- Kannada News Photo gallery Anushree Birthday: Fans friends and celebrities wish happy birthday to star anchor
Anchor Anushree Birthday: ನಟಿ, ನಿರೂಪಕಿ ಅನುಶ್ರೀ ಜನ್ಮದಿನ; ಇಲ್ಲಿವೆ ಮಾತಿನ ಮಲ್ಲಿಯ ಕ್ಯೂಟ್ ಫೋಟೋಗಳು
Anchor Anushree Photos: ಸ್ಟಾರ್ ಆ್ಯಂಕರ್ ಅನುಶ್ರೀ ಅವರ ಹುಟ್ಟುಹಬ್ಬಕ್ಕೆ ಅನೇಕರು ವಿಶ್ ಮಾಡುತ್ತಿದ್ದಾರೆ. ಅವರ ಫೋಟೋಗಳನ್ನು ಹಂಚಿಕೊಂಡು ಶುಭ ಕೋರಲಾಗುತ್ತಿದೆ.
Updated on: Jan 25, 2023 | 3:30 PM

ಕನ್ನಡ ಕಿರುತೆರೆ ಲೋಕದಲ್ಲಿ ಅನುಶ್ರೀ ಅವರು ಸಖತ್ ಜನಪ್ರಿಯತೆ ಪಡೆದಿದ್ದಾರೆ. ಕಾರ್ಯಕ್ರಮಗಳ ನಿರೂಪಣೆಯಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ.

ಇಂದು (ಜ.25) ನಿರೂಪಕಿ ಅನುಶ್ರೀ ಅವರಿಗೆ ಜನ್ಮದಿನದ ಸಂಭ್ರಮ. ಆ ಪ್ರಯುಕ್ತ ಅವರಿಗೆ ಅಭಿಮಾನಿಗಳು, ಆಪ್ತರು ಹಾಗೂ ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ.

ತಮ್ಮ ಚಿಟಪಟ ಮಾತಿನಿಂದಾಗಿ ಅನುಶ್ರೀ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರು ಟಿವಿ ಶೋಗಳನ್ನು ನಡೆಸಿಕೊಡುವ ಶೈಲಿಗೆ ವೀಕ್ಷಕರು ಫಿದಾ ಆಗಿದ್ದಾರೆ.

ಕಿರುತೆರೆಯಲ್ಲಿ ಅನುಶ್ರೀ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಹಲವು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತ ಅವರಿಗೆ ಸಲ್ಲುತ್ತದೆ.

ಅನುಶ್ರೀ ಅವರು ನಿರೂಪಕಿ ಮಾತ್ರವಲ್ಲದೇ ನಟಿ ಕೂಡ ಹೌದು. ‘ಬೆಂಕಿ ಪಟ್ಣ’, ‘ಮಾದ ಮತ್ತು ಮಾನಸಿ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿರುವ ಅನುಶ್ರೀ ಅವರು ಅನೇಕ ಸೆಲೆಬ್ರಿಟಿಗಳ ಸಂದರ್ಶನ ಮಾಡಿದ್ದಾರೆ. ವಿಶೇಷ ರೀತಿಯಲ್ಲಿ ಸಂದರ್ಶನ ಮಾಡುವ ಅವರಿಗೆ ಅಪಾರ ಸಂಖ್ಯೆಯ ಫ್ಯಾನ್ಸ್ ಇದ್ದಾರೆ.

ಅನುಶ್ರೀ ಅವರು ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುವುದುಂಟು. ಆದರೆ ಅವುಗಳಿಗೆಲ್ಲ ಅವರು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಅದರ ಬದಲು ಕೆಲಸದ ಕಡೆಗೆ ಗಮನ ನೀಡುತ್ತಾರೆ.




