ಅಖಿಲ ಕರ್ನಾಟಕ ಪ್ರಾಣಿ ದಯಾ ಸಂಘದಿಂದ ಕಸಾಯಿಖಾನೆಗೆ ಸಾಗಿಸುತ್ತಿದ್ದ 59 ಎಮ್ಮೆಗಳ ರಕ್ಷಣೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 30, 2020 | 10:37 PM

ಅನಿಮಲ್ ವೆಲ್ಫೇರ್ ಬೋರ್ಡ್ ಇಂಡಿಯಾ, ಮಾದನಾಯಕನಹಳ್ಳಿ ಪೊಲೀಸರ ನೆರವಿನಿಂದ ಎಮ್ಮೆಗಳನ್ನು ರಕ್ಷಣೆ ಮಾಡಿದೆ.

ಅಖಿಲ ಕರ್ನಾಟಕ ಪ್ರಾಣಿ ದಯಾ ಸಂಘದಿಂದ ಕಸಾಯಿಖಾನೆಗೆ ಸಾಗಿಸುತ್ತಿದ್ದ 59 ಎಮ್ಮೆಗಳ ರಕ್ಷಣೆ
ಲಾರಿಗೆ ತುಂಬಿದ ಎಮ್ಮೆಗಳು
Follow us on

ನೆಲಮಂಗಲ: ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಎಮ್ಮೆಗಳನ್ನು ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ಅಖಿಲ ಕರ್ನಾಟಕ ಪ್ರಾಣಿ ದಯಾ ಸಂಘ (Animal welfare board of India) ರಕ್ಷಿಸಿದೆ.

ಎರಡು ಲಾರಿಗಳಲ್ಲಿ ಸುಮಾರು 59 ಎಮ್ಮೆಗಳನ್ನು ಕೇರಳದ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಅನಿಮಲ್ ವೆಲ್ಫೇರ್ ಬೋರ್ಡ್ ಇಂಡಿಯಾ, ಮಾದನಾಯಕನಹಳ್ಳಿ ಠಾಣೆ ಪೊಲೀಸರ ನೆರವಿನಿಂದ ಎಮ್ಮೆಗಳನ್ನು ರಕ್ಷಣೆ ಮಾಡಿದೆ. ಎಮ್ಮೆಗಳನ್ನು ಸಾಗಿಸುತ್ತಿದ್ದ ಲಾರಿಗಳನ್ನು ಬೆಂಗಳೂರು ಉತ್ತರ ತಾಲೂಕಿನ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ರಕ್ಷಿಸಿದ ಎಮ್ಮೆಗಳನ್ನು ತುಮಕೂರಿನ ಗುಬ್ಬಿ ಗೋ ಜ್ಞಾನ್ ಫೌಂಡೇಷನ್ (GGF)ಗೆ ಕಳುಹಿಲಾಗಿದೆ.

ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಹಸುಗಳ ರಕ್ಷಣೆ ಮಾಡಿದ ಹಿಂದೂ ಜಾಗರಣೆ ವೇದಿಕೆ

 

Published On - 9:50 pm, Wed, 30 December 20