AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikkaballapur News: ಸ್ನೇಹಿತನ ಕಿರುಕುಳಕ್ಕೆ ಪ್ರಾಣಬಿಟ್ಟ, ಡೆತ್ ನೋಟ್ ಪತ್ತೆ

ಚಿಕ್ಕಬಳ್ಳಾಪುರದಲ್ಲಿ ಯುವಕ ಆತ್ಮಹತ್ಯೆ, ರಾಯಚೂರಿನಲ್ಲಿ ಮಹಿಳೆ ಸಾವು, ಮೈಸೂರಿನಲ್ಲಿ ಮಣ್ಣು ಕುಸಿದು ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ಈ ಎಲ್ಲಾ ಸುದ್ದಿ ವಿವರ ಇಲ್ಲಿದೆ.

Chikkaballapur News: ಸ್ನೇಹಿತನ ಕಿರುಕುಳಕ್ಕೆ ಪ್ರಾಣಬಿಟ್ಟ, ಡೆತ್ ನೋಟ್ ಪತ್ತೆ
ಪೃಥ್ವಿರಾಜ್ ಆತ್ಮಹತ್ಯೆಗೆ ಶರಣಾದ ಯುವಕ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ರಮೇಶ್ ಬಿ. ಜವಳಗೇರಾ|

Updated on: Jul 17, 2023 | 9:36 AM

Share

ಚಿಕ್ಕಬಳ್ಳಾಪುರ, (ಜುಲೈ 17): ಸಾಲಗಾರನ ಕಿರುಕುಳಕ್ಕೆ ಬೇಸತ್ತು ಯುವಕನೋರ್ವ ಡೆತ್​​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಉಡಮಲೊಡು ಗ್ರಾಮದಲ್ಲಿ ನಡೆದಿದೆ. ಹೆಚ್.ಕೆ.ಪೃಥ್ವಿರಾಜ್(26) ಆತ್ಮಹತ್ಯೆಗೆ ಶರಣಾದ ಯುವಕ. ಮನೆಯಲ್ಲೇ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಡ್ಡಿ ಸಮೇತ ಕೈಸಾಲ ವಾಪಸ್ ನೀಡುವಂತೆ ಸ್ನೇಹಿತನ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಡೆತ್​ನೋಟ್​ ಸಹ ಪತ್ತೆಯಾಗಿದ್ದು. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿದ್ಯುತ್ ಪ್ರವಹಿಸಿ ಮಹಿಳೆ ಸಾವು

ರಾಯಚೂರು: ವಿದ್ಯುತ್ ಪ್ರವಹಿಸಿ ಮಹಿಳೆ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕೋಣಚಪ್ಪಳಿ ಗ್ರಾಮದಲ್ಲಿ ನಡೆದಿದೆ. ನಿನ್ನೆ (ಜುಲೈ 16) ಸಂಜೆ ಮಳೆಯಾದ ಹಿನ್ನೆಲೆ ಟಿನ್ ಶೆಡ್​ಗೆ ವಿದ್ಯುತ್​ ಪ್ರವಹಿಸಿ ಲಕ್ಷ್ಮೀ(36) ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮನೆ ಬಳಿಯ ವಿದ್ಯುತ್ ಲೈನ್ ಮೂಲಕ ಟಿನ್ ಶೆಡ್ ಗೆ ವಿದ್ಯುತ್ ಪಸರಿಸಿದ್ದು, ಅದೇ ವೇಳೆ ಹೊಲದಿಂದ ಬಂದು ಮನೆಯೊಳಗೆ ಹೋಗುತ್ತಿದ್ದಂತೆ ವಿದ್ಯುತ್​ ತಗುಲಿದೆ.

ಮಣ್ಣು ಕುಸಿದು ಓರ್ವ ಸಾವು

ಮೈಸೂರು: ಕೇಸಿಂಗ್ ಪೈಪ್ ಅಳವಡಿಸುವಾಗ ಮಣ್ಣು ಕುಸಿದು ಓರ್ವ ಸಾವನ್ನಪ್ಪಿದ್ದು ಇಬ್ಬರಿಗೆ ಗಾಯವಾಗಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಸುಜಲೂರು ಗ್ರಾಮದಲ್ಲಿ‌ ನಡೆದಿದೆ. ಮಹೇಶ್(34) ಮೃತ ದುರ್ದೈವಿಯಾಗಿದ್ದು, ನಿಂಗಪ್ಪ, ಮಾಧು ಎಂಬುವರಿಗೆ ಗಾಯಗಳಾಗಿವೆ. ಕೊಳವೆ ಬಾವಿಯ ಕೇಸಿಂಗ್ ಪೈಪ್ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ನಿಂಗಪ್ಪ ಜಮೀನಿನಲ್ಲಿ ಪೈಪ್ ಅಳವಡಿಸುವಾಗ ಈ ದುರಂತ ಸಂಭವಿಸಿದೆ. ಗಾಯಾಳು ನಿಂಗಪ್ಪ, ಮಾಧುಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನಷ್ಟು ಕರ್ನಾಟಕ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ