ತುಮಕೂರು, (ಏಪ್ರಿಲ್ 03): ಸರ್ಕಾರಿ ನೌಕರನೋರ್ವ (government employee) ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಬಳಿಕ ತಾನು ಸಹ ಆತ್ಮಹತ್ಯೆ (Suiicde) ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ. ಘಟನೆ ನಡೆದ 24 ಗಂಟೆಯಲ್ಲೇ ತುಮಕೂರಿನಲ್ಲಿ (Tumakuru) ಮಹಿಳೆಯೋರ್ವಳು(Woman) ತನ್ನಿಬ್ಬರು ಮಕ್ಕಳ ಜತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಾಯಿ ವಿಜಯಲಕ್ಷ್ಮೀ(45), ಮಗಳು ಚೂಡಾಮಣಿ(23), ಪುತ್ರ ನರಸಿಂಹರಾಜು(14) ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅದಲಗೆರೆ ಗ್ರಾಮದಲ್ಲಿ ಈ ದುರಂತ ನಡೆದಿದೆ.
ಪತಿ ಮಹದೇವಯ್ಯ ಮನೆಯಲ್ಲಿ ಇಲ್ಲದಿದ್ದಾಗ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರು ಮಕ್ಕಳ ಅಂಗವಿಕಲರಾಗಿರುವ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದ್ರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಚೇಳೂರು ಠಾಣೆ ಪೊಲೀಸರ ಭೇಟಿ ತನಿಖೆ ಕೈಗೊಂಡಿದ್ದಾರೆ.
ಚಿತ್ರದುರ್ಗ: ಇನ್ನೊಂದೆಡೆ ಚಿತ್ರದುರ್ಗದ ತುಮಕೂರ್ಲಹಳ್ಳಿಯ ಮನೆಯೊಂದರಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ವಿದ್ಯುತ್ ತಂತಿ ಸ್ಪರ್ಶಿಸಿದ್ದ ಕಂದನ ರಕ್ಷಣೆಗೆ ತೆರಳಿದ ತಾಯಿಯೂ ಸಹ ದುರಂತ ಸಾವು ಕಂಡಿದ್ದಾಳೆ. ತಾಯಿ ಬೋರಮ್ಮ(25), ಪುತ್ರ ಪ್ರಣೀತ್(3) ಮೃತ ದುರ್ದೈವಿಗಳು. ಮೊದಲಿಗೆ ಮಗುವಿಗೆ ವಿದ್ಯುತ್ ತಂತಿ ಸ್ಪರ್ಶಿಸಿದೆ. ಅದನ್ನು ನೋಡಿ ರಕ್ಷಣೆಗೆಂದು ಹೋಗಿದ್ದಾಗ ತಾಯಿ ಬೋರಮ್ಮಳಿಗೂ ಸಹ ವಿದ್ಯುತ್ ಸ್ಪರ್ಶಿಸಿದೆ. ಇದರಿಂದ ತಾಯಿ- ಮಗ ಮೃತಪಟ್ಟಿದ್ದಾರೆ. ಈ ಬಗ್ಗೆ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿವೈಎಸ್ಪಿ ರಾಜಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಹೆಂಡತಿ ಮೇಲಿನ ಸಿಟ್ಟಿಗೆ ವ್ಯಕ್ತಿಯೋರ್ವ ಅತ್ತೆ, ನಾದಿನಿ ಮತ್ತು ಮಗಳನ್ನು ಗುಂಡು ಹಾರಿಸಿ ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಮಾಗಲು ಗ್ರಾಮದಲ್ಲಿ ಭಯಾನಕ ಘಟನೆ ನಡೆದಿದ್ದು, ಈ ಘಟನೆಯಿಂದ ಇಡೀ ಊರಿಗೆ ಊರೇ ಬೆಚ್ಚಿಬಿದ್ದಿದೆ