Dhruva Sarja Tweet ರಾಜ್ಯ ಸರ್ಕಾರದ ವಿರುದ್ಧ ಧ್ರುವ ಸರ್ಜಾ ತೀವ್ರ ಅಸಮಾಧಾನ; ಟ್ವಿಟರ್​ನಲ್ಲಿ 3 ಪ್ರಶ್ನೆ ಮುಂದಿಟ್ಟ ನಟ

ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಫೆಬ್ರವರಿ 19, ರಥಸಪ್ತಮಿಯಂದು ಬಿಡುಗಡೆಯಾಗಲಿದೆ. ಸ್ವಲ್ಪ ದಿನಗಳ ಹಿಂದೆ ಫೇಸ್​ಬುಕ್​ ಲೈವ್​ನಲ್ಲಿ ಬಂದ್ರ ಧ್ರುವ ಸರ್ಜಾ ತಮ್ಮ ಅಭಿಮಾನಿಗಳಿಗೆ ಈ ಗುಡ್​ನ್ಯೂಸ್ ಕೊಟ್ಟಿದ್ದರು.

Dhruva Sarja Tweet ರಾಜ್ಯ ಸರ್ಕಾರದ ವಿರುದ್ಧ ಧ್ರುವ ಸರ್ಜಾ ತೀವ್ರ ಅಸಮಾಧಾನ; ಟ್ವಿಟರ್​ನಲ್ಲಿ 3 ಪ್ರಶ್ನೆ ಮುಂದಿಟ್ಟ ನಟ
ನಟ ಧ್ರುವ ಸರ್ಜಾ
Updated By: ಸಾಧು ಶ್ರೀನಾಥ್​

Updated on: Feb 03, 2021 | 11:45 AM

ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇ. 100ರಷ್ಟೂ ಪ್ರೇಕ್ಷಕರು ಕುಳಿತು ಸಿನಿಮಾ ವೀಕ್ಷಿಸಬಹುದು ಎಂದು ಕೇಂದ್ರ ಸರ್ಕಾರ ಕಳೆದ ವಾರವಷ್ಟೇ ಹೇಳಿದೆ. ಆದರೆ ಕೊರೊನಾ 2ನೇ ಅಲೆಗೆ ಹೆದರಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿ, ಶೇ. 50ರಷ್ಟು ಮಾತ್ರ ಅವಕಾಶ ಎಂದಿದೆ. ಇನ್ನೂ ಕೊರೊನಾ ಕಾಟ ಇರುವ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಶೇ. 50 ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ಈ ಕ್ರಮವನ್ನು ನಟ ಧ್ರುವ ಸರ್ಜಾ ತೀವ್ರವಾಗಿ ಖಂಡಿಸಿದ್ದಾರೆ. ಟ್ವೀಟ್​ ಮಾಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾರ್ಕೆಟ್​ನಲ್ಲಿ ಗಿಜಿಗಿಜಿ ಜನ. ಬಸ್​​ನಲ್ಲೂ ಫುಲ್​ ರಶ್​. ಆದರೆ ಚಿತ್ರಮಂದಿರಗಳಿಗೆ ಮಾತ್ರ ಶೇ. 50ರಷ್ಟು ಅವಕಾಶ ಯಾಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ತಮ್ಮ ಟ್ವೀಟ್​ಗೆ ಮುಖ್ಯಮಂತ್ರಿ ಯಡಿಯೂರಪ್ಪ, ಡಿಸಿಎಂ ಅಶ್ವತ್ಥ ನಾರಾಯಣ ಮತ್ತು ಸಚಿವ ಸುಧಾಕರ್​ ಅವರನ್ನು ಟ್ಯಾಗ್​ ಕೂಡ ಮಾಡಿದ್ದಾರೆ.

ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಫೆಬ್ರವರಿ 19, ರಥಸಪ್ತಮಿಯಂದು ಬಿಡುಗಡೆಯಾಗಲಿದೆ. ಸ್ವಲ್ಪ ದಿನಗಳ ಹಿಂದೆ ಫೇಸ್​ಬುಕ್​ ಲೈವ್​ನಲ್ಲಿ ಬಂದ ಧ್ರುವ ಸರ್ಜಾ ತಮ್ಮ ಅಭಿಮಾನಿಗಳಿಗೆ ಈ ಗುಡ್ ​ನ್ಯೂಸ್ ಕೊಟ್ಟಿದ್ದರು. ಇಂದು ಧ್ರುವ ಮಾಡಿದ ಟ್ವೀಟ್​ಗೆ ಸ್ಯಾಂಡಲ್​ವುಡ್​ ಬೆಂಬಲ ನೀಡಿದೆ.

 

ಸ್ಯಾಂಡಲ್​ವುಡ್​ಗೆ ಶಾಕ್​ ಕೊಟ್ಟ ರಾಜ್ಯ ಸರ್ಕಾರ: ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ

Published On - 11:41 am, Wed, 3 February 21