ದಿಢೀರನೇ ಮೂರು ಕೇಸ್ ವಾಪಸ್ ತೆಗೆದುಕೊಂಡ ವಕೀಲ ವಿನೋದ್.. BSYಗೆ ಬಿಗ್ ರಿಲೀಫ್!
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಕೇಸ್ಗಳಲ್ಲಿ ಸಿಲುಕಿಕೊಂಡಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಬಿಗ್ ರಿಲೀಫ್ ಸಿಕ್ಕಿದೆ. ಮುಖ್ಯಮಂತ್ರಿಗಳ ವಿರುದ್ಧ ಮೂರು ಪ್ರಕರಣ ದಾಖಲಿಸಿದ್ದ ವಕೀಲ ಬಿ.ವಿನೋದ್ ಕೇಸ್ಗಳನ್ನು ಹಿಂಪಡೆದಿದ್ದಾರೆ. ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ಮೂರು ಕೇಸ್ಗಳು ಸಿಎಂ ಯಡಿಯೂರಪ್ಪ ಕುಟುಂಬದ ಸದಸ್ಯರ ವಿರುದ್ಧ ದಾಖಲಾಗಿತ್ತು. ಶಿವಮೊಗ್ಗ ಮೂಲದ ವಕೀಲ ಬಿ.ವಿನೋದ್ ಕೇಸ್ ದಾಖಲಿಸಿದ್ದರು. ಮೂರು ಕೇಸ್ಗಳ ವಿಚಾರಣೆ ನ್ಯಾ. ಜಾನ್ ಮೈಕೆಲ್ ಕುನ್ಹಾ ಪೀಠದಲ್ಲಿ ನಡೆಯಬೇಕಿತ್ತು. ಆದರೆ, ವಕೀಲ ಬಿ.ವಿನೋದ್ ಇಂದು ದಿಢೀರನೇ ಕೇಸ್ ಹಿಂಪಡೆದರು. ಆದರೆ […]

ಬಿ.ಎಸ್. ಯಡಿಯೂರಪ್ಪ
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಕೇಸ್ಗಳಲ್ಲಿ ಸಿಲುಕಿಕೊಂಡಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಬಿಗ್ ರಿಲೀಫ್ ಸಿಕ್ಕಿದೆ. ಮುಖ್ಯಮಂತ್ರಿಗಳ ವಿರುದ್ಧ ಮೂರು ಪ್ರಕರಣ ದಾಖಲಿಸಿದ್ದ ವಕೀಲ ಬಿ.ವಿನೋದ್ ಕೇಸ್ಗಳನ್ನು ಹಿಂಪಡೆದಿದ್ದಾರೆ.
ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ಮೂರು ಕೇಸ್ಗಳು ಸಿಎಂ ಯಡಿಯೂರಪ್ಪ ಕುಟುಂಬದ ಸದಸ್ಯರ ವಿರುದ್ಧ ದಾಖಲಾಗಿತ್ತು. ಶಿವಮೊಗ್ಗ ಮೂಲದ ವಕೀಲ ಬಿ.ವಿನೋದ್ ಕೇಸ್ ದಾಖಲಿಸಿದ್ದರು. ಮೂರು ಕೇಸ್ಗಳ ವಿಚಾರಣೆ ನ್ಯಾ. ಜಾನ್ ಮೈಕೆಲ್ ಕುನ್ಹಾ ಪೀಠದಲ್ಲಿ ನಡೆಯಬೇಕಿತ್ತು.
ಆದರೆ, ವಕೀಲ ಬಿ.ವಿನೋದ್ ಇಂದು ದಿಢೀರನೇ ಕೇಸ್ ಹಿಂಪಡೆದರು. ಆದರೆ ವಿನೋದ್, ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧದ ಕೇಸ್ ಹಿಂಪಡೆದಿಲ್ಲ. ಹೀಗಾಗಿ, ಈಶ್ವರಪ್ಪ ವಿರುದ್ಧದ ಕ್ರಿಮಿನಲ್ ರಿವಿಜನ್ ಕೇಸ್ ಮುಂದೂಡಿಕೆ ಆಗಿದೆ.
Published On - 11:58 am, Wed, 4 November 20