ಕೊರೊನಾ 4ನೇ ಅಲೆ ಭೀತಿ; ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪಾಲಕರ ಹಿಂದೇಟು, ಪ್ರವೇಶ ಪ್ರಮಾಣ ಶೇ.20ರಷ್ಟು ಇಳಿಕೆ

| Updated By: Lakshmi Hegde

Updated on: Apr 23, 2022 | 1:50 PM

ಈ ಬಾರಿ ಮೇ 16ರಿಂದ ಶಾಲೆಗಳಿಂದ ಶಾಲೆಗಳು ಶುರುವಾಗಲಿವೆ. ಅಂದಹಾಗೇ, ಖಾಸಗಿ ಶಾಲೆಗಳ ಪ್ರವೇಶಾತಿ ಪ್ರಮಾಣ ಕಡಿಮೆಯಾಗಿದ್ದು ಕೇವಲ ಬೆಂಗಳೂರಲ್ಲಿ ಮಾತ್ರವಲ್ಲ, ಇನ್ನಿತರ ಜಿಲ್ಲೆಗಳಲ್ಲೂ ಇದೇ ಸಮಸ್ಯೆ ತಲೆದೋರಿದೆ.

ಕೊರೊನಾ 4ನೇ ಅಲೆ ಭೀತಿ; ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪಾಲಕರ ಹಿಂದೇಟು, ಪ್ರವೇಶ ಪ್ರಮಾಣ ಶೇ.20ರಷ್ಟು ಇಳಿಕೆ
ಸಾಂಕೇತಿಕ ಚಿತ್ರ
Follow us on

ಕೊರೊನಾ ವೈರಸ್ ಎಂಬುದು ಎಲ್ಲ ಕ್ಷೇತ್ರಗಳ ಮೇಲೆಯೂ ದುಷ್ಪರಿಣಾಮ ಬೀರಿದೆ. ನಮ್ಮ ರಾಜ್ಯ, ದೇಶದಲ್ಲಷ್ಟೇ ಅಲ್ಲ..ಇಡೀ ಪ್ರಪಂಚಕ್ಕೆ ದೊಡ್ಡ ಹೊಡೆತ ಕೊಟ್ಟಿದ್ದು ಕೊರೊನಾ. ಭಾರತದಲ್ಲಿ ಒಟ್ಟು ಮೂರು ಅಲೆಯಲ್ಲಿ ತೊಂದರೆ ಕೊಟ್ಟಿರುವ ಕೊರೊನಾ ಒಮ್ಮೆ ತುಸು ಕಡಿಮೆಯಾಗಿ ಮತ್ತೀಗ ನಿಧಾನಕ್ಕೆ ಹೆಚ್ಚುತ್ತಿದ್ದು, ನಾಲ್ಕನೇ ಅಲೆಯ ಭೀತಿ ಶುರುವಾಗಿದೆ.  ಈ ಮಧ್ಯೆ ಕರ್ನಾಟಕದಲ್ಲಿ ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿ ಪ್ರಮಾಣದಲ್ಲಿ ಕುಸಿತವಾಗಿದ್ದಾಗಿ ಹೇಳಲಾಗುತ್ತಿದೆ. ಕೊರೊನಾದ ನಾಲ್ಕನೇ ಅಲೆ ಭೀತಿಯಿಂದ ಪೋಷಕರು ಪ್ರತಿಷ್ಠಿತ ಶಾಲೆಗಳಿಗೆ ಮಕ್ಕಳ ಅಡ್ಮಿಷನ್​ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಖಾಸಗಿ ಶಾಲೆಗಳ ಪ್ರವೇಶಾತಿ ಪ್ರಮಾಣದಲ್ಲಿ ಶೇ.20ರಷ್ಟು ಕುಸಿತ ಉಂಟಾಗಿದೆ ಎಂದು ಶಾಲೆಗಳೇ ಹೇಳಿಕೊಳ್ಳುತ್ತಿವೆ.

ಕೊರೊನಾ ನಾಲ್ಕನೇ ಅಲೆ ಯಾವಾಗ ಏಳಬಹುದು? ಅದಿನ್ನೆಷ್ಟು ಭೀಕರವಾಗಿರುತ್ತದೆಯೋ ಎಂಬಿತ್ಯಾದಿ ಗೊಂದಲಗಳು ಪೋಷಕರನ್ನು ಕಾಡುತ್ತಿವೆ. ಸಿಕ್ಕಾಪಟೆ ದುಡ್ಡು ಸುರಿದು ದೊಡ್ಡದೊಡ್ಡ ಶಾಲೆಗಳಿಗೆ ಸೇರಿಸಿದರೂ ಕೊರೊನಾ ಸೋಂಕು ಹೆಚ್ಚಾದರೆ ಶಾಲೆಗಳು ಬಂದ್​ ಆಗುತ್ತವೆ. ಲಾಕ್​ಡೌನ್ ಆಗುತ್ತದೆ. ಹೀಗಾದಾಗ ಮಕ್ಕಳಿಗೆ ಆನ್​ಲೈನ್​ಮೂಲಕ ಪಾಠ ಹೇಳಿದರೂ, ಅದು ಆಪ್​ಲೈನ್​ ಕಲಿಕೆಯಂತೆ ಆಗುವುದಿಲ್ಲ. ಹೀಗಾಗಿ ಶಿಕ್ಷಣ ಸರಿಯಾಗಿ ಸಿಗುವುದಿಲ್ಲ ಎಂದು ಯೋಚಿಸುತ್ತಿರುವ ಪಾಲಕರು, ಈ ಬಾರಿ ಮಕ್ಕಳನ್ನು ಸಣ್ಣಪುಟ್ಟ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಿದ್ದಾರೆ.

ಈ ಬಾರಿ ಮೇ 16ರಿಂದ ಶಾಲೆಗಳಿಂದ ಶಾಲೆಗಳು ಶುರುವಾಗಲಿವೆ. ಅಂದಹಾಗೇ, ಖಾಸಗಿ ಶಾಲೆಗಳ ಪ್ರವೇಶಾತಿ ಪ್ರಮಾಣ ಕಡಿಮೆಯಾಗಿದ್ದು ಕೇವಲ ಬೆಂಗಳೂರಲ್ಲಿ ಮಾತ್ರವಲ್ಲ, ಇನ್ನಿತರ ಜಿಲ್ಲೆಗಳಲ್ಲೂ ಇದೇ ಸಮಸ್ಯೆ ತಲೆದೋರಿದೆ. ಒಂದೆಡೆ ಖಾಸಗಿ ಶಾಲೆಗಳಿಗೆ ಶಿಕ್ಷಕರ ಕೊರತೆಯಾಗಿದ್ದರೆ, ಇನ್ನೊಂದೆಡೆ ಈಗ ವಿದ್ಯಾರ್ಥಿಗಳ ಅಡ್ಮಿಷನ್​ ಕೂಡ ಕಡಿಮೆಯಾಗಿದೆ. ಈಗೆರಡು ವರ್ಷಗಳಿಂದ ಶಾಲೆಗಳು ಆಫ್​ಲೈನ್​ ಕ್ಲಾಸ್​ ಮಾಡಿದ್ದೇ ಕಡಿಮೆ. ಲಕ್ಷಾಂತರ ರೂಪಾಯಿ ಫೀ ತುಂಬಿ ಮಕ್ಕಳನ್ನು ಶಾಲೆಗೆ ಕಳಿಸಿದರೂ, ಅವರು ಮನೆಯಲ್ಲೇ ಇರುವಂತಾಗಿದ್ದು ಪಾಲಕರಿಗೆ ನಷ್ಟವೂ ಹೌದು. ಹೀಗಾಗಿ ಪೋಷಕರು ತಮ್ಮ ಮನಸು ಬದಲಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಾಮರಸ್ಯ ಸಂದೇಶ ಸಾರಸಲು ಆನೆಗೊಂದಿಯಿಂದ ಅಂಜನಾದ್ರಿಗೆ ಕಾಂಗ್ರೆಸ್ಸಿಗರ ಪಾದಯಾತ್ರೆ; ವೀಣಾ ಕಾಶಪ್ಪನವರ್ ನೇತೃತ್ವ

Published On - 1:48 pm, Sat, 23 April 22