರಗಳಿಗೆ ಎಚ್ಚರಿಕೆ ಕೊಟ್ಟಿದೆ. ಆನ್‌ಲೈನ್‌ನಲ್ಲಿ ಲಸಿಕೆ ಸಂಬಂಧಿತ ಅಪರಾಧಗಳು ಹೆಚ್ಚಳವಾಗುವ ಜೊತೆಗೆ ಸಂಘಟಿತ ಅಪರಾಧಗಳೂ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಇಂಟರ್‌ಪೋಲ್ ಎಚ್ಚರಿಕೆ ನೀಡಿದೆ.



