ಟೆಕ್ಕಿ ಕಿತಾಪತಿ: ಸ್ನೇಹಿತನ ಐಷಾರಾಮಿ ಕಾರಿನಲ್ಲಿ ಅತಿವೇಗದ ಚಾಲನೆ, ಬೈಕ್ ನಜ್ಜುಗುಜ್ಜಾಯಿತು!

| Updated By: ಸಾಧು ಶ್ರೀನಾಥ್​

Updated on: Mar 06, 2021 | 11:17 AM

ಓವರ್ ಸ್ಪೀಡ್​ನಲ್ಲಿದ್ದ ಆಡಿ ಕಾರು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಜ್ಜುಗುಜ್ಜಾಗಿದೆ. ಬೈಕ್ ಸವಾರನಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ. ಸದ್ಯ ಈ ಘಟನಾ ಸಂಬಂಧ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟೆಕ್ಕಿ ಕಿತಾಪತಿ: ಸ್ನೇಹಿತನ ಐಷಾರಾಮಿ ಕಾರಿನಲ್ಲಿ ಅತಿವೇಗದ ಚಾಲನೆ, ಬೈಕ್ ನಜ್ಜುಗುಜ್ಜಾಯಿತು!
ಆಡಿ ಕಾರು ಮತ್ತು ನಜ್ಜುಗುಜ್ಜಾದ ಬೈಕ್
Follow us on

ಬೆಂಗಳೂರು: ಐಷಾರಾಮಿ ಕಾರಿನಲ್ಲಿ ಅತಿವೇಗ ಚಾಲನೆಯಿಂದ ಅಪಘಾತ ಸಂಭವಿಸಿರುವ ಘಟನೆ ಬೆಂಗಳೂರಿನ ಕಾವೇರಿ ಜಂಕ್ಷನ್ ಅಂಡರ್ ಪಾಸ್​ನಲ್ಲಿ ನಡೆದಿದೆ. ಸಾಫ್ಟ್​ವೇರ್​ ಇಂಜಿನಿಯರ್ ಅಕ್ಷಯ್ ಕುಮಾರ್ ಎಂಬಾತ ಸ್ನೇಹಿತನ ಕಾರು ಪಡೆದು ಅತಿ ವೇಗವಾಗಿ ಹೋಗುತ್ತಿದ್ದರು. ಇದೇ ವೇಳೆ ಬೈಕ್ ಸವಾರ ಶಿವಕುಮಾರ್ ಎಂಬಾತನಿಗೆ ಡಿಕ್ಕಿ ಹೊಡೆದಿದ್ದಾರೆ.

ಓವರ್ ಸ್ಪೀಡ್​ನಲ್ಲಿದ್ದ ಆಡಿ ಕಾರು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಜ್ಜುಗುಜ್ಜಾಗಿದೆ. ಬೈಕ್ ಸವಾರನಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ. ಸದ್ಯ ಈ ಘಟನಾ ಸಂಬಂಧ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಡಿ ಕಾರು

ವೀಡಿಯೋ ಮಾಡಲು ಹೋದ ಟ್ರಾಫಿಕ್ ಪೊಲೀಸ್ ಜಸ್ಟ್ ಮಿಸ್
ಅಜಾಗರುಕತೆಯಿಂದ ವೀಡಿಯೋ ಮಾಡಲು ಹೋದ ಟ್ರಾಫಿಕ್ ಪೊಲೀಸ್ ಕೂದಲೆಳೆಯಲ್ಲಿ ಪಾರಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ-ಉಜಿರೆ ರಸ್ತೆಯಲ್ಲಿ ನಡೆದಿದೆ. ಅಟೋ ಚಾಲಕನಿಗೆ ಫೈನ್ ಹಾಕುವಾಗ ಪೊಲೀಸರು ಏಕವಚನದಲ್ಲಿ ಮಾತನಾಡಿದರು. ಇದಕ್ಕೆ ಆಟೋ ಚಾಲಕ ಏಕವಚನದಲ್ಲಿ ಮಾತನಾಡಬೇಡಿ, ಬೇಕಿದ್ದರೆ ಫೈನ್ ಹಾಕಿ ಎಂದು ಹೇಳುತ್ತಾರೆ. ಅಲ್ಲದೇ ಅಟೋ ಪ್ರಯಾಣಿಕರು ಪೊಲೀಸರನ್ನ ಪ್ರಶ್ನಿಸಿ ವೀಡಿಯೋ ಮಾಡುತ್ತಾರೆ.

ಆಟೋ ಚಾಲಕ ಮತ್ತು ಟ್ರಾಫಿಕ್ ಪೊಲೀಸ್ ನಡುವೆ ವಿವಾದ

ಈ ವೇಳೆ ಪೊಲೀಸ್ ಕಾನ್ಸ್ಟೇಬಲ್ ಅಟೋದಲ್ಲಿದ್ದವರ ವೀಡಿಯೋ ಮಾಡುತ್ತಾರೆ. ವೀಡಿಯೋ ಮಾಡುತ್ತಾ ರಸ್ತೆ ಮದ್ಯೆ ಹೋದ ಪೊಲೀಸ್ ಕಾರಿನ ಹಿಂಬದಿಯ ಚಕ್ರಕ್ಕೆ ಸಿಲುಕಿ ಕೊಳ್ಳುತ್ತಾರೆ. ಆದರೆ ಯಾವುದೇ ಪ್ರಾಣಕ್ಕೆ ಅಪಾಯ ಎದುರಾಗದೆ ಬಚಾವಾಗಿದ್ದಾರೆ.

ಇದನ್ನೂ ಓದಿ

Road Accident | ಹಾವೇರಿ, ನೆಲಮಂಗಲದಲ್ಲಿ ಪ್ರತ್ಯೇಕ ಅಪಘಾತ.. ನಜ್ಜುಗುಜ್ಜಾದ ವಾಹನದಲ್ಲಿ ಸಿಲುಕಿ ವ್ಯಕ್ತಿ ಪರದಾಟ

Mathura Road Accident | ಡಿವೈಡರ್​ಗೆ ಗುದ್ದಿದ್ದ ಆಯಿಲ್ ಟ್ಯಾಂಕರ್​ಗೆ ಕಾರು ಡಿಕ್ಕಿ, 7 ಜನರ ದುರ್ಮರಣ