
ಬೆಂಗಳೂರು: ಕರ್ನಾಟಕದಲ್ಲೂ ಕೊರೊನಾ ವೈರಸ್ ತನ್ನ ಆಟಾಟೋಪ ತೋರಿಸತ್ತಿದೆಯಾ!? ತೆಲಂಗಾಣದ ಟೆಕ್ಕಿಯೊಬ್ಬರು ಬೆಂಗಳೂರು ಮೂಲಕ ಹಾದುಹೋಗಿದ್ದು, ಆತನಿಗೆ ಕೊರೊನಾ ವೈರಸ್ ಅಂಟಿರುವುದು ದೃಢಪಟ್ಟಿದೆ. ಆತಕದ ವಿಚಾರವೆಂದ್ರೆ ಆತನ ರೂಂ ಮೇಟ್ ಆಗಿದ್ದ ವ್ಯಕ್ತಿಗೆ ಇದೀಗ ನೆಗಡಿ, ಜ್ವರ ಬಾಧಿಸತೊಡಗಿದೆ.
ಟೆಕ್ಕಿಯ ಜೊತೆಯಲ್ಲಿದ್ದ, ಬೆಂಗಳೂರಿನ ರೂಂ ಮೇಟ್ನನ್ನು ಇದೀಗ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಚಿಕಿತ್ಸೆಗೆ ನಿರ್ಧರಿಸಲಾಗಿದೆ ಎಂದು ಜಯನಗರದಲ್ಲಿರುವ ರಾಜೀವ್ ಗಾಂಧಿ ಆಸ್ಪತ್ರೆ ವೈದ್ಯಾಧಿಕಾರಿ ಟಿವಿ9ಗೆ ತಿಳಿಸಿದ್ದಾರೆ.
Published On - 3:50 pm, Tue, 3 March 20