ಬೆಂಗಳೂರು: ನಗರದ ಫ್ರೀಡಂ ಪಾರ್ಕ್ನಲ್ಲಿ ಪಾಕ್ ಪರ ಘೋಷಣೆ ಕೂಗಿ ದೇಶದ್ರೋಹ ಆರೋಪದಲ್ಲಿ ಬಂಧನಕ್ಕೀಡಾಗಿರುವ ಅಮೂಲ್ಯಾ ಕುರಿತು ಮತ್ತೊಂದು ‘ವಿಡಿಯೋ ಸಾಕ್ಷ್ಯ’ ಲಭ್ಯವಾಗಿದೆ.
ಮಂಗಳೂರು ಏರ್ಪೋರ್ಟ್ನಲ್ಲಿ ವಂದೇಮಾತರಂ ಹೇಳುವಂತೆ ಪೋಸ್ಟ್ ಕಾರ್ಡ್ ಸಂಪಾದಕ ವಿಕ್ರಮ್ ಹೆಗ್ಡೆಗೆ ಒತ್ತಾಯಿಸುವ ವಿಡಿಯೋ ಮಾಡಿದ್ದು ಇದೇ ಅಮೂಲ್ಯಾ ಎಂದು ತಿಳಿದುಬಂದಿದೆ. ಅರ್ನಾಬ್ ಗೋಸ್ವಾಮಿಗೆ ಫ್ಲೈಟ್ನಲ್ಲಿ ಕುನಾಲ್ ಎಂಬಾತ ಪ್ರಶ್ನೆ ಕೇಳಿ ವಿಡಿಯೋ ಮಾಡಿದ್ದ. ಕುನಾಲ್ ಮಾಡಿದ್ದ ವಿಡಿಯೋ ಬಹಳ ವೈರಲ್ ಅಗಿತ್ತು. ಈ ವಿಡಿಯೋ ನೋಡಿದ ಅಮೂಲ್ಯಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಳು. ವೈರಲ್ ಕ್ರೇಜ್ನಿಂದ ಇದೇ ದಾರಿ ಹಿಡಿದ ಅಮೂಲ್ಯಾ ಬಂಧನಕ್ಕೂ 15 ದಿನ ಮುಂಜೆ ಮಂಗಳೂರು ಏರ್ಪೋರ್ಟ್ನಲ್ಲಿ ವಿಡಿಯೋ ಮಾಡಿ ಬಿಟ್ಟಿದ್ದಾಳೆ ಎನ್ನಲಾಗಿದೆ.
ವೈರಲ್ ಕ್ರೇಜ್ನಿಂದ ಪ್ರಭಾವಿತರಾಗಿದ್ದ ಅಮೂಲ್ಯಾ & ಗ್ಯಾಂಗ್:
ವೈರಲ್ ಆಗಬೇಕು ಎಂಬ ಹುಚ್ಚಿನಲ್ಲಿದ ಅಮೂಲ್ಯಾ ಮತ್ತು ಸ್ನೇಹಿತರು ಮಂಗಳೂರು ಏರ್ಪೋರ್ಟ್ನಲ್ಲಿ ಸಿಕ್ಕ ವಿಕ್ರಮ್ ಹೆಗ್ಡೆಗೆ ವಂದೇಮಾತರಂ ಹೇಳುವಂತೆ ಒತ್ತಾಯಿಸಿದ್ದರು. ನಜ್ಮಾ ನಜೀರ್, ಕವಿತಾ ರೆಡ್ಡಿ ಮತ್ತು ಅಮೂಲ್ಯಾ ಸೇರಿಕೊಂಡು ಚಿತ್ರಿಸಿರುವ ವಿಡಿಯೋ ಇದಾಗಿತ್ತು.
ರಾಷ್ಟ್ರದಲ್ಲಿರುವ ಮೀಸಲಾತಿ ಮತ್ತು ಪೌರತ್ವ ವಿಚಾರವಾಗಿ ಪ್ರಶ್ನಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ನಂತರ ಈ ವಿಡಿಯೋ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅರ್ನಾಬ್ ಗೋಸ್ವಾಮಿಗೆ ಮಾಡಿದ್ದ ವಿಡಿಯೋ ನೋಡಿಯೇ ಅಮೂಲ್ಯ & ಗ್ಯಾಂಗ್ ಹೀಗೆ ಮಾಡಿದ್ರು ಎನ್ನುವ ಅಂಶ ಬಯಲಾಗಿದೆ.
Published On - 12:27 pm, Fri, 28 February 20