AgriGold scam: ಅಗ್ರಿಗೋಲ್ಡ್​ ಹೂಡಿಕೆದಾರರ ಹಿತರಕ್ಷಣೆಗಾಗಿ ತಕ್ಷಣ ಸುಪ್ರೀಂ ಕೋರ್ಟ್ ಮೊರೆ ಹೋಗಲು ಹೈಕೋರ್ಟ್ ಸೂಚನೆ

| Updated By: ಸಾಧು ಶ್ರೀನಾಥ್​

Updated on: Jul 06, 2021 | 4:09 PM

ಇದರಲ್ಲಿ ಕರ್ನಾಟಕದಲ್ಲಿರುವ ಅಗ್ರಿಗೋಲ್ಡ್ ಆಸ್ತಿಯೂ ಸೇರಿದೆ. ಹೀಗಾಗಿ ಒಂದೇ ಕೋರ್ಟ್​ನಲ್ಲಿ ಪ್ರಕ್ರಿಯೆ ನಡೆಸುವಂತೆ ಕೋರಲು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎಂದು ಹೈಕೋರ್ಟ್​ಗೆ ಸಕ್ಷಮ ಪ್ರಾಧಿಕಾರಿ ಹರ್ಷ ಗುಪ್ತಾ ಇಂದು ಮಾಹಿತಿ ನೀಡಿದ್ದರು.  

AgriGold scam: ಅಗ್ರಿಗೋಲ್ಡ್​ ಹೂಡಿಕೆದಾರರ ಹಿತರಕ್ಷಣೆಗಾಗಿ ತಕ್ಷಣ ಸುಪ್ರೀಂ ಕೋರ್ಟ್ ಮೊರೆ ಹೋಗಲು ಹೈಕೋರ್ಟ್ ಸೂಚನೆ
AgriGold scam: ಅಗ್ರಿಗೋಲ್ಡ್​ ವಂಚನೆ; ಹೂಡಿಕೆದಾರರ ಹಿತರಕ್ಷಣೆಗಾಗಿ ತಕ್ಷಣ ಸುಪ್ರೀಂ ಕೋರ್ಟ್ ಮೊರೆ ಹೋಗಲು ಹೈಕೋರ್ಟ್ ಸೂಚನೆ
Follow us on

ಬೆಂಗಳೂರು:  ಅಗ್ರಿಗೋಲ್ಡ್​ ಎಂಬ ಆಂಧ್ರ ಮೂಲದ ಮೋಸದ ಕಂಪನಿ ಎಸಗಿರುವ ಭಾರೀ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂಡಿಕೆದಾರರ ಹಿತಕಾಯಲು ತಕ್ಷಣ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲು ಹೈಕೋರ್ಟ್ ಸೂಚನೆ ನೀಡಿದೆ. ಇಡೀ ದೇಶದಲ್ಲಿ 32 ಲಕ್ಷ ಹೂಡಿಕೆದಾರರಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 8.50 ಲಕ್ಷ ಹೂಡಿಕೆದಾರರಿದ್ದಾರೆ. 

ಅಗ್ರಿಗೋಲ್ಡ್​ನಿಂದ ವಂಚನೆಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೆಲಂಗಾಣ ಸರ್ಕಾರ ಆ ಕಂಪನಿಗೆ ಸೇರಿದ 290 ಆಸ್ತಿಗಳನ್ನು ಜಪ್ತಿ ಮಾಡಿದೆ. ಇದರಲ್ಲಿ ಕರ್ನಾಟಕದಲ್ಲಿರುವ ಅಗ್ರಿಗೋಲ್ಡ್ ಆಸ್ತಿಯೂ ಸೇರಿದೆ. ಹೀಗಾಗಿ ಒಂದೇ ಕೋರ್ಟ್​ನಲ್ಲಿ ಪ್ರಕ್ರಿಯೆ ನಡೆಸುವಂತೆ ಕೋರಲು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎಂದು ಹೈಕೋರ್ಟ್​ಗೆ ಸಕ್ಷಮ ಪ್ರಾಧಿಕಾರಿ ಹರ್ಷ ಗುಪ್ತಾ ಇಂದು ಮಾಹಿತಿ ನೀಡಿದರು.

ಇದು ಸಮಂಜಸವೆಂದು ಅರಿತ ಹೈಕೋರ್ಟ್, ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗೆ ತಕ್ಷಣ  ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲು ಹೈಕೋರ್ಟ್ ಸೂಚನೆ ನೀಡಿತು.  ಇದೇ ವೇಳೆ ವಿಚಾರಣೆಯನ್ನು ಹೈಕೋರ್ಟ್ ಆಗಸ್ಟ್ 2ನೇ ವಾರಕ್ಕೆ ಮುಂದೂಡಿತು.

AgriGold scam ಎಂಬುದು ಅಂತರ ರಾಜ್ಯ ಅಗ್ರಿಗೋಲ್ಡ್ ವಂಚನೆ ಪ್ರಕರಣವಾಗಿದೆ. ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸುಮಾರು 32 ಲಕ್ಷ ಹೂಡಿಕೆದಾರರನ್ನು ಈ ಕಂಪನಿ ವಂಚಿಸಿದೆ. Collective Investment Scheme (CIS) ಯೋಜನೆಯಡಿ 1995ರಿಂದ ಈ ಕಂಪನಿ ವಂಚನೆಗೆ ಮೊದಲಿಟ್ಟಿತ್ತು. ಅಧಿಕ ಲಾಭದ ಆಸೆ ತೋರಿಸಿ, ಅಲ್ಲಿಂದ ಮುಂದಕ್ಕೆ 20 ವರ್ಷದಲ್ಲಿ ಹೂಡಿಕೆದಾರರನ್ನು ನಯವಾಗಿ ವಂಚಿಸಿತ್ತು.

(AgriGold cheating case karnataka high court directs to approach supreme court to protect investors )

Published On - 4:05 pm, Tue, 6 July 21