Sign In

By signing in or creating an account, you agree with Associated Broadcasting Company's Terms & Conditions and Privacy Policy.

Lalbagh: ಬೆಂಗಳೂರಿನ ಲಾಲ್​ಬಾಗ್​ಗೆ ಭೇಟಿ ನೀಡಿದರೆ ಇವುಗಳನ್ನು ಮಿಸ್ ಮಾಡದೆ ನೋಡಿ, ಎಂಜಾಯ್ ಮಾಡಿ

ಲಾಲ್‌ಬಾಗ್ ಬೆಂಗಳೂರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ನಗರದ ಹೃದಯಭಾಗದಲ್ಲಿರುವ ಇದು 240 ಎಕರೆ ಪ್ರದೇಶದಲ್ಲಿರುವ ವಿಸ್ತಾರವಾದ ಉದ್ಯಾನವನ. ಇಲ್ಲಿ ಎಲ್ಲಾ ರೀತಿಯ ಸಸ್ಯ ರಾಶಿಯನ್ನು ನೋಡಬಹುದು. ಲಾಲ್​ ಬಾಗ್​ಗೆ ಭೇಟಿ ನೀಡಿದಾಗ ಇವುಗಳನ್ನು ಮಿಸ್ ಮಾಡಿಕೊಳ್ಳಬೇಡಿ.

TV9 Web
| Updated By: ಆಯೇಷಾ ಬಾನು

Updated on: Jan 25, 2023 | 3:24 PM

ಲಾಲ್‌ಬಾಗ್ ಬೆಂಗಳೂರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ನಗರದ ಹೃದಯಭಾಗದಲ್ಲಿರುವ ಇದು 240 ಎಕರೆ ಪ್ರದೇಶದಲ್ಲಿರುವ ವಿಸ್ತಾರವಾದ ಉದ್ಯಾನವನ. ಆಕಾಶದೆತ್ತರಕ್ಕೆ ನಿಂತ ಕಲ್ಲು ಕಟ್ಟಡಗಳ ನಡುವೆ ಪ್ರಕೃತಿ ಪ್ರಿಯರಿಗೆ ಸ್ವರ್ಗದಂತಿರುವ ಲಾಲ್​ಬಾಗ್​ಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು. ಇಲ್ಲಿಯ ಪ್ರಮುಖ ಆಕರ್ಷಣೆ ಎಂದರೆ ಬ್ರಿಟಿಷರ ಕಾಲದಲ್ಲಿ ಬೆಳೆಸಲಾದ ಶತಮಾನಗಳಷ್ಟು ಹಳೆಯದಾದ ಮರಗಳು. ಇಲ್ಲಿ ಎಲ್ಲಾ ರೀತಿಯ ಸಸ್ಯ ರಾಶಿಯನ್ನು ನೋಡಬಹುದು. ಲಾಲ್​ ಬಾಗ್​ಗೆ ಭೇಟಿ ನೀಡಿದಾಗ ಇವುಗಳನ್ನು ಮಿಸ್ ಮಾಡಿಕೊಳ್ಳಬೇಡಿ.

1 / 7
ಜನರನ್ನು ಸ್ವಾಗತಿಸುತ್ತದೆ ಪಕ್ಷಿಗಳ ಕಲರವ: ನೀವು ಬೆಳ್ಳಂ ಬೆಳಗ್ಗೆ ಲಾಲ್ ಬಾಗ್ ಅನ್ನು ಪ್ರವೇಶಿಸುತ್ತಿದ್ದಂತೆ ನಿಮಗೆ ಪಕ್ಷಗಳ ಕಲರವ ಕೇಳಿಸುತ್ತದೆ. ಗಿಳಿಗಳು, ಕಾಗೆ, ಮೈನಾ, ಚಿಲಿಪಿಲಿ ಸೇರಿದಂತೆ ಕೆಲ ಪಕ್ಷಗಳ ಮಧುರ ಧ್ವನಿ ನಿಮ್ಮನ್ನು ಸ್ವಾಗತಿಸುತ್ತದೆ.

2 / 7
ಲಾಲ್‌ಬಾಗ್ ಗ್ಲಾಸ್ ಹೌಸ್: ಲಾಲ್‌ಬಾಗ್ ಗ್ಲಾಸ್ ಹೌಸ್ ಲಂಡನ್‌ನ ಹೈಡ್ ಪಾರ್ಕ್‌ನಲ್ಲಿರುವ ಕ್ರಿಸ್ಟಲ್ ಪ್ಯಾಲೇಸ್‌ನಿಂದ ಸ್ಫೂರ್ತಿ ಪಡೆದ ಗಾಜು ಮತ್ತು ಕಬ್ಬಿಣದ ರಚನೆಯಂತಹ ಅರಮನೆಯಾಗಿದೆ. ಲಾಲ್‌ಬಾಗ್ ಗ್ಲಾಸ್ ಹೌಸ್ ಅನ್ನು 1989 ರಲ್ಲಿ ನಿರ್ಮಿಸಲಾಯಿತು ಮತ್ತು 2004 ರಲ್ಲಿ ನವೀಕರಿಸಲಾಯಿತು. ಇದು ಲಾಲ್‌ಬಾಗ್‌ಗೆ ಭೇಟಿ ನೀಡುವವರ ಪ್ರಮುಖ ಆಕರ್ಷಣೆಯಾಗಿದೆ.

3 / 7
ಲಾಲ್‌ಬಾಗ್ ಲೇಕ್: ಲಾಲ್‌ಬಾಗ್​ನ ದಕ್ಷಿಣ ಭಾಗದಲ್ಲಿರುವ ಲೇಕ್ ಪ್ರವಾಸಿಗರಿಗೆ, ಬೆಳಗ್ಗೆ-ಸಂಜೆ ವಾಕಿಂಗ್ ಬರುವವರಿಗೆ ಹೆಚ್ಚು ಇಷ್ಟ ಆಗುವ ಜಾಗ. ಇಲ್ಲಿ ನಯಾಗರ ಮಾದರಿಯಲ್ಲಿ ಮಿನಿ ಫಾಲ್ಸ್​ ಸೃಷ್ಟಿಸಲಾಗಿದೆ. ಹಾಗೂ ಕಮಲದ ಕೊಂಡಗಳಿದ್ದು ಬೆಳಗಿನ ಜಾವ ನೀರಿನ ಮೇಲೆ ಹಾರಾಡುವ ಹಕ್ಕಿಗಳ ದೃಶ್ಯಗಳು ಮನಸ್ಸಿಗೆ ಮುದ ನೀಡುತ್ತವೆ.

4 / 7
ಇನ್ನು ಲಾಲ್‌ಬಾಗ್​ನಲ್ಲಿ ವರ್ಷವಿಡೀ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ಲಾಲ್‌ಬಾಗ್​ ಪುಷ್ಪ ಪ್ರದರ್ಶನ ನಡೆಯುತ್ತದೆ. ಬೇಸಿಗೆಯಲ್ಲಿ ಮಾವು/ಹಲಸು ಹಬ್ಬಗಳು, ಬ್ಯಾಂಡ್ ಸ್ಟ್ಯಾಂಡ್‌ನಲ್ಲಿ ಸಾಂಸ್ಕೃತಿಕ ಪ್ರದರ್ಶನಗಳು ನಡೆಯುತ್ತವೆ.

5 / 7
ಲಾಲ್‌ಬಾಗ್‌ನಲ್ಲಿರುವ ಇತರ ಆಕರ್ಷಣೆಗಳು: ಬೋನ್ಸಾಯ್ ಗಾರ್ಡನ್, ದೊಡ್ಡ ಬಂಡೆ ಮತ್ತು ಕೆಂಪೇಗೌಡ ಕಾವಲು ಗೋಪುರ, ಹೂವಿನ ಗಡಿಯಾರ, ಹಾಗೂ ಸಸ್ಯ ಜಗತ್ತಿನ ಬಗ್ಗೆ ಆಸಕ್ತಿ ಇರುವವರಿಗೆ ಇದೊಂದು ವಿಕಿಪೀಡಿಯಾ.

6 / 7
ಇನ್ನು ಲಾಲ್‌ಬಾಗ್ ಪ್ರತಿದಿನ ಬೆಳಿಗ್ಗೆ 6 ರಿಂದ ಸಂಜೆ 7 ರವರೆಗೆ ತೆರೆದಿರುತ್ತದೆ. ಬೆಳಗ್ಗೆ ( 6ರಿಂದ9) ಮತ್ತು ಸಂಜೆ(6ರಿಂದ 7)ಯ ಸಮಯದಲ್ಲಿ ಪ್ರವೇಶ ಉಚಿತ. ಲಾಲ್‌ಬಾಗ್‌ನಲ್ಲಿ ಕರ್ನಾಟಕ ಸರ್ಕಾರ ತೋಟಗಾರಿಕೆ ಇಲಾಖೆ ಮತ್ತು ಕೆಲವು ಖಾಸಗಿ ಮಾರಾಟಗಾರರಿಂದ ನಡೆಸಲ್ಪಡುವ ಹಣ್ಣು, ಜೂಸ್​, ವಿವಿಧ ತಿಂಡಿಗಳ ಅಂಗಡಿಗಳಿವೆ. ಲಾಲ್‌ಬಾಗ್​ನ ಪ್ರತಿ ದಿಕ್ಕಿಗೂ ಒಂದು ಪ್ರವೇಶದ್ವಾರವಿದೆ.

7 / 7
Follow us
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ

ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!

ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?

ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ

ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ

ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ

ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ

ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್

ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ

ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ