
ಹಾಸನ, ಅಕ್ಟೋಬರ್ 20: ಹಾಸನಾಂಬ ದೇವಿ ದರ್ಶನ (Hasamanamba Darshan) ಪಡೆದು ವಾಪಾಸ್ ಬೈಕ್‌ನಲ್ಲಿ ಬರುತ್ತಿದ್ದವರಿಗೆ ಇನ್ನೋವಾ ಕಾರು ಡಿಕ್ಕಿಯಾಗಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಗ್ಗಲಿಕಾವಲಿನಲ್ಲಿ ನಡೆದಿದೆ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಒಬ್ಬ ಯುವತಿಯ ಸ್ಥಿತಿ ಗಂಭೀರವಾಗಿದೆ. ಈ ಕುರಿತು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಿಂದ ಯಮಹಾ ಬೈಕ್‌ನಲ್ಲಿ ಬಸವರಾಜು, ಅನು (19), ಛಾಯಾ (20) ಹಾಸನಾಂಬೆಯ ದರ್ಶನ ಮಾಡಲು ಬಂದಿದ್ದರು. ದರ್ಶನ ಮುಗಿಸಿ ಒಂದೇ ಬೈಕ್‌ನಲ್ಲಿ ಬರುತ್ತಿದ್ದ ಮೂವರು ಕಗ್ಗಲಿಕಾವಲು ಫಾರೆಸ್ಟ್ ಬಳಿ ಅಪಘಾತಕ್ಕೊಳಗಾಗಿದ್ದಾರೆ. ಬಸವರಾಜು ಹಾಗೂ ಅನುಶ್ರೀ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಛಾಯಾ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚನ್ನರಾಯಪಟ್ಟಣ ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರು, ಹೌಸಿಂಗ್ ಬೋರ್ಡ್ ಬಳಿ ವೇಗವಾಗಿ ಬಂದು ಮೊದಲು ಆ್ಯಕ್ಟಿವ್ ಹೋಂಡಾಗೆ ಡಿಕ್ಕಿ ಹೊಡೆದು ನಂತರ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಮೊಹಮ್ಮದ್ ಶಾಹಿದ್‌ಗೂ ಗಂಭೀರ ಗಾಯಗಳಾಗಿವೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಲಿಂಗಾಪುರ ಗ್ರಾಮದಲ್ಲಿ ಆಸ್ತಿ ವಿವಾದದಿಂದ ಯುವಕನ ಮೇಲೆ ಹಲ್ಲೆ ನಡೆದಿತ್ತು. ಈಗ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪೂರ್ವಜರಿಂದ ಬಂದ 10 ಎಕರೆ ಜಮೀನಿನಲ್ಲಿ ಪಾಲು ಕೇಳಿದ ವಿಚಾರವಾಗಿ ಹನಮಂತ ಮರೆಮ್ಮನವರ ಹಾಗೂ ಅವನ ಸಹೋದರಿ ಯಮನವ್ವ ಕುಟುಂಬಗಳ ನಡುವೆ ಕಳೆದ ಏಳು ತಿಂಗಳಿಂದ ಮನಸ್ತಾಪ ನಡೆಯುತ್ತಿತ್ತು.
ಅಕ್ಟೋಬರ್ 16ರಂದು ಹೊಲದಿಂದ ಮನೆಗೆ ಬರುತ್ತಿದ್ದ ವೇಳೆ ಜಗಳ ನಡೆದು, ಯಮನವ್ವನ ಸಂಬಂಧಿಗಳಾದ ಪ್ರಕಾಶ್, ಗಣೇಶ, ಯಂಕಪ್ಪ, ರಂಗಪ್ಪ, ಬಸಪ್ಪ ಸೇರಿದಂತೆ ಹಲವರು ಹನಮಂತನ ಮಗ ವಿಶ್ವನಾಥನ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿದರು. ತೀವ್ರವಾಗಿ ಗಾಯಗೊಂಡ ವಿಶ್ವನಾಥನನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.