ವಿರೋಧ ಪಕ್ಷದಲ್ಲಿದ್ದಾಗ ಯಡಿಯೂರಪ್ಪ ಏನು ಹೇಳಿದ್ದರು ನೆನಪು ಮಾಡ್ಕೊಳಿ: ಸಂಸದ ಪ್ರತಾಪ್ಗೆ ಸಾರಿಗೆ ನೌಕರರಿಂದ ಟಕ್ಕರ್
ಸಾರಿಗೆ ನೌಕರರು ಯಾರೂ ಅವಿದ್ಯಾವಂಥರಲ್ಲ, ಎಲ್ಲರೂ ವಿದ್ಯಾವಂಥರೇ. ಆರನೇ ವೇತನ ಆಯೋಗ ಮೊದಲು ಜಾರಿ ಮಾಡಿ. ಅದು ಬಿಟ್ಟು ಹೋರಾಟಗಾರರ ಬಗ್ಗೆ ಮಾತನಾಡುವುದಲ್ಲ: ಸಾರಿಗೆ ನೌಕರರ ಕೂಟದ ಜಂಟಿ ಕಾರ್ಯದರ್ಶಿ ಆನಂದ್
ಬೆಂಗಳೂರು: ಸಾರಿಗೆ ನೌಕರರು ಯಾರೂ ಅವಿದ್ಯಾವಂತರು ಅಲ್ಲ. ಸುಮ್ಮನೆ ಹೋರಾಟಗಾರರ ವಿರುದ್ಧ ಮಾತಾಡಬೇಡಿ. ಮೊದಲು 6ನೇ ವೇತನ ಆಯೋಗ ಜಾರಿ ಮಾಡಿ. ಇಲ್ಲಿ ಯಾರೂ ಯಾರನ್ನೂ ದಾರಿ ತಪ್ಪಿಸುತ್ತಿಲ್ಲ. ನಮ್ಮ ಬೇಡಿಕೆಯನ್ನು ಸಿಎಂ ಯಡಿಯೂರಪ್ಪ ಈಡೇರಿಸಲಿ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹಗೆ ಸಾರಿಗೆ ನೌಕರರ ಕೂಟದ ಜಂಟಿ ಕಾರ್ಯದರ್ಶಿ ಆನಂದ್ ತಿರುಗೇಟು ಕೊಟ್ಟಿದ್ದಾರೆ.
ರೈತರ ದಾರಿ ತಪ್ಪಿಸಿದ ರೈತ ಮುಖಂಡರೊಬ್ಬರು ಈಗ KSRTC ನೌಕರರ ದಾರಿ ತಪ್ಪಿಸುತ್ತಿದ್ದಾರೆ. ಆ ಮುಖಂಡನನ್ನು ನಾಯಕನನ್ನಾಗಿ ಮಾಡಿಕೊಂಡು ಹೋರಾಟ ಮಾಡುತ್ತಿರುವುದೇ ತಪ್ಪು ನಿರ್ಧಾರ. KSRTC ಈಗ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಹೋರಾಟ ನಡೆಸುವುದು ಸರಿಯಲ್ಲ. ಈಗ ಹೋರಾಟ ಮುಂದುವರಿದರೆ ಖಾಸಗೀಕರಣದ ಕೂಗು ಏಳುತ್ತದೆ. ಜನರೇ ಖಾಸಗೀಕರಣದ ಬಗ್ಗೆ ಧ್ವನಿ ಎತ್ತುತ್ತಾರೆ ಎಂದು ಟೀಕಿಸಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿಕೆಯನ್ನು ಸಾರಿಗೆ ನೌಕರರ ಕೂಟದ ಜಂಟಿ ಕಾರ್ಯದರ್ಶಿ ಆನಂದ್ ಖಂಡಿಸಿದ್ದಾರೆ.
ಸಾರಿಗೆ ನೌಕರರು ಯಾರೂ ಅವಿದ್ಯಾವಂಥರಲ್ಲ, ಎಲ್ಲರೂ ವಿದ್ಯಾವಂಥರೇ. ಆರನೇ ವೇತನ ಆಯೋಗ ಮೊದಲು ಜಾರಿ ಮಾಡಿ. ಅದು ಬಿಟ್ಟು ಹೋರಾಟಗಾರರ ಬಗ್ಗೆ ಮಾತನಾಡುವುದಲ್ಲ. ಯಾರು ಯಾರನ್ನೂ ದಾರಿ ತಪ್ಪಿಸ್ತಿಲ್ಲ. ನಮ್ಮ ಬೇಡಿಕೆಯನ್ನು ಸಿಎಂ ಯಡಿಯೂರಪ್ಪ ಈಡೇರಿಸಲಿ. ಮೊದಲು ವಿರೋಧ ಪಕ್ಷದಲ್ಲಿದ್ದಾಗ ಸಿಎಂ ಯಡಿಯೂರಪ್ಪ ಏನು ಹೇಳಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಿ ಎಂದು ಅವರು ಸಂಸದ ಪ್ರತಾಪ್ ಸಿಂಹ ವಿರುದ್ಧ ಹರಿಹಾಯ್ದರು.
ಸಂಸದ ಪ್ರತಾಪ್ ಸಿಂಹ ಏನಂದಿದ್ದರು? ರೈತರ ದಾರಿ ತಪ್ಪಿಸಿದ ರೈತ ಮುಖಂಡರೊಬ್ಬರು ಈಗ KSRTC ನೌಕರರ ದಾರಿ ತಪ್ಪಿಸುತ್ತಿದ್ದಾರೆ. ಆ ಮುಖಂಡನನ್ನು ನಾಯಕನನ್ನಾಗಿ ಮಾಡಿಕೊಂಡು ಹೋರಾಟ ಮಾಡುತ್ತಿರುವುದೇ ತಪ್ಪು ನಿರ್ಧಾರ. KSRTC ಈಗ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಹೋರಾಟ ನಡೆಸುವುದು ಸರಿಯಲ್ಲ. ಈಗ ಹೋರಾಟ ಮುಂದುವರಿದರೆ ಖಾಸಗೀಕರಣದ ಕೂಗು ಏಳುತ್ತದೆ. ಜನರೇ ಖಾಸಗೀಕರಣದ ಬಗ್ಗೆ ಧ್ವನಿ ಎತ್ತುತ್ತಾರೆ. ಜನರು ಸಾರಿಗೆ ಸಿಬ್ಬಂದಿ ವಿರುದ್ದ ಧ್ವನಿ ಎತ್ತುವಂತೆ ಮಾಡಬೇಡಿ. ಕೆಎಸ್ಆರ್ಟಿಸಿ ಸಿಬ್ಬಂದಿ ಮೇಲೆ ಮೇಲೆ ಜನರಿಟ್ಟಿರುವ ಪ್ರೀತಿ ಕಳೆದುಕೊಳ್ಳಬೇಡಿ. ಎಸ್ಮಾ ಜಾರಿ ಮಾಡುವ ಪರಿಸ್ಥಿತಿ ತಂದುಕೊಳ್ಳಬೇಡಿ. ಸಿದ್ದರಾಮಯ್ಯ ಬೇಡಿಕೆ ಈಡೇರಿಸಿ ಎಂದು ಹೇಳುತ್ತಾರೆ. ಆದರೆ, ಅವರ ಅವಧಿಯಲ್ಲಿ ಈ ಕೆಲಸ ಮಾಡಬಹುದಿತ್ತಲ್ಲಾ? ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.
ಯಾರ ಹೆಸರನ್ನೂ ನೇರವಾಗಿ ಹೇಳದೇ ಟೀಕೆ ಮುಂದುವರೆಸಿದ ಸಂಸದ ಪ್ರತಾಪ್ ಸಿಂಹ, ‘ಆ ಮುಖಂಡನನ್ನು ಕೆಎಸ್ಆರ್ಟಿಸಿ ನೌಕರರು ತಮ್ಮ ನಾಯಕ ಎಂದು ಮಾಡಿಕೊಡದ್ದೇ ತಪ್ಪು ನಿರ್ಧಾರ. ರೈತರನ್ನು ದಾರಿ ತಪ್ಪಿಸಿದವರನ್ನು ಕೆಎಸ್ಆರ್ಟಿಸಿ ನೌಕರರು ತಮ್ಮ ನಾಯಕನಾಗಿ ಮಾಡಿಕೊಂಡಾಗ ಇವರು ದಾರಿ ತಪ್ಪದೆ ಇರುತ್ತಾರಾ? ಪ್ರೊ. ನಂಜುಂಡಸ್ವಾಮಿ, ಕೆ.ಎಸ್. ಪುಟ್ಟಣ್ಣಯ್ಯ ಅವರು ಇದ್ದಾಗ ರೈತ ಮುಖಂಡರು, ಹೋರಾಟದ ಬಗ್ಗೆ ಗೌರವವಿತ್ತು.
ಅವರಿಬ್ಬರು ಅಸ್ತಂಗತ ಆದ ನಂತರ ಈಗ ಅಂತಹ ಮುಖ ಹೋರಾಟದಲ್ಲಿ ಇಲ್ಲ. ಎಲ್ಲಾ ವಿಭಾಗಗಳಲ್ಲಿ ಖಾಸಗೀಕರಣದ ಬಗ್ಗೆ ಚರ್ಚೆ ಆಗುತ್ತಿದೆ. ಕೆಎಸ್ಆರ್ಟಿಸಿ ನೌಕರರು ರಾಜ್ಯ ಸರಕಾರ ಸಂಕಷ್ಟದಲ್ಲಿ ಇರುವಾಗ ಈ ರೀತಿ ಹೋರಾಟಕ್ಕೆ ಇಳಿಯುವುದು ತಪ್ಪು. ಇದು ಮುಂದುವರಿದರೆ ಜನರೇ ಈ ವಿಭಾಗದಲ್ಲೂ ಖಾಸಗೀಕರಣದ ಬಗ್ಗೆ ಧ್ವನಿ ಎತ್ತುತ್ತಾರೆ. ಜನ ಈ ರೀತಿ ಧ್ವನಿ ಎತ್ತುವಂತೆ ಮಾಡಬೇಡಿ ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಕೆಪೂರ್ವಕ ಮನವಿ ಮಾಡಿಕೊಂಡರು.
ಇದನ್ನೂ ಓದಿ: Karnataka Bus Strike Live: ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ, ಪೊಲೀಸರ ಭದ್ರತೆಯೊಂದಿಗೆ ಕೆಲ ಬಸ್ ಸಂಚಾರ
ಸಾರಿಗೆ ನೌಕರರನ್ನು ಮನವೊಲಿಸುವ ಪ್ರಶ್ನೆಯೇ ಇಲ್ಲ: ಬಿ.ಎಸ್ ಯಡಿಯೂರಪ್ಪ