ಬೆಂಗಳೂರು: ಕೊರೊನಾ ಮಹಾಮಾರಿ ದೇಶದಲ್ಲಿ ಹೆಚ್ಚಾಗುತ್ತಿದ್ದು, ಸೋಂಕಿನ ತೀವ್ರತೆಯಿಂದ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮೃತರ ಅಂತ್ಯಕ್ರಿಯೆಗಾಗಿ ಆ್ಯಂಬುಲೆನ್ಸ್ಗಳು ಸಾಲು ಸಾಲಾಗಿ ಮೇಡಿ ಅಗ್ರಹಾರದ ಚಿತಾಗಾರದ ಬಳಿ ನಿಂತಿವೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ 8 ಮೃತದೇಹಗಳು ಬಂದಿವೆ. ಒಂದು ಶವ ಅಂತ್ಯಕ್ರಿಯೆ ಮಾಡಲು ಕನಿಷ್ಠ ಒಂದೂವರೆ ಗಂಟೆಯಾದರೂ ಬೇಕು. ಮೃತ ದೇಹಗಳ ಅಂತ್ಯಕ್ರಿಯೆ ವಿಳಂಬವಾಗುತ್ತಿದೆ. ನಗರದ ಕೆಂಗೇರಿ ವಿದ್ಯುತ್ ಚಿತಾಗಾರಕ್ಕೆ 8 ಕೊವಿಡ್ ಮೃತದೇಹಗಳು ಬಂದಿವೆ.
ರಾಜಧಾನಿಯಲ್ಲಿ ಕೊವಿಡ್ ಮರಣ ಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ರಾಜಧಾನಿಯಲ್ಲಿ ಇಂದಿನಿಂದ ಮೂರು ಚಿತಾಗಾರಕ್ಕೆ ಅನುಮತಿ ನೀಡಲಾಗಿದೆ. ಬನಶಂಕರಿ ಚಿತಾಗಾರದಲ್ಲಿ ಇಂದಿನಿಂದ ಕೊವಿಡ್ ಮೃತರ ಶವ ಸಂಸ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆಯಿಂದ ಇಲ್ಲಿಯವರೆಗೆ 2 ಕೊವಿಡ್ ಶವದ ಸಂಸ್ಕಾರ ನೆರವೇರಿಸಲಾಗಿದೆ.
ಪಿಪಿಇ ಕಿಟ್ ಇಲ್ಲದೇ ಚಿತಾಗಾರ ಸಿಬ್ಬಂದಿಗಳ ಗೋಳಾಟ ಹೆಚ್ಚಾಗಿದೆ. ಬಿಬಿಎಂಪಿ ಪಿಪಿಇ ಕಿಟ್ ಪೂರೈಸಿಲ್ಲ. ಆಂಬ್ಯುಲೆನ್ಸ್ ಚಾಲಕನಿಗೂ ಪಿಪಿಇ ಕಿಟ್ ಇಲ್ಲ. ಬಿಬಿಎಂಪಿಯ ಈ ನಿರ್ಲಕ್ಷ್ಯಕ್ಕೆ ಯಾರು ಹೊಣೆ? ಎಂಬ ಪ್ರಶ್ನೆ ಕೇಳಿ ಬರುತ್ತಿದೆ.
ಯಲಹಂಕದ ಮೇಡಿ ಅಗ್ರಹಾರ ಚಿತಗಾರದಲ್ಲಿ ಸಿಬ್ಬಂದಿಗಳ ಬೇಜವಾಬ್ದಾರಿ
ಮೃತರ ಸಂಬಂಧಿಕರು ಶವ ಸಂಸ್ಕಾರ ಮುಗಿದ ನಂತರ ಪಿಪಿಇ ಕಿಟ್ಗಳನ್ನು ಚಿತಾಗಾರದ ಆವರಣದಲ್ಲೇ ಬಿಸಾಡುತ್ತಿದ್ದಾರೆ. ಚಿತಾಗಾರದಲ್ಲಿ ಅಂತ್ಯಕ್ರಿಯೆ ವೇಳೆ ಮೃತರ ಸಂಬಂಧಿಕರು ಪಿಪಿಇ ಕಿಟ್ಗಳನ್ನ ಧರಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಪೂಜೆ ನಂತರ ಚಿತಾಗಾರದ ಆವರಣದಲ್ಲೇ ಪಿಪಿಇ ಕಿಟ್ ಎಸೆದು ಬೇಜಾವಾಬ್ದಾರಿ ತೋರುತ್ತಿದ್ದಾರೆ.
ಸುಮನಹಳ್ಳಿ ಚಿತಾಗರದಲ್ಲಿ 13 ಕೊವಿಡ್ ಮೃತದೇಹ ಅಂತ್ಯಕ್ರಿಯೆ
ವಿವಿಧ ಆಸ್ಪತ್ರೆಗಳಿಂದ ಆ್ಯಂಬುಲೆನ್ಸ್ ಮೂಲಕ ತರಲಾಗಿದ್ದ ಮೃತದೇಹವನ್ನು ಕೆಲವೇ ಕೆಲವು ಸಂಬಂಧಿಕರಿಗೆ ನೋಡಲು ಅವಕಾಶ ಕಲ್ಪಿಸಲಾಗಿದೆ. ಇನ್ನೂ ನಿರಂತರವಾಗಿ ಮೃತದೇಹ ಬರುತ್ತಲೇ ಇದೆ.
ಇದನ್ನೂ ಓದಿ: ಗುಜರಾತ್ನಲ್ಲಿ ಕೊವಿಡ್ನಿಂದ ಮೃತಪಟ್ಟವರ ಸಂಖ್ಯೆ ಏರಿಕೆ; ಒಂದೇ ಚಿತೆಯಲ್ಲಿ 5 ಶವಗಳ ಸಂಸ್ಕಾರ
ಕೊವಿಡ್ ಲಸಿಕೆ ಪಡೆದ ಮರುದಿನವೇ ನಟ ವಿವೇಕ್ಗೆ ಹೃದಯಾಘಾತ! ಆಸ್ಪತ್ರೆಗೆ ದಾಖಲು