ಜ.27 ರಂದು ರಾಜ್ಯಕ್ಕೆ ಅಮಿತ್ ಶಾ: ಕೇಂದ್ರ ಗೃಹ ಸಚಿವಾಲಯ ತಂಡದಿಂದ ಧಾರವಾಡ ಕೃಷಿ ವಿವಿ ಪರಿಶೀಲನೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 25, 2023 | 3:25 PM

ಜನವರಿ 27 ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಇಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದು, ಕರ್ನಾಟಕ ಉಸ್ತುವಾರಿ‌ ಅರುಣ ಸಿಂಗ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ‌ ಸಿಎಂ ಜಗದೀಶ ಶೆಟ್ಟರ್ ಸೇರಿದಂತೆ ಅನೇಕರ ಜೊತೆ ಸಭೆ ನಡೆಸಲಿದ್ದಾರೆ.

ಜ.27 ರಂದು ರಾಜ್ಯಕ್ಕೆ ಅಮಿತ್ ಶಾ: ಕೇಂದ್ರ ಗೃಹ ಸಚಿವಾಲಯ ತಂಡದಿಂದ ಧಾರವಾಡ ಕೃಷಿ ವಿವಿ ಪರಿಶೀಲನೆ
ಅಮಿತ್ ಶಾ
Follow us on

ಧಾರವಾಡ: ಗೃಹ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವ ವಿದ್ಯಾಲಯ ಕ್ಯಾಂಪಸ್​ ಉದ್ಘಾಟನೆ ಮಾಡಲು ಜ.28ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನಲೆ ಇಂದು(ಜ.25) ಕೇಂದ್ರ ಗೃಹ ಸಚಿವಾಲಯದ ತಂಡ ಧಾರವಾಡ ಕೃಷಿ ವಿವಿ ಜಾಗವನ್ನ ಪರಿಶೀಲಿಸಿದ್ದು, ಇದಕ್ಕೆ ಧಾರವಾಡ ಡಿಸಿ ಗುರುದತ್ತ ಹೆಗಡೆ ಸಾಥ್ ನೀಡಿದ್ದಾರೆ.  ಜ.27 ಶುಕ್ರವಾರ ರಾತ್ರಿ ಹುಬ್ಬಳ್ಳಿ ಏರ್​​ಪೋರ್ಟ್​ಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಆಗಮಿಸಲಿದ್ದಾರೆ. ಜ.28ರಂದು ಬೆಳಗ್ಗೆ 10.30ಕ್ಕೆ ಕೆಎಲ್​ಇ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಧಾರವಾಡದ ವಿಧಿವಿಜ್ಞಾನ ವಿವಿಯ ಕ್ಯಾಂಪಸ್ ಶಂಕು ಸ್ಥಾಪನೆ ಮಾಡಲಿದ್ದಾರೆ. ನಂತರ ಅಲ್ಲಿಂದ ಮಧ್ಯಾಹ್ನ 1:30ಗಂಟೆಗೆ ಕುಂದಗೋಳಕ್ಕೆ ಭೇಟಿ ನೀಡಿ ಶಂಭುಲಿಂಗ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಗೋಡೆ ಬರಹಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಕುಂದಗೋಳದಲ್ಲಿ ಬಹುದೊಡ್ಡ ರೋಡ್ ಶೋ ದಲ್ಲಿ ಭಾಗಿಯಾಗಿ ಗಾಳಿ ಮರೆಮ್ಮನ ದೇವಸ್ಥಾನದಿಂದ ಮೂರಂಗಡಿ ಕ್ರಾಸ್​ವರೆಗೂ ಸುಮಾರು ಒಂದೂವರೆ ಕಿ.ಮೀ ರೋಡ್ ಶೋ ಮಾಡಲಿದ್ದಾರೆ.

ಚುನಾವಣಾ ಹೊಸ್ತಿಲಲ್ಲಿ ಅಮೀತ್ ಶಾ ಆಗಮನದಿಂದ ಧಾರವಾಡ ಗ್ರಾಮಾಂತರ ಜಿಲ್ಲೆಯಲ್ಲಿ ಬೂಸ್ಟರ್ ಡೋಸ್ ನೀಡಿದಂತಾಗಲಿದ್ದು, ನಂತರ 3.25 ಗಂಟೆಗೆ ಹೆಲಿಕಾಪ್ಟರ್ ಮೂಲಕ ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿಗೆ ತೆರಳಲಿದ್ದು, ಅಲ್ಲಿ ಪ್ರಮುಖ‌ರ ಜೊತೆ ಸಭೆ ನಡೆಸಲಿದ್ದಾರೆ. ಇದರಲ್ಲಿ ಕರ್ನಾಟಕ ಉಸ್ತುವಾರಿ‌ ಅರುಣ ಸಿಂಗ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ‌ ಸಿಎಂ ಜಗದೀಶ ಶೆಟ್ಟರ್, ನಳೀನ್ ಕುಮಾರ ಕಟೀಲ್ ಸೇರಿದಂತೆ ಅನೇಕ ಪ್ರಮುಖರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ