ಬೆಳಗಾವಿ: ಸದಲಗಾ ಪೊಲೀಸ್ ಠಾಣೆಯ ಮೇಲೆ ರಾತ್ರಿ ಎಸಿಬಿ ದಾಳಿ ನಡೆಸಿದೆ. ಲಂಚ ಪಡೆಯುತ್ತಿದ್ದ ಪಿಎಸ್‌ಐ, ಇಬ್ಬರು ಪಿಸಿಗಳು ಬಲೆಗೆ ಬಿದ್ದಿದ್ದಾರೆ. ಸದಲಗಾ ಪೊಲೀಸ್ ಠಾಣೆ ಎಸ್‌ಐ ಕುಮಾರ್ ಹಿತ್ತಲಮನಿ ಕಾನ್ಸ್‌ಟೇಬಲ್ ಮಾಯಪ್ಪ ಗಡ್ಡೆ, ಶ್ರೀಶೈಲ ಮಂಗಿ ಬಲೆಗೆ ಬಿದ್ದ ಪೊಲೀಸರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಠಾಣೆಯಲ್ಲಿ ಪೊಲೀಸರು ಅಮಾಯಕರ ಬಳಿ ಹಣ ವಸೂಲಿಗೆ ಮುಂದಾಗಿದ್ದರು. ಅನಧಿಕೃತ ಪಾನ್ ಮಸಾಲ ಕಾರ್ಖಾನೆ ನಡೆಸುತ್ತಿದ್ದಿರಿ ಎಂದು ಹೆದರಿಸಿ ಬೋರಗಾಂವ್‌ನಲ್ಲಿರುವ ಪಾನ್ ಮಸಾಲ ಕಾರ್ಖಾನೆ ಮಾಲೀಕ ರಾಜು ಪಾಶ್ಚಾಪುರೆ ಬಳಿ ₹50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ನೊಂದ ರಾಜು ಪಾಶ್ಚಾಪುರೆ ಈ ಬಗ್ಗೆ ಎಸಿಬಿಗೆ ದೂರು ನೀಡಿದ್ದರು. ಅದರಂತೆ ತಡರಾತ್ರಿ 40 ಸಾವಿರ ರೂ. ಪಡೆಯುವಾಗ ಎಸಿಬಿ ದಾಳಿ ನಡೆದಿದ್ದು ಪಿಎಸ್‌ಐ, ಇಬ್ಬರು ಪಿಸಿಗಳು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ರಕ್ಷಿಸಬೇಕಾದವರೆ ಹೆದರಿಸಿ, ಬೆದರಿಸಿ ಹಣ ವಸೂಲಿಗೆ ಮುಂದಾಗಿದ್ದು ಮಾತ್ರ ವಿಪರ್ಯಾಸ. ಸದ್ಯ ಇಂತಹ ಲಂಚಬಾಕರ ಕೃತ್ಯವನ್ನು ಪಾನ್ ಮಸಾಲ ಕಾರ್ಖಾನೆ ಮಾಲೀಕ ರಾಜು ಬಯಲು ಮಾಡಿದ್ದಾರೆ.
ಇದನ್ನೂ ಓದಿ: ಆಸ್ತಿಗಾಗಿ ಅಪ್ಪನನ್ನು ಮನೆಯಿಂದ ಹೊರಹಾಕಿದ್ದ ಮಗ ಅರೆಸ್ಟ್; ಸ್ವಯಂ ಪ್ರೇರಿತ ದೂರು ದಾಖಲಿಸಿ ಬಂಧಿಸಿದ ಪೊಲೀಸರು