ಸಾರಿಗೆ ನೌಕರರ ದಿಢೀರ್ ಮುಷ್ಕರದ ಬಗ್ಗೆ ಮಾಹಿತಿ ಇಲ್ಲ: ಅನಂತ ಸುಬ್ಬರಾವ್
ಮುಷ್ಕರ ವಾಪಸ್ ಪಡೆಯಲು ಮನವಿ ಮಾಡ್ತೇವೆ. ಆದರೆ, ಇದೇ ಮೊದಲ ಮುಷ್ಕರವಲ್ಲ, ಇದೇ ಕೊನೆಯಾಗಲ್ಲ. ಜನರಿಗೆ ತೊಂದರೆ ಕೊಡದೆ ಮುಷ್ಕರ ವಾಪಸ್ ಪಡೆಯಿರಿ ಎಂದು ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್ ಸಾರಿಗೆ ನೌಕರರಿಗೆ ಮನವಿ ಮಾಡಿದರು.
ಬೆಂಗಳೂರು: ಸಾರಿಗೆ ನೌಕರರು ದಿಢೀರ್ ಮುಷ್ಕರ ಮಾಡಿದ್ದಾರೆ. ಸಾರಿಗೆ ನೌಕರರ ಮುಷ್ಕರದ ಬಗ್ಗೆ ಮಾಹಿತಿ ಇಲ್ಲ ಎಂದು ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್ ಹೇಳಿದರು.
ಕೊರೊನಾ ಸಂದರ್ಭದಲ್ಲಿ ಲಂಚ ನೀಡಿ ಡ್ಯೂಟಿ ಪಡೆಯುವ ಪರಿಸ್ಥಿತಿ ಇದೆ. ಶೇ 80ರಷ್ಟು ಅಧಿಕಾರಿಗಳು ಭ್ರಷ್ಟರು. ಕೊರೊನಾಗೆ ಬಲಿಯಾದರೆ ₹ 1 ಕೋಟಿ ಪರಿಹಾರಕ್ಕೆ ಮನವಿ ಮಾಡಿದ್ದೇವೆ. ಆದರೆ ಸುತ್ತೋಲೆಯಲ್ಲಿ ₹ 30 ಲಕ್ಷ ಕೊಡುವುದಾಗಿ ಬಂತು. ಅದು ಕೂಡ ಕೆಲಸದ ವೇಳೆ ಮೃತಪಟ್ಟರೆ ಮಾತ್ರ ಹಣ ಬರುತ್ತೆ. ಕೆಲವರಿಗೆ ಇನ್ನೂ ಹಣವೇ ತಲುಪಿಲ್ಲ ಎಂದು ವಿಷಾದಿಸಿದರು.
ಎಲ್ಲ ವಿಷಯಗಳ ಬಗ್ಗೆ ಸಚಿವ ಲಕ್ಷ್ಮಣ ಸವದಿಗೆ ಮಾಹಿತಿ ನೀಡಿದ್ದೇವೆ. ಸರ್ಕಾರದಿಂದ ಆಂಧ್ರಕ್ಕೆ ಒಂದು ಸಮಿತಿ ಕಳಿಸಿ ಎಂದಿದ್ದೇವೆ. ಸಚಿವ ಲಕ್ಷ್ಮಣ ಸವದಿ ಒಪ್ಪಿದ್ದಾರೆ ಎಂದು ವಿವರಿಸಿದರು.
‘ಇದೇ ಮೊದಲ ಮುಷ್ಕರವಲ್ಲ, ಇದೇ ಕೊನೆಯಾಗಲ್ಲ’ ಮುಷ್ಕರಕ್ಕೆ ಕರೆ ಕೊಟ್ಟವರನ್ನು ಕರೆದು ಚರ್ಚಿಸಿ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿಯವರಿಗೆ ತಿಳಿಸಿದ್ದೇವೆ. ಮಾತನಾಡುವುದಾಗಿ ಲಕ್ಷ್ಮಣ ಸವದಿಯವರು ಹೇಳಿದ್ದಾರೆ. ಹೀಗಾಗಿ, ಮುಷ್ಕರ ವಾಪಸ್ ಪಡೆಯಲು ಮನವಿ ಮಾಡ್ತೇವೆ. ಆದರೆ, ಇದೇ ಮೊದಲ ಮುಷ್ಕರವಲ್ಲ, ಇದೇ ಕೊನೆಯಾಗಲ್ಲ. ಜನರಿಗೆ ತೊಂದರೆ ಕೊಡದೆ ಮುಷ್ಕರ ವಾಪಸ್ ಪಡೆಯಿರಿ ಎಂದು ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್ ಸಾರಿಗೆ ನೌಕರರಿಗೆ ಮನವಿ ಮಾಡಿದರು.
‘ರಾಜ್ಯದಲ್ಲಿ ಯಾರು ಮುಷ್ಕರಕ್ಕೆ ಕರೆ ನೀಡುತ್ತಿದ್ದಾರೆ’ ಈಗ ರಾಜ್ಯದಲ್ಲಿ ಯಾಱರೋ ಮುಷ್ಕರಕ್ಕೆ ಕರೆ ನೀಡುತ್ತಿದ್ದಾರೆ. ಏಕೆಂದರೆ ರಾಜ್ಯದ ಜನರಲ್ಲಿ ಅಷ್ಟೊಂದು ಅಸಮಾಧಾನವಿದೆ. ಆದರೆ, ನಮ್ಮ ಬೆಂಬಲಿತರು ಯಾರೂ ಮುಷ್ಕರದಲ್ಲಿ ಭಾಗಿಯಾಗಿಲ್ಲ. ಸಾರಿಗೆ ನೌಕರರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ಅವರ ಬೇಡಿಕೆಗಳಿಗೆ ನಮ್ಮ ಬೆಂಬಲ ಇಲ್ಲ ಎಂದು ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್ ಹೇಳಿದರು.
ಸಾರಿಗೆ ನೌಕರರ ಮುಷ್ಕರ ವಿಫಲಗೊಳಿಸುವ ಉದ್ದೇಶವಿಲ್ಲ. ನಾವು ಸಾರಿಗೆ ನಿಗಮ, ನೌಕರರ ಪರವಾಗಿಯೇ ಇದ್ದೇವೆ. ಆಂಧ್ರದಲ್ಲಿ ಸಾರಿಗೆ ನಿಗಮದ ನೌಕರರನ್ನ ಸರ್ಕಾರಿ ನೌಕರರಾಗಿ ಮಾಡಿದ್ದಾರೆ. ಹಾಗೆಯೇ, ನಮ್ಮಲ್ಲಿ ಸಹ ಹಾಗೆ ಮಾಡಬೇಕು ಎಂದು ಸಲಹೆ ಮಾಡಿದರು.
ಸದ್ಯಕ್ಕಿಲ್ಲ ಬಸ್ | ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ಸಿಬ್ಬಂದಿ ತೀರ್ಮಾನ: ಕೋಡಿಹಳ್ಳಿ ಚಂದ್ರಶೇಖರ್
ಸಾರಿಗೆ ನೌಕರರ ಮತ್ತೊಂದು ಬಣದೊಂದಿಗೆ ಸಚಿವ ಸವದಿ ಸಂಧಾನ ಸಭೆ: ನೌಕರರ ಆಕ್ಷೇಪ