ವಯಸ್ಕರ ಶಿಕ್ಷಣ ಅಭಿಯಾನಕ್ಕೆ ಮರು ಚಾಲನೆ; ಕೊರೊನಾ ಲೆಕ್ಕಿಸದೆ ಕಲಿಕೆಗೆ ಆಗಮಿಸಿದ ಗ್ರಾಮೀಣ ಭಾಗದ ಮಂದಿ

ಅನಕ್ಷರಸ್ಥರಿಗೆ ಮೂಲ ಶಿಕ್ಷಣ ಕಲಿಸಲು ಜಿಲ್ಲೆಯ ಮೂರು ತಾಲೂಕುಗಳಲ್ಲಿ 1800 ಕ್ಕೂ ಹೆಚ್ಚಿನ ಸ್ವಯಂ ಬೋಧಕರನ್ನು ನೇಮಿಸಿಕೊಳ್ಳಲಾಗಿದೆ. ಅದರಂತೆ ಕಲಿಕಾರ್ಥಿಗಳು ಉತ್ತೀರ್ಣರಾಗುವ ಆಧಾರದ ಮೇಲೆ ಅವರಿಗೆ ಗೌರವಧನ ಸಹ ನೀಡಲಾಗುತ್ತದೆ.

ವಯಸ್ಕರ ಶಿಕ್ಷಣ ಅಭಿಯಾನಕ್ಕೆ ಮರು ಚಾಲನೆ; ಕೊರೊನಾ ಲೆಕ್ಕಿಸದೆ ಕಲಿಕೆಗೆ ಆಗಮಿಸಿದ ಗ್ರಾಮೀಣ ಭಾಗದ ಮಂದಿ
ವಯಸ್ಕರ ಶಿಕ್ಷಣ ಅಭಿಯಾನಕ್ಕೆ ಮರು ಚಾಲನೆ
Follow us
preethi shettigar
| Updated By: ganapathi bhat

Updated on: Mar 28, 2021 | 10:10 PM

ಕೋಲಾರ: ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಸ್ಥಗಿತಗೊಂಡಿದ್ದ ವಯಸ್ಕರ ಶಿಕ್ಷಣ ಅಭಿಯಾನಕ್ಕೆ ಕೋಲಾರ ಜಿಲ್ಲೆಯಲ್ಲಿ ಮರು ಚಾಲನೆ ಸಿಕ್ಕಿದೆ. ಕಲಿಕಾರ್ಥಿಗಳು ಉತ್ಸಾಹದಿಂದ ಕಲಿಯಲು ಬರುತ್ತಿರುವುದು ಕಂಡುಬಂದಿದೆ. ಕೊರೊನಾ ಸೋಂಕು ತೀವ್ರವಾದ ಹಿನ್ನೆಲೆಯಲ್ಲಿ ವಯಸ್ಕರ ಕಲಿಕಾ ಶಿಕ್ಷಣವನ್ನು ಲೋಕ ಶಿಕ್ಷಣ ನಿರ್ದೇಶನಾಲಯ ತಾತ್ಕಾಲಿಕವಾಗಿ ರದ್ದುಗೊಳಿಸಿತ್ತು. ಆದರೀಗ ಕೊರೊನಾ ಹತೋಟಿಗೆ ಬಂದಿರುವ ಹಿನ್ನೆಲೆಯಲ್ಲಿ ಇಲಾಖೆ ಅಭಿಯಾನಕ್ಕೆ ಮರು ಚಾಲನೆ ಕೊಟ್ಟಿದೆ.

ಹಿಂದುಳಿದ ತಾಲೂಕುಗಳಲ್ಲಿರುವ ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿಸುವ ಉದ್ದೇಶದಿಂದ ರಾಜ್ಯ ಲೋಕ ಶಿಕ್ಷಣ ನಿರ್ದೇಶನಾಲಯವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಯಸ್ಕರ ಶಿಕ್ಷಣ ಕಾರ್ಯಕ್ರಮವನ್ನು ನಡೆಸುತ್ತಿದೆ. ಅದರಂತೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು ಹಾಗೂ ಮಾಲೂರುಗಳನ್ನು ಹಿಂದುಳಿದ ತಾಲೂಕುಗಳೆಂದು ಗುರುತಿಸಲಾಗಿದ್ದು, ಆ ಭಾಗದ ಆಯ್ದ ಗ್ರಾಮಪಂಚಾಯತಿಗಳಲ್ಲಿನ ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿಸುವ ಕಾರ್ಯಕ್ರಮ ಜಾರಿಯಲ್ಲಿದೆ.

ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ ಶೇಕಡಾ 75ರಷ್ಟಿದ್ದು, ಕೋಲಾರ ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ 74.39 ರಷ್ಟಿದೆ. ಆ ಹಿನ್ನೆಲೆಯಲ್ಲಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಅಭಿಯಾನ ನಡೆಸುತ್ತಿದ್ದು, ಕಲಿಕಾರ್ಥಿಗಳಿಗೆ ಮೂಲ ಶಿಕ್ಷಣ ಹಾಗೂ ಸರಳ ಲೆಕ್ಕಾಚಾರ ಹೇಳಿಕೊಡಲಾಗುತ್ತಿದೆ.

ಬೋಧಕರಿಗೆ ಪುನಶ್ಚೇತನ ಕಾರ್ಯಾಗಾರ: ಅನಕ್ಷರಸ್ಥರಿಗೆ ಮೂಲ ಶಿಕ್ಷಣ ಕಲಿಸಲು ಜಿಲ್ಲೆಯ ಮೂರು ತಾಲೂಕುಗಳಲ್ಲಿ 1800 ಕ್ಕೂ ಹೆಚ್ಚಿನ ಸ್ವಯಂ ಬೋಧಕರನ್ನು ನೇಮಿಸಿಕೊಳ್ಳಲಾಗಿದೆ. ಅದರಂತೆ ಕಲಿಕಾರ್ಥಿಗಳು ಉತ್ತೀರ್ಣರಾಗುವ ಆಧಾರದ ಮೇಲೆ ಅವರಿಗೆ ಗೌರವಧನ ಸಹ ನೀಡಲಾಗುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಬೋಧಕರಿಗೂ ಪುನಶ್ಚೇತನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಬೋಧನೆ ಕಾರ್ಯ ನಡೆಯುವುದು ಎಲ್ಲಿ? ಕಲಿಕಾರ್ಥಿಗಳು ಹಾಗೂ ಬೋಧಕರ ಬಿಡುವಿಗೆ ತಕ್ಕಂತೆ ಗ್ರಾಮ ಅಥವಾ ಕೊಳೆಗೇರಿ ಭಾಗಗಳಲ್ಲಿ ಹತ್ತು ಜನ ಕುಳಿತು ಕೊಳ್ಳುವಷ್ಟು ಜಾಗಗಳಲ್ಲಿ ಬೋಧನೆ ನಡೆಯುತ್ತದೆ. ಸಮುದಾಯ ಭವನ, ಚಾವಡಿ, ದೇವಾಲಯದ ಆವರಣ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಬೋಧನೆ ನಡೆಸಲಾಗುತ್ತದೆ.

ಸ್ವಯಂ ಬೋಧಕರು ಆರು ತಿಂಗಳ ಕಾಲ ಬೋಧನೆ ಮಾಡುತ್ತಾರೆ. ಜತೆಗೆ ಬಾಳಿಗೊಂದು ಬೆಳಕು ಎಂಬ ಪುಸ್ತಕವನ್ನು ಸಹ ನೀಡಲಾಗುತ್ತದೆ. ಅದರಂತೆ ಒಬ್ಬ ವ್ಯಕ್ತಿ ಒಂದು ಪತ್ರಿಕೆ ಅಥವಾ ನೋಟಿಸ್ ಓದುವಷ್ಟು ಜಾಗವನ್ನು ಇದರಿಂದ ಕಲಿಯುತ್ತಾರೆ. ಜತೆಗೆ ಸರಳ ಲೆಕ್ಕಾಚಾರ ಸಹ ತಿಳಿಯುತ್ತದೆ. ಬೋಧನೆ ಮುಗಿದ ಬಳಿಕ ಅವರಿಗೆ ಪ್ರತ್ಯೇಕವಾಗಿ ಪರೀಕ್ಷೆಯನ್ನು ನೀಡಲಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಸಾಕ್ಷರಸ್ಥರೆಂದು ಪರಿಗಣಿಸಿ ಪ್ರಮಾಣಪತ್ರ ನೀಡಲಾಗುತ್ತದೆ.

ವಯಸ್ಕರ ಶಿಕ್ಷಣ ಕಲಿಕೆಗೆ ಮಹಿಳಾ ಕಲಿಕಾರ್ಥಿಗಳ ಆಸಕ್ತಿ ಹೆಚ್ಚು! ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಡಾ.ಡಿ.ಎಂ.ನಂಜುಂಡಪ್ಪ ವರದಿಯ ಅನ್ವಯ ಸಾರಕ್ಷತಾ ಕಾರ್ಯಕ್ರಮ, ಸ್ತ್ರೀ ಶಕ್ತಿ ಗುಂಪುಗಳು ಹಾಗೂ ಕೊಳೆಗೇರಿಗಳ ಸಾಕ್ಷರತಾ ಕಾರ್ಯಕ್ರಮದಲ್ಲಿ ಒಟ್ಟು 14,138 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಆ ಪೈಕಿ 9595 ಮಹಿಳಾ ಕಲಿತಾರ್ಥಿಗಳಿರುವುದು ವಿಶೇಷವಾಗಿದ್ದು, ಪುರುಷರು 4543 ಮಂದಿಯಿದ್ದಾರೆ. ಇನ್ನು ಕೊರೊನಾ ಆತಂಕದ ಹಿನ್ನೆಲೆ ಸ್ಥಗಿತವಾಗಿದ್ದ ವಯಸ್ಕ ಶಿಕ್ಷಣ ಆರಂಭಿಸಿದ್ದು, ಜನರು ಕಲಿಯಲು ಧೈರ್ಯವಾಗಿ ಬರುತ್ತಿದ್ದಾರೆ. ಕಲಿಕೆ ಮುಗಿದ ನಂತರ ಏಪ್ರಿಲ್​ ಮತ್ತು ಮೇ ತಿಂಗಳಲ್ಲಿ ಅವರಿಗೆ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾ ವಯಸ್ಕ ಶಿಕ್ಷಣಾಧಿಕಾರಿ ಡಾ.ನರಸಿಂಹಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ:

ಕಪ್ಪು ಪಟ್ಟಿ ಧರಿಸಿ ಮೌನ ಸತ್ಯಾಗ್ರಹ ಮಾಡಲು ಮುಂದಾದ ಶಿಕ್ಷಕರು.. ಮಾರ್ಚ್ 23ಕ್ಕೆ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳಿಂದ ಪ್ರತಿಭಟನೆಗೆ ನಿರ್ಧಾರ

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ