AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಅಧಿವೇಶನದ ನಂತರ ಈಡಿಗ ಸಮುದಾಯದ ಬೇಡಿಕೆಗಳ ಬಗ್ಗೆ ಚರ್ಚೆ: ಸಿದ್ದರಾಮಯ್ಯ

ರಾಜ್ಯ ಈಡಿಗ ಸಮುದಾಯ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹವಲು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಯಿತು. ಈ ಬೇಡಿಕೆಗಳನ್ನು ಬೆಳಗಾವಿ ಅಧಿವೇಶನದ ಬಳಿಕ ಚರ್ಚೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಬೆಳಗಾವಿ ಅಧಿವೇಶನದ ನಂತರ ಈಡಿಗ ಸಮುದಾಯದ ಬೇಡಿಕೆಗಳ ಬಗ್ಗೆ ಚರ್ಚೆ: ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Malatesh Jaggin
| Edited By: |

Updated on: Dec 10, 2023 | 3:21 PM

Share

ಬೆಂಗಳೂರು, ಡಿ.10: ಈಡಿಗ ಸಮುದಾಯ ನಾಯಕರು ಹಲವು ಬೇಡಿಕೆ ಮುಂದಿಟ್ಟಿದ್ದಾರೆ. ಅಧಿವೇಶನ ಮುಗಿದ ಬಳಿಕ ಬೇಡಿಕೆಗಳ ಚರ್ಚಿಸಿ ಕ್ರಮಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ನರಗದ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಈಡಿಗ ಸಮುದಾಯ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಿಮ್ಮೇಗೌಡ್ರು, ಮಧು ಬಂಗಾರಪ್ಪ ಎಲ್ಲರೂ ನನ್ನ ಜೊತೆ ಚರ್ಚೆ ಮಾಡಿ ಕಾರ್ಯಕ್ರಮದ ದಿನಾಂಕ ನಿಗದಿ ಮಾಡಿದ್ದರು. ಆದರೆ ಸಮಯಕ್ಕೆ ಸರಿಯಾಗಿ ಬರಲು ಆಗಿಲ್ಲ. ಸ್ವಲ್ಪ ತಡವಾಯಿತು ಎಂದು ಹೇಳಿದ ಸಿದ್ದರಾಮಯ್ಯ, ಹಿಂದುಳಿದ ಜಾತಿಗಳ ಶಿಕ್ಷಣದ ಬಗ್ಗೆ, ಹೋರಾಟದ ಬಗ್ಗೆ ಈಡಿಗರ ಸಮಾಜಕ್ಕೆ ಅಗತ್ಯ ಇರುವ ಬಗ್ಗೆ ಮನವರಿಕೆ ಮಾಡಿದ್ದಾರೆ. ಅನೇಕ ಬೇಡಿಕೆಗಳನ್ನ ಮುಂದಿಟ್ಟಿದ್ದಾರೆ ಎಂದರು.

ಇದನ್ನೂ ಓದಿ: ನಾನೊಬ್ಬ ಹಿಂದುಳಿದವನು ಅಂತಾ ನೋಟಿಸ್ ಕೊಡುತ್ತಿದ್ದೀರಾ: ಸಿದ್ದರಾಮಯ್ಯ ವಿರುದ್ಧ ಬಿಕೆ ಹರಿಪ್ರಸಾದ್ ವಾಗ್ದಾಳಿ

ಬೆಳಗಾವಿನಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ ಭರವಸೆ ಕೊಡಲು ಆಗಲ್ಲ. ಅಧಿವೇಶನ ಮುಗಿದ ನಂತರ ಚರ್ಚೆ ಮಾಡಿ ಅಗತ್ಯ ಕ್ರಮಗಳನ್ನ ತಗೊಳುತ್ತೇವೆ ಅಂತ ಹೇಳಿದ್ದೇನೆ. ಈ ಹಿಂದೆ 1995 ರಂದು ಬಹಳ ದೊಡ್ಡ ಸಮಾವೇಶ ನಡೆಸಿತ್ತು. ಅವತ್ತು ಮುಖ್ಯ ಮಂತ್ರಿ ದೇವೇವೇಗೌಡ್ರು ಭಾಗವಹಿಸಿದ್ದರು. ನಾನೂ ಭಾಗವಹಿಸಿದ್ದೆ ಎಂದರು.

ನಾರಾಯಣ ಗುರುಗಳು ಕೇರಳದಲ್ಲಿ ಅವಮಾನ ಸಹಿಸಿ ಅವರಲ್ಲಿ ಸಾತ್ವಿಕ ಕೋಪ ಇದ್ದರೂ ಇಡೀ ಬದುಕಿನುದ್ದಕ್ಕೂ ಕೂಡ ಯಾವ ಸಮಾಜ ಅರ್ಥಿಕವಾಗಿ, ಸಾಮಾಜಿಕವಾಗಿ ವಂಚತರಾಗಿದ್ದಾರೋ ಅವರ ಉದ್ದಾರಕ್ಕೆ ಶ್ರಮಿಸಿದ್ದರು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ