ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ರೋಡ್‌ಶೋ ವೇಳೆ ಭದ್ರತಾ ಲೋಪ; ಯುವಕನನ್ನು ಸೆರೆಹಿಡಿಯಲು ಬಲೆ ಬೀಸಿದ ಪೊಲೀಸ್

ಮೋದಿಗೆ ಹಾರ ಹಾಕಲು ಕಂಬಿಗಳ ಮಧ್ಯೆಯಿಂದ ಈತ ನುಸುಳಿ ಬಂದಿದ್ದ. ಕಂಬಿಗಳ ನಡುವೆಯಿಂದ ಓಡುತ್ತಾ ಬಂದಿದ್ದ ಯುವಕನನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ.

ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ರೋಡ್‌ಶೋ ವೇಳೆ ಭದ್ರತಾ ಲೋಪ; ಯುವಕನನ್ನು ಸೆರೆಹಿಡಿಯಲು ಬಲೆ ಬೀಸಿದ ಪೊಲೀಸ್
ಮೋದಿಯವರ ರೋಡ್ ಶೋ ವೇಳೆ ಭದ್ರತಾ ಲೋಪ
Updated By: ರಶ್ಮಿ ಕಲ್ಲಕಟ್ಟ

Updated on: Jan 12, 2023 | 5:31 PM

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ(Hubballi) ನಡೆದ ರೋಡ್‌ಶೋ ವೇಳೆ ಯುವಕನೊಬ್ಬ ಪ್ರಧಾನಿ ಮೋದಿಯವರಿಗೆ (PM Modi) ಹಾರ ಹಾಕಲು ಭದ್ರತಾ ವಲಯವನ್ನು ಉಲ್ಲಂಘಿಸಿದ ಘಟನೆ ನಡೆದಿದೆ. ಪ್ರಧಾನಿ  ಮೋದಿ ಜನರತ್ತ ಕೈ ಬೀಸಿ ಬರುತ್ತಿದ್ದಾಗ ಯುವಕನೊಬ್ಬ ಓಡಿ ಬಂದು ಪ್ರಧಾನಿಯವರಿಗೆ ಹಾರ ಹಾಕಲು ಯತ್ನಿಸಿದ್ದಾನೆ. ತಕ್ಷಣವೇ ಪೊಲೀಸರು ಆತನನ್ನು ಹಿಡಿದು ಪಕ್ಕಕ್ಕೆ ಸರಿಸಿದ್ದಾರೆ. ಆತ ತಂದಿದ್ದ ಹಾರವನ್ನು ಮೋದಿ ಸ್ವೀಕರಿಸುತ್ತಿರುವುದನ್ನುವಿಡಿಯೊದಲ್ಲಿ ಕಾಣಬಹುದು.

ಮೋದಿಗೆ ಹಾರ ಹಾಕಲು ಬಂದಿದ್ದ ಯುವಕ ಹುಬ್ಬಳ್ಳಿ ಕಮರಿಪೇಟೆ ನಿವಾಸಿ ಎಂಬ ಮಾಹಿತಿ ಟಿರ್ವಿಗೆ ಲಭ್ಯವಾಗಿದೆ. ಮೋದಿಗೆ ಹಾರ ಹಾಕಲು ಕಂಬಿಗಳ ಮಧ್ಯೆಯಿಂದ ಈತ ನುಸುಳಿ ಬಂದಿದ್ದ. ಕಂಬಿಗಳ ನಡುವೆಯಿಂದ ಓಡುತ್ತಾ ಬಂದಿದ್ದ ಯುವಕನನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ.
ಹುಬ್ಬಳ್ಳಿಯ ಗೋಕುಲ ರಸ್ತೆ ಬಳಿ ಭದ್ರತಾ ಲೋಪ ನಡೆದಿದ್ದು, ಈತನನ್ನು ಸೆರೆ ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ