Gujarat Plane Crash; ಸಮಸ್ತ ಕನ್ನಡಿಗರ ಪರವಾಗಿ ದುರಂತಕ್ಕೀಡಾದವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುವೆ: ಡಿಕೆ ಶಿವಕುಮಾರ್

Updated on: Jun 12, 2025 | 5:10 PM

Gujarat Plane Crash; ದುರಂತಕ್ಕೀಡಾದ ವಿಮಾನದಲ್ಲಿ ಕನ್ನಡಿಗರೂ ಇದ್ದರಂತೆ ಅಂತ ನಮ್ಮ ವರದಿಗಾರ ಕೇಳಿದ್ದಕ್ಕೆ ಪ್ರತಿಕ್ರಿಯಿಸದ ಶಿವಕುಮಾರ್, ಈ ವಿಷಯದಲ್ಲಿ ಕನ್ನಡಿಗರು, ತೆಲುಗಿನವರು ಗುಜರಾತಿಗಳು ಅಂತ ಮಾತಾಬಾರದು, ಅವರೆಲ್ಲರು ಭಾರತೀಯರು, ದುರಂತಕ್ಕೆ ಸಿಕ್ಕವರ ವಿಷಯದಲ್ಲಿ ಮಾನವೀಯತೆ ಮುಖ್ಯವಾಗಬೇಕೇ ಹೊರತು ಅವರು ಯಾವ ಪ್ರದೇಶದವರು, ಪ್ರಾಂತ್ಯದವರು ಅನ್ನೋದಲ್ಲ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು, ಜೂನ್ 22: ಗುಜರಾತಿನ ಅಹಮದಾಬಾದ್ ನಲ್ಲಿ ಸಂಭವಿಸಿರುವ ವಿಮಾನ ದುರಂತ ಪ್ರತಿಯೊಬ್ಬ ಭಾರತೀಯನನ್ನು ತತ್ತರಿಸುವಂತೆ ಮಾಡಿದೆ. ನಗರದಲ್ಲಿ ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar), ಇತ್ತೀಚಿನ ವರ್ಷಗಳಲ್ಲಿ ನಾಗರಿಕ ವಿಮಾನ ಉತ್ತಮ ಸೇವೆ ನೀಡುತ್ತಿದ್ದ್ದ ಕಾರಣ ದುರಂತದ ಬಗ್ಗೆ ಕೇಳಿ ಅಶ್ಚರ್ಯವಾಗುತ್ತಿದೆ, ದೃಶ್ಯಗಳನ್ನು ನೋಡಿದೆ, ಬೆಂಕಿ ಹೊತ್ತಿಕೊಂಡಿದ್ದು ನೋಡಿದೆ, ಭಯಾನಕವಾಗಿದೆ, ಹೆಚ್ಚಿನ ಸಾವು ನೋವು ಸಂಭವಿಸಬಾರದು, ಮಡಿದವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಹೇಳಿದರು. ವಿಮಾನ ಪತನಕ್ಕೆ ಕಾರಣವೇನು ಅನೋದನ್ನು ನಾಗರಿಕ ವಿಮಾನಯಾನ ಇಲಾಖೆ ಪತ್ತೆ ಮಾಡುತ್ತದೆ ಎಂದು ಶಿವಕುಮಾರ್ ಹೇಳಿದರು.

ಇದನ್ನೂ ಓದಿ:  ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ