AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾಹ್ಯಾ ಮುಜಾಹಿದ್​ಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ತಾನ ಕೋರ್ಟ್​

ಯಾಹ್ಯಾ ಮುಜಾಹಿದ್​ಗೆ 15 ವರ್ಷಗಳ ಜೈಲು ಶಿಕ್ಷೆಯನ್ನು ಪಾಕಿಸ್ಥಾನದ ಭಯೋತ್ಪಾದನ ವಿರೊಧಿ ನ್ಯಾಯಾಲಯವು (Anti Terrorism Court) ವಿಧಿಸಿದೆ.

ಯಾಹ್ಯಾ ಮುಜಾಹಿದ್​ಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ತಾನ ಕೋರ್ಟ್​
ನಿಷೇಧಿತ ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ (ಸಂಗ್ರಹ ಚಿತ್ರ)
sandhya thejappa
| Edited By: |

Updated on:Dec 03, 2020 | 7:30 PM

Share

ಲಾಹೋರ್: ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಪ್ರಕರಣವೊಂದರಲ್ಲಿ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್​ ನೇತೃತ್ವದ ಜಮಾತ್-ಉದ್-ದವಾ ಸಂಘಟನೆಯ ವಕ್ತಾರ ಯಾಹ್ಯಾ ಮುಜಾಹಿದ್​ಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು (Anti Terrorism Court) 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಭಯೋತ್ಪಾದನಾ ನಿಗ್ರಹ ಕಾಯ್ದೆ 1997ರ ವಿವಿಧ ಪರಿಚ್ಛೇದಗಳ ಅಡಿಯಲ್ಲಿ ನ್ಯಾಯಧೀಶ ಇಜಾಜ್ ಅಹ್ಮದ್ ಬುಟ್ಟರ್ ತೀರ್ಪು ನೀಡಿದರು.

ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಇನ್ನೆರೆಡು ಪ್ರಕರಣಗಳಲ್ಲಿ ಮುಜಾಹಿದ್​ಗೆ ಕಳೆದ ತಿಂಗಳು ಎಟಿಸಿ 32 ವರ್ಷಗಳ ಸಾಮೂಹಿಕ ಜೈಲು ಶಿಕ್ಷೆ ವಿಧಿಸಿತ್ತು. ಇದೇ ಸಂಘಟನೆಯ ಹಿರಿಯ ನಾಯಕ ಜಾಫರ್ ಇಕ್ಬಾಲ್​ಗೆ 15 ವರ್ಷ ಮತ್ತು ಮುಖ್ಯಸ್ಥ ಹಫೀಜ್ ಸಯೀದ್​ನ ಸೋದರ ಮಾವ ಪ್ರೋ. ಹಫೀಜ್ ಅಬ್ದುಲ್ ರೆಹಮಾನ್ ಮಕ್ಕಿಗೆ ಆರು ತಿಂಗಳ ಕಾಲ ಜೈಲು ಶಿಕ್ಷೆಯನ್ನು ನೀಡಿದೆ. ಇದಕ್ಕೂ ಮೊದಲು ಎಟಿಸಿ ಇಕ್ಬಾಲ್​ಗೆ ಇಂತಹ ಮೂರು ಪ್ರಕರಣಗಳಿಗೆ ಸಂಬಂಧಿಸಿ ಒಟ್ಟು 26 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ತೀರ್ಪು ಪ್ರಕಟಿಸುವಾಗ ಮೂರು ಜನ ಆರೋಪಿಗಳು ಹಾಜರಿದ್ದರು. ಭಯೋತ್ಪಾದನಾ ನಿಗ್ರಹ ಇಲಾಖೆಯು ಸಯೀದ್​ ಸೇರಿದಂತೆ ಜಮಾತ್ ಉದ್ ದವಾ ಸೇರಿದಂತೆ ಹಲವು ನಾಯಕರ ವಿರುದ್ಧ ಒಟ್ಟು 41 ಎಫ್ಐಆರ್ ದಾಖಲಿಸಿದೆ. ಇದರಲ್ಲಿ ವಿಚಾರಣಾ ನ್ಯಾಯಾಲಯಗಳು 25 ಪ್ರಕರಣಗಳನ್ನು ಇತ್ಯರ್ಥಪಡಿಸಿದೆ.

Published On - 7:29 pm, Thu, 3 December 20