ಸರ್ಕಾರದ ಕಟ್ಟುನಿಟ್ಟಿನ ಕೊವಿಡ್ ನಿಯಮವನ್ನು ಶ್ರೀರಾಮುಲು, ಆನಂದ್ ಸಿಂಗ್ ಅವರೇ ಉಲ್ಲಂಘಿಸಿದರು!

|

Updated on: Apr 21, 2021 | 4:17 PM

ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣಾ ಪ್ರಚಾರದ ವೇಳೆ ಸಚಿವ ಶ್ರೀರಾಮುಲು, ಆನಂದ್ ಸಿಂಗ್ ದೈಹಿಕ ಅಂತರವಿಲ್ಲದೆ ನಿರ್ಲಕ್ಷ್ಯವಹಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಕೆಲವು ನಿರ್ಬಂಧನೆಗಳನ್ನು ಹೇರಿತ್ತು.

ಸರ್ಕಾರದ ಕಟ್ಟುನಿಟ್ಟಿನ ಕೊವಿಡ್ ನಿಯಮವನ್ನು ಶ್ರೀರಾಮುಲು, ಆನಂದ್ ಸಿಂಗ್ ಅವರೇ ಉಲ್ಲಂಘಿಸಿದರು!
ಕೊವಿಡ್ ನಿಯಮ ಉಲ್ಲಂಘನೆ ಮಾಡಿದ ಶ್ರೀರಾಮುಲು ಮತ್ತು ಆನಂದ್ ಸಿಂಗ್‌
Follow us on

ಬಳ್ಳಾರಿ: ಕೊರೊನಾ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜನರು ಅದನ್ನು ನಿರ್ಲಕ್ಷಿಸಿಬಾರದೆಂದು ಸಾರಿ ಸಾರಿ ಹೇಳುತ್ತಿದೆ. ದಂಡ ವಿಧಿಸುತ್ತಿದೆ. ಆದ್ರೆ ಜನಪ್ರತಿನಿಧಿಗಳಿಂದಲೇ ಕೊವಿಡ್ ನಿಯಮ ಉಲ್ಲಂಘನೆಯಾಗುತ್ತಿದೆ. ಸಚಿವರಾದ ಶ್ರೀರಾಮುಲು ಮತ್ತು ಆನಂದ್ ಸಿಂಗ್‌ ಕೊವಿಡ್ ನಿಯಮ ಉಲ್ಲಂಘನೆ ಮಾಡಿದ್ದಾರೆ.

ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣಾ ಪ್ರಚಾರದ ವೇಳೆ ಸಚಿವ ಶ್ರೀರಾಮುಲು, ಆನಂದ್ ಸಿಂಗ್ ದೈಹಿಕ ಅಂತರವಿಲ್ಲದೆ ನಿರ್ಲಕ್ಷ್ಯವಹಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಕೆಲವು ನಿರ್ಬಂಧನೆಗಳನ್ನು ಹೇರಿತ್ತು. 5ಕ್ಕಿಂತ ಹೆಚ್ಚು ಜನ ಪ್ರಚಾರದಲ್ಲಿ ಭಾಗಿಯಾಗುವಂತಿಲ್ಲ. ಆದರೆ ಚುನಾವಣಾ ಪ್ರಚಾರದಲ್ಲಿ ನೂರಾರು ಜನರು ಭಾಗಿಯಾಗಿದ್ದಾರೆ. ಜನಪ್ರತಿನಿಧಿಗಳಿಂದಲೇ ಈ ರೀತಿ ಕೊವಿಡ್ ನಿಯಮ ಉಲ್ಲಂಘನೆಯಾಗಿದೆ. ಜನರು ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡುತ್ತಾರೆ. ಆದರೆ ಇಲ್ಲಿ ಜನಪ್ರತಿನಿಧಿಗಳೇ ರೂಲ್ಸ್ ಬ್ರೇಕ್ ಮಾಡಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಸಚಿವ ಬಿ.ಶ್ರೀರಾಮುಲು, ನಾವು ಐವರು ಪ್ರಚಾರಕ್ಕೆ ಹೋಗುತ್ತಿದ್ದೇವೆ. ನಾವು ಪ್ರಚಾರಕ್ಕೆ ಹೋದಲ್ಲೆಲ್ಲ ಹೆಚ್ಚೆಚ್ಚು ಜನ ಬರುತ್ತಿದ್ದಾರೆ. ದೈಹಿಕ ಅಂತರದ ಜತೆ ಮಾಸ್ಕ್ ಧರಿಸಲು ಮನವಿ ಮಾಡ್ತಿದ್ದೇವೆ ಎಂದು ಬಳ್ಳಾರಿಯಲ್ಲಿ ಸಚಿವ ಬಿ.ಶ್ರೀರಾಮುಲು ಹೇಳಿ ಸುಮ್ಮನಾಗಿದ್ದಾರೆ.

ಆದರೆ ಕೊರೊನಾ 2 ಅಲೆಯ ಭೀಕರತೆ ಅತ್ಯಂತ ಕೆಟ್ಟದಾಗಿದೆ. ಇಂತಹ ಸಂದರ್ಭದಲ್ಲಿ ಸಚಿವರೇ ನಿಯಮ ಉಲ್ಲಂಘನೆ ಮಾಡುವುದು ಎಷ್ಟು ಸರಿ? ಜನರಿಗೆ ಮಾದರಿಯಾಗಬೇಕಿದ್ದವರು ತಪ್ಪು ಮಾಡಬಾರದು ಎಂದು ಕೆಲವರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ನನ್ನ ಪ್ಲೇಸ್‌ನಲ್ಲಿ ಆ ವ್ಯಕ್ತಿ ಎಲಿಮಿನೇಟ್ ಆಗ್ಬೇಕಿತ್ತು: ಬಿಗ್ ಬಾಸ್ ಕಂಟೆಸ್ಟೆಂಟ್ ವಿಶ್ವನಾಥ್ ಹಾವೇರಿ