Road Accident | ಹಾವೇರಿ, ನೆಲಮಂಗಲದಲ್ಲಿ ಪ್ರತ್ಯೇಕ ಅಪಘಾತ.. ನಜ್ಜುಗುಜ್ಜಾದ ವಾಹನದಲ್ಲಿ ಸಿಲುಕಿ ವ್ಯಕ್ತಿ ಪರದಾಟ

ಆಕ್ಸಿಜನ್ ಸಿಲಿಂಡರ್ ತುಂಬಿದ ಟೆಂಪೊ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು ರಸ್ತೆಯಲ್ಲಿ ಸಿಲಿಂಡರ್​ಗಳು ಚಲ್ಲಾಪಿಲ್ಲಿಯಾಗಿ ಹರಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4, ಕುಲುವನಹಳ್ಳಿ ಗ್ರಾಮದ ಬಳಿ ನಡೆದಿದೆ.

  • TV9 Web Team
  • Published On - 8:41 AM, 25 Feb 2021
Road Accident | ಹಾವೇರಿ, ನೆಲಮಂಗಲದಲ್ಲಿ ಪ್ರತ್ಯೇಕ ಅಪಘಾತ.. ನಜ್ಜುಗುಜ್ಜಾದ ವಾಹನದಲ್ಲಿ ಸಿಲುಕಿ ವ್ಯಕ್ತಿ ಪರದಾಟ
ನೆಲಮಂಗಲದ ಬಳಿ ಪಲ್ಟಿಯಾಗಿರುವ ಆಕ್ಸಿಜನ್ ಸಿಲಿಂಡರ್ ತುಂಬಿದ ಟೆಂಪೊ

ಹಾವೇರಿ: ನಿಂತಿದ್ದ ಕ್ಯಾಂಟರ್‌ಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದು ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಹಾಗೂ ಓರ್ವ ನಜ್ಜುಗುಜ್ಜಾದ ಕ್ರೂಸರ್ ವಾಹನದಲ್ಲಿ ಕಾಲು ಸಿಲುಕಿಗೊಂಡಿದ್ದು ಪರದಾಡುತ್ತಿದ್ದಾರೆ. ಗಾಯಾಳು ಸತೀಶ್ ಕಾಸರಕರ ಹೊರತೆಗೆಯಲು 108‌ ಸಿಬ್ಬಂದಿ, ಪೊಲೀಸರು ಹರ ಸಾಹಸವೇ ಮಾಡುತ್ತಿದ್ದಾರೆ. ಹಾವೇರಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಅಪಘಾತ ಸಂಭವಿಸಿದೆ.

ಉಳಿದ ಇಬ್ಬರು ಗಾಯಾಳುಗಳಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಹಾರಾಷ್ಟ್ರ ಮೂಲದ ಕ್ರೂಸರ್ ವಾಹನದಲ್ಲಿ ಬಂದ ಮಂದಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಾಪಸ್ ಊರಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟ‌ನೆ ಸಂಭವಿಸಿದೆ. ಹಾವೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಕ್ಸಿಜನ್ ಸಿಲಿಂಡರ್ ತುಂಬಿದ್ದ ಟೆಂಪೊ ಪಲ್ಟಿ
ಇನ್ನು ಆಕ್ಸಿಜನ್ ಸಿಲಿಂಡರ್ ತುಂಬಿದ ಟೆಂಪೊ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು ರಸ್ತೆಯಲ್ಲಿ ಸಿಲಿಂಡರ್​ಗಳು ಚಲ್ಲಾಪಿಲ್ಲಿಯಾಗಿ ಹರಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4, ಕುಲುವನಹಳ್ಳಿ ಗ್ರಾಮದ ಬಳಿ ನಡೆದಿದೆ. ಅದೃಷ್ಟವಶಾತ್ ಟೆಂಪೊ ಚಾಲಕ ಮತ್ತು ಸಹಾಯಕ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅತಿ ವೇಗದ ಚಾಲನೆಯೇ ಈ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Haveri Accident

ಹಾವೇರಿಯಲ್ಲಿ ನಿಂತಿದ್ದ ಕ್ಯಾಂಟರ್‌ಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದು ನಜ್ಜುಗುಜ್ಜಾಗಿದೆ.

ಇದನ್ನೂ ಓದಿ: Mathura Road Accident | ಡಿವೈಡರ್​ಗೆ ಗುದ್ದಿದ್ದ ಆಯಿಲ್ ಟ್ಯಾಂಕರ್​ಗೆ ಕಾರು ಡಿಕ್ಕಿ, 7 ಜನರ ದುರ್ಮರಣ