ಕಳೆದವರ್ಷ ಭಾರತದಲ್ಲಿ 22 ಲಕ್ಷ ಜನ ವಾಯುಮಾಲಿನ್ಯ ಸೃಷ್ಟಿಸುವ ಹೃದ್ರೋಗಗಳಿಗೆ ಬಲಿಯಾಗಿದ್ದಾರೆ: ಡಾ ಸಿಎನ್ ಮಂಜುನಾಥ್

ಕಳೆದವರ್ಷ ಭಾರತದಲ್ಲಿ 22 ಲಕ್ಷ ಜನ ವಾಯುಮಾಲಿನ್ಯ ಸೃಷ್ಟಿಸುವ ಹೃದ್ರೋಗಗಳಿಗೆ ಬಲಿಯಾಗಿದ್ದಾರೆ: ಡಾ ಸಿಎನ್ ಮಂಜುನಾಥ್

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 31, 2023 | 7:26 PM

ಆದರೆ ಹೃದ್ರೋಗಗಳಿಗೆ ಒತ್ತಡವೊಂದೇ ಕಾರಣವಾಗಲಾರದು, ವಾಯುಮಾಲಿನ್ಯ, ಸಕ್ಕರೆ ಕಾಯಿಲೆ, ಪ್ರೀ-ಡಯಾಬಿಟೀಸ್, ಅಧಿಕ ರಕ್ತದೊತ್ತಡ, ಫ್ಯಾಟಿ ಲಿವರ್, ಕೊಕೇನ್, ಹುಕ್ಕಾ ಬಾರ್ ಮೊದಲಾದವು ಸಹ ಕಾರಣವಾಗುತ್ತಿವೆ ಎಂದು ಹೇಳಿದ ಅವರು ಕಳೆದ ವರ್ಷ ಭಾರತದಲ್ಲಿ ವಾಯುಮಾಲಿನ್ಯ ಸೃಷ್ಟಿಸುವ ಕಾಯಿಲೆಗಳಿಗೆ 22 ಲಕ್ಷ ಜನ ಬಲಿಯಾಗಿದ್ದಾರೆ ಎಂದರು.

ಬೆಂಗಳೂರು: ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ ಸಿಎನ್ ಮಂಜುನಾಥ್ (Dr CN Manjunath) ಹೇಳುವ ಪ್ರಕಾರ ಒಬ್ಬ ವ್ಯಕ್ತಿಗೆ ಹೃದಯಾಘಾಗತವಾಗಲು (heart attack) ಹಲವು ಕಾರಣಗಳಿವೆ. ಒತ್ತಡ (stress) ಯಾವುದೇ ವ್ಯಕ್ತಿಗೆ ಒಳ್ಳೆಯದಲ್ಲ, ಒತ್ತಡದಲ್ಲಿ ಕೆಲಸ ಮಾಡುವ ವ್ಯಕ್ತಿ ಯೌವನ ಪ್ರಾಯದಲ್ಲೇ ಹೃದಯದ ಕಾಯಿಲೆಗಳಿಗೆ ಒಳಗಾಗುತ್ತಾನೆ. ಅವನು ಎಷ್ಟು ಗಂಟೆ ಕೆಲಸ ಮಾಡುತ್ತಾನೆ ಅನ್ನೋದು ಮುಖ್ಯವಲ್ಲ, ಅವನು ಕೆಲಸಮಾಡುವ ವಾತಾವರಣ ನಿರ್ಣಾಯಕ ಪಾತ್ರ ನಿರ್ವಹಿಸುತ್ತದೆ ಎಂದು ಡಾ ಮಂಜುನಾಥ್ ಹೇಳುತ್ತಾರೆ. ಆದರೆ ಹೃದ್ರೋಗಗಳಿಗೆ ಒತ್ತಡವೊಂದೇ ಕಾರಣವಾಗಲಾರದು, ವಾಯುಮಾಲಿನ್ಯ, ಸಕ್ಕರೆ ಕಾಯಿಲೆ, ಪ್ರೀ-ಡಯಾಬಿಟೀಸ್, ಅಧಿಕ ರಕ್ತದೊತ್ತಡ, ಫ್ಯಾಟಿ ಲಿವರ್, ಕೊಕೇನ್, ಹುಕ್ಕಾ ಬಾರ್ ಮೊದಲಾದವು ಸಹ ಕಾರಣವಾಗುತ್ತಿವೆ ಎಂದು ಹೇಳಿದ ಅವರು ಕಳೆದ ವರ್ಷ ಭಾರತದಲ್ಲಿ ವಾಯುಮಾಲಿನ್ಯ ಸೃಷ್ಟಿಸುವ ಕಾಯಿಲೆಗಳಿಗೆ 22 ಲಕ್ಷ ಜನ ಬಲಿಯಾಗಿದ್ದಾರೆ ಎಂದರು. ಹಾಗೆಯೇ, ತಮ್ಮಲ್ಲಿಗೆ ಚಿಕಿತ್ಸೆಗೆ ಬರುವ ಹೃದ್ರೋಗಿಗಳಲ್ಲಿ ಶೇಕಡಾ 25 ರಷ್ಟು ಜನರಲ್ಲಿ ಹೇಳಿರುವ ಕಾರಣಗಳ್ಯಾವೂ ಕಾಣಿಸುವುದಿಲ್ಲ ಎನ್ನುತ್ತಾರೆ. ಹಾಗಾಗಿ ಹೃದ್ರೋಗ, ಹೃದಯಾಘಾತಗಳಿಗೆ ಸಂಬಂಧಿಸಿದಂತೆ ಹೊಸ ಅಧ್ಯಯನಗಳು ನಡೆಯುತ್ತಿವೆ ಎಂದು ಡಾ ಮಂಜುನಾಥ್ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ