ಸ್ಟಾರ್ ಚಂದ್ರು ಪರ ಪ್ರಚಾರಕ್ಕಿಳಿದ ನಟ ದರ್ಶನ್, ಕುಮಾರಸ್ವಾಮಿ ಪರ ಪ್ರಚಾರ ಮಾಡದ ಸುಮಲತಾ!

|

Updated on: Apr 18, 2024 | 11:48 AM

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸುಮಲತಾ ಅವರಿಗೆ ಬಿಜೆಪಿ ಟಿಕೆಟ್ ನೀಡದೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕರ್ನಾಟಕದಲ್ಲಿ ತನ್ನ ಸಹಯೋಗಿ ಪಕ್ಷ ಜೆಡಿಎಸ್ ಗೆ ಬಿಟ್ಟುಕೊಟ್ಟಿತು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹಟಕ್ಕೆ ಬಿದ್ದಿದ್ದ ಸುಮಲತಾರೊಂದಿಗೆ ಬಿಜೆಪಿ ವರಿಷ್ಠರು ಮಾತಾಡಿ ಮನವೊಲಿಸಿದ ಬಳಿಕ ಅವರು ಪಕ್ಷ ಸೇರುವ ನಿರ್ಧಾರ ಪ್ರಕಟಿಸಿದ್ದರು.

ಬೆಂಗಳೂರು: ಏಪ್ರಿಲ್ 3 ರಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಬಿಜೆಪಿ ಸೇರುವ ಘೋಷಣೆ ಮಾಡಿದಾಗ ಅವರ ಜೊತೆ ವೇದಿಕೆ ಮೇಲಿದ್ದ ಜನಪ್ರಿಯ ನಟ ದರ್ಶನ್ (Darshan) ನಿರ್ಲಿಪ್ತರಾಗಿದ್ದರು. ಅವರಿಗೆ ಪ್ರಾಯಶಃ ತಮ್ಮ ಸುಮಮ್ಮನ ನಿರ್ಧಾರ ಇಷ್ಟವಾಗಿರಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ (Lok Sabha polls 2019) ದರ್ಶನ್, ಸುಮಲತಾ ಅವರ ಪರವಾಗಿ ಹಗಲಿರಳೆನ್ನದೆ ಪ್ರಚಾರ ಮಾಡಿದ್ದರು. ಈ ಸಲವೂ ಸುಮಲತಾ ಸ್ಪರ್ಧಿಸಿದರೆ ಅವರ ಪರ ಪ್ರಚಾರ ಮಾಡೋದಾಗಿ ದರ್ಶನ್ ಹೇಳಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸುಮಲತಾ ಅವರಿಗೆ ಬಿಜೆಪಿ ಟಿಕೆಟ್ ನೀಡದೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕರ್ನಾಟಕದಲ್ಲಿ ತನ್ನ ಸಹಯೋಗಿ ಪಕ್ಷ ಜೆಡಿಎಸ್ ಗೆ ಬಿಟ್ಟುಕೊಟ್ಟಿತು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹಟಕ್ಕೆ ಬಿದ್ದಿದ್ದ ಸುಮಲತಾರೊಂದಿಗೆ ಬಿಜೆಪಿ ವರಿಷ್ಠರು ಮಾತಾಡಿ ಮನವೊಲಿಸಿದ ಬಳಿಕ ಅವರು ಪಕ್ಷ ಸೇರುವ ನಿರ್ಧಾರ ಪ್ರಕಟಿಸಿದ್ದರು. ಆದರೆ ಅವರು ಇದುವರೆಗೆ ಮಂಡ್ಯದ ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿ ಅವರ ಪರ ಪ್ರಚಾರಕ್ಕೆ ಹೋಗಿಲ್ಲ. ಏತನ್ಮಧ್ಯೆ, ದರ್ಶನ್ ಅವರು ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವೆಂಕಟರಮಣೇಗೌಡರ (ಸ್ಟಾರ್ ಚಂದ್ರು) ಪರ ಪ್ರಚಾರ ಮಾಡಲು ಫೀಲ್ಡಿಗಿಳಿದಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರ ಮತ್ತಷ್ಟು ರಂಗೇರಿದೆ ಅಂದರೆ ಉತ್ಪ್ರೇಕ್ಷೆ ಅನಿಸದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲವೆಂದ ಸುಮಲತಾ ಅಂಬರೀಶ್ ಬಿಜೆಪಿ ಸೇರುವ ಘೋಷಣೆ ಮಾಡಿದರು!

Follow us on