ವಿದೇಶದಲ್ಲೂ ನಡೆಯುತ್ತೆ ಇಂಥಾ ದುಂಡಾವರ್ತನೆ.. ಪಿರಮಿಡ್​ ಎದುರು ಫೋಟೋಶೂಟ್!

ಐತಿಹಾಸಕ ಸ್ಮಾರಕಗಳು, ಪುರಾತನ ದೇವಾಲಯಗಳಲ್ಲಿ ಭದ್ರತೆ ಮತ್ತು ಸಂರಕ್ಷಣೆಯ ದೃಷ್ಟಿಯಿಂದ ಫೋಟೋಶೂಟ್​ ಮಾಡಲು ನಿಷೇಧಿಸಿರುತ್ತಾರೆ. ಇದೀಗ ಈಜಿಪ್ಟಿನ ಪಿರಮಿಡ್ಡೊಂದರ ಮುಂದೆ ಖಾಸಗಿ ಫೋಟೋಶೂಟ್ ಮಾಡಿದ ಕಾರಣ ತಾರೆಯೋರ್ವರು ಬಂಧಿಸಲ್ಪಟ್ಟಿದ್ದಾರೆ.

ವಿದೇಶದಲ್ಲೂ ನಡೆಯುತ್ತೆ ಇಂಥಾ ದುಂಡಾವರ್ತನೆ.. ಪಿರಮಿಡ್​ ಎದುರು ಫೋಟೋಶೂಟ್!
ಪಿರಮಿಡ್ ಎದುರು ಪೋಸ್ ಕೊಟ್ಟವಳು..
Follow us
guruganesh bhat
| Updated By: ಸಾಧು ಶ್ರೀನಾಥ್​

Updated on:Dec 03, 2020 | 1:00 PM

ಐತಿಹಾಸಕ ಸ್ಮಾರಕಗಳು, ಪುರಾತನ ದೇವಾಲಯಗಳಲ್ಲಿ ಭದ್ರತೆ ಮತ್ತು ಸಂರಕ್ಷಣೆಯ ದೃಷ್ಟಿಯಿಂದ ಫೋಟೋಶೂಟ್​ ಮಾಡಲು ನಿಷೇಧಿಸಿರುತ್ತಾರೆ. ಆದರೆ, ಅಂತಹದ್ದೇ ಸ್ಥಳಗಳಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುವವರಿಗೇನೂ ಕಡಿಮೆಯಿಲ್ಲ. ಅಂತ ದುಂಡಾವರ್ತನೆಗಳು ನಮ್ಮ ದೇಶದಲ್ಲೊಂದೇ ಆಗುತ್ತವೆ ಎಂದು ಭಾವಿಸಿರುತ್ತೇವೆ. ಆದರೆ ಇತರ ದೇಶಗಳಲ್ಲೂ ಇದು ನಡೆಯುತ್ತದೆ ಎಂಬುದಕ್ಕೆ ತಾಜಾ ಉದಾಹರಣೆಯೊಂದು ದೊರೆತಿದೆ.

ಪಿರಮಿಡ್ ಎದುರು ಪೋಸ್ ಕೊಟ್ಟಳು..

ಈಜಿಪ್ಟಿನ ಪಿರಮಿಡ್​ಗಳು ಯಾರಿಗೆ ತಾನೆ ಗೊತ್ತಿಲ್ಲ? ಐತಿಹಾಸಿಕ ಪಿರಮಿಡ್​ನ ಎದುರು ಖಾಸಗಿ ಫೋಟೋಶೂಟ್ ಮಾಡಿದ ಇನ್ಸ್​​ಟಾಗ್ರಾಂ ತಾರೆ ಮತ್ತು ಆಕೆಯ ಫೋಟೋಗ್ರಾಫರ್​ನನ್ನು ಈಜಿಪ್ಟಿನ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ಸಲ್ಮಾ ಅಲ್ ಶಿಮಿ ಮತ್ತು ಫೋಟೋಗ್ರಾಫರ್ ಹೌಸಮ್ ಮೊಹಮದ್ ಬಂಧಿತರು. ಆದರೆ, ಸಲ್ಮಾ ಅಲ್ ಶಿಮಿ, ತಾನು ದೇಶದ ಪ್ರವಾಸೋದ್ಯಮವನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಫೋಟೋಶೂಟ್ ಮಾಡಿಸಿದ್ದಾಗಿ ಸಮಜಾಯಿಷಿ ಹೇಳಿಕೊಂಡಿದ್ದಾರೆ.

ಅದು 4,700 ವರ್ಷ ಹಳೆಯ ಪಿರಾಮಿಡ್!

ಅದು 4,700 ವರ್ಷ ಪುರಾತನ ಜೋಸರ್ ಪಿರಾಮಿಡ್​ನ ಎದುರು ಅವರು ಪ್ರಚೋದನಕಾರಿ ಬಟ್ಟೆ ಧರಿಸಿ ಪ್ರಚೋದನಕಾರಿಯಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಅಲ್ಲದೇ, ಪರವಾನಿಗೆಯನ್ನೂ ಹೊಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ನಡೆಸಿರುವ ನ್ಯಾಯಾಲಯ ತಲಾ 32 ಡಾಲರ್ ದಂಡ ವಿಧಿಸಿ ಇಬ್ಬರನ್ನೂ ಜಾಮೀನಿನ ಮೇಲೆ ಬಿಟ್ಟುಕಳುಹಿಸಿದೆ.

ಈಜಿಪ್ಟಿನ ಕಾನೂನಿನ ಪ್ರಕಾರ ದೇಶದ ಇತಿಹಾಸ,ಸಂಸ್ಕೃತಿಯನ್ನು ಬಿಂಬಿಸುವ ಸ್ಮಾರಕಗಳನ್ನು ಹಾನಿಗೊಳಿಸುವುದು ಗಂಭೀರ ಅಪರಾಧ. ಐತಿಹಾಸಿಕ ಸ್ಮಾರಕಗಳ ಎದುರು ಅಸಭ್ಯವಾಗಿ ವರ್ತಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಜೀಪ್​ ಮೇಲೆ ಕೂತು ಪೋಸ್​ ಕೊಟ್ಟ ಚೆಲುವೆ.. ಯಾರು ಈ ಬೆಳದಿಂಗಳ ಬಾಲೆ?

Published On - 11:50 am, Thu, 3 December 20

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ