ಕೊವಿಡ್​ ಆತಂಕದ ಜೊತೆಗೆ ರಾಜ್ಯದಲ್ಲಿ ಅಪರೂಪದ ಎನೆಕ್ ಕಾಯಿಲೆ ಬಾಲಕನಲ್ಲಿ ಪತ್ತೆ!

| Updated By: ಸಾಧು ಶ್ರೀನಾಥ್​

Updated on: Jun 26, 2021 | 11:20 AM

Acute Necrotizing Encephalopathy of Childhood: ಹೂವಿನಹಡಗಲಿಯ ಬಾಲಕನಲ್ಲಿ ಈ ಕಾಯಿಲೆ ಪತ್ತೆಯಾಗಿದ್ದು, ಇಂತಹ ಕಾಯಿಲೆ ದೆಹಲಿಯ ಏಮ್ಸ್‌ನಲ್ಲಿ ವಯಸ್ಕರೊಬ್ಬರಲ್ಲಿ ಪತ್ತೆಯಾಗಿದೆ. ಆದರೆ ಬಾಲಕನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು. ಜೊತೆಗೆ, ಎಸ್ಎಸ್ ಆಸ್ಪತ್ರೆಯಲ್ಲಿ ಇಂತಹ ಲಕ್ಷಣ ಇರುವ ಆರು ಮಕ್ಕಳಿದ್ದಾರೆ.

ಕೊವಿಡ್​ ಆತಂಕದ ಜೊತೆಗೆ ರಾಜ್ಯದಲ್ಲಿ ಅಪರೂಪದ ಎನೆಕ್ ಕಾಯಿಲೆ ಬಾಲಕನಲ್ಲಿ ಪತ್ತೆ!
ಕೊವಿಡ್​ ಆತಂಕದ ನಡುವೆ ರಾಜ್ಯದಲ್ಲಿ ಅಪರೂಪದ ಎನೆಕ್ ಕಾಯಿಲೆ ಬಾಲಕನಲ್ಲಿ ಪತ್ತೆ!
Follow us on

ದಾವಣಗೆರೆ: ದೇಶದಲ್ಲಿ ವಿರಳವಾದ ಕಾಯಿಲೆಯೊಂದು ದಾವಣಗೆರೆ ಎಸ್ಎಸ್ ಆಸ್ಪತ್ರೆಯಲ್ಲಿ ಪತ್ತೆಯಾಗಿದೆ. 13 ವರ್ಷದ ಬಾಲಕನಿಗೆ ಅಪರೂಪದ ಎನೆಕ್ ಎಂಬ ಈ ಕಾಯಿಲೆ ಬಂದಿದೆ. ಅಕ್ಯುಟ್‌ ನೆಕ್ರೋಟೈಜಿಂಗ್ ಎನ್ಸೆಫಲೋಪತಿ (ANEC case- acute necrotizing encephalopathy of childhood) ಎಂಬ ಕಾಯಿಲೆಯು ಎಸ್ಎಸ್ ವೈದ್ಯಕೀಯ ಸಂಶೋಧನೆ ಸಂಸ್ಥೆಯಲ್ಲಿ ಮಗುವಿಗೆ ಇರುವುದು ಪತ್ತೆಯಾಗಿದೆ. ಆತಂಕಕಾರಿಯೆಂದರೆ ವಿಶೇಷವಾಗಿ ಕೋವಿಡ್ ಸೋಂಕಿನಿಂದ ಗುಣಮುಖವಾದ ಮಕ್ಕಳಲ್ಲಿ ಈ ಕಾಯಿಲೆ ಪತ್ತೆಯಾಗಿದೆ.

ದಾವಣಗೆರೆಯ ಎಸ್ಎಸ್ ಆಸ್ಪತ್ರೆ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ನಿಜಲಿಂಗಪ್ಪ ಕಾಳಪ್ಪನ್ನವರ ನೇತೃತ್ವದ ವೈದ್ಯರ ತಂಡ ಇದನ್ನು ಪತ್ತೆ ಹಚ್ಚಿದೆ. ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಬಾಲಕನಲ್ಲಿ ಈ ಕಾಯಿಲೆ ಪತ್ತೆಯಾಗಿದ್ದು, ಇಂತಹ ಕಾಯಿಲೆ ದೆಹಲಿಯ ಏಮ್ಸ್‌ನಲ್ಲಿ ವಯಸ್ಕರೊಬ್ಬರಲ್ಲಿ ಪತ್ತೆಯಾಗಿದೆ. ಆದರೆ ಬಾಲಕನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು.

ಮಕ್ಕಳಿಗೆ ಚಿಕಿತ್ಸೆ ನೀಡುತ್ತರುವ ಎಸ್ಎಸ್ ವೈದ್ಯಕೀಯ ಸಂಶೋಧನಾ ಸಂಸ್ಥೆಯ ವೈದ್ಯಕೀಯ ನಿರ್ದೇಶಕರಾದ ಡಾ. ನಿಜಲಿಂಗಪ್ಪ ಕಾಳಪ್ಪನ್ನವರ ಅವರು ಹೇಳುವುದಿಷ್ಟು:

1. ವಿಶೇಷವಾಗಿ ಈ ಕಾಯಿಲೆ ಎಸಿಂಪ್ಟಾಮೆಟೆಕ್ ಕೋವಿಡ್ ಸೋಂಕಿನಿಂದ ಗುಣಮುಖರಾದ ಮಕ್ಕಳಲ್ಲಿ ಪತ್ತೆಯಾಗಿದೆ (A rare post-covid complication ANEC case). ಕಾರಣ ಬಹುತೇಕ ಮಕ್ಕಳಿಗೆ ಕೋವಿಡ್ ಬಂದು ಹೋಗಿರುತ್ತದೆ. ಆದ್ರೆ ಆ ಮಕ್ಕಳಿಗೆ ಕೋವಿಡ್ ಲಕ್ಷಣವೇ ಇರಲ್ಲ. ಹೀಗಾಗಿ ಸೂಕ್ತ ಚಿಕಿತ್ಸೆ ನೀಡಿರಲ್ಲ.

ANEC ಕಾಯಿಲೆ ಮೆದುಳಿಗೆ ಸಂಬಂಧಪಟ್ಟ ಕಾಯಿಲೆ. ಇದು ಮಲ್ಟಿ ಸಿಸ್ಟಂ ಇನ್​ಫ್ಲಮೇಟರಿ ಸಿಂಡ್ರೋಮ್ (Multisystem Inflammatory Syndrome, MIS-C) ಕಾಯಿಲೆ ಮಾದರಿಯಲ್ಲೇ ಇರುತ್ತದೆ. ಈಗಾಗಲೇ ಎಸ್ಎಸ್ ಆಸ್ಪತ್ರೆಯಲ್ಲಿ MIS-C ಲಕ್ಷಣ ಇರುವ ಆರು ಮಕ್ಕಳಿದ್ದಾರೆ. ಇವರೆಲ್ಲ ಕೋವಿಡ್ ನಿಂದ ಗುಣಮುಖರಾದವರೇ.

2. ಈ ಕಾಯಿಲೆ ಪತ್ತೆಯಾದ ತಕ್ಷಣ ಮಕ್ಕಳಿಗೆ ಕೆಲ ವೈದ್ಯಕೀಯ ಪರೀಕ್ಷೆ ಎಂಆರ್ ಐ, ಕೋವಿಡ್ ಟೆಸ್ಟ್ ಹಾಗೂ ಯಾವ ಅಂಗದ ಮೇಲೆ ದಾಳಿ ಮಾಡಿದೆ ಆ ಅಂಗಕ್ಕೆ ಪ್ರತ್ಯೇಕ ಚಿಕಿತ್ಸೆ ನೀಡಬೇಕಾಗುತ್ತದೆ. ಇದಕ್ಕೆ ಇಮ್ಯುನೋಗ್ಲೋಬುಲಿನ್ (immunoglobulin) ಔಷಧ ನೀಡಲಾಗುತ್ತದೆ. ಈ ಔಷಧಿಗೆ ಐದು ಗ್ರಾಂಗೆ 14 ಸಾವಿರ ರೂಪಾಯಿ ತಗಲುತ್ತದೆ. ಉದಾಹರಣೆಗೆ 30 ಕೆಜಿ ಮಗು ಇದ್ದರೆ ಇದಕ್ಕೆ ಅಂದಾಜು ಒಂದು ಲಕ್ಷ ರುಪಾಯಿ ವೆಚ್ಚವಾಗುತ್ತದೆ.

3. ದೇಶದಲ್ಲಿ ಯಾವುದೇ ಕಾಯಿಲೆ ಕಾಣಿಸಿಕೊಂಡರೆ ಅದು ಇಂಡಿಯನ್ ಮೆಡಿಕಲ್ ಜರ್ನಲ್​​ನಲ್ಲಿ ದಾಖಲಾಗುತ್ತದೆ. ಮಕ್ಕಳಿಗೆ ಈ ಕಾಯಿಲೆ ಬಂದಿದ್ದು ಇನ್ನೂ ಎಲ್ಲಿಯೂ ದಾಖಲಾಗಿಲ್ಲ. ಹೀಗಾಗಿ ಇದೇ ಮೊದಲು ಮಕ್ಕಳಲ್ಲಿ ಕಾಣಿಸಿಕೊಂಡ ಕಾಯಿಲೆಯಾಗಿದೆ.

ಡಾ. ನಿಜಲಿಂಗಪ್ಪ ಕಾಳಪ್ಪನ್ನವರ, ವೈದ್ಯಕೀಯ ನಿರ್ದೇಶಕರು, ಎಸ್ಎಸ್ ವೈದ್ಯಕೀಯ ಸಂಶೋಧನಾ ಸಂಸ್ಥೆ, ದಾವಣಗೆರೆ

(acute necrotizing encephalopathy of childhood found in ss hospital davanagere)

Published On - 11:09 am, Sat, 26 June 21