AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಕಪತ್ನಿ ವ್ರತಸ್ತ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದು ಶುಭಾಶಯ ತಿಳಿಸಿದ ರಮೇಶ್ ಜಾರಕಿಹೊಳಿ

Sri Rama Navami 2021| ಮ್ಯಾಸ ನಾಯಕ ಜನಾಂಗದವರು ಶ್ರೀರಾಮ, ಲಕ್ಷ್ಮಣ ಮತ್ತು ವಾಲ್ಮೀಕಿ ಜೊತೆ ಗುರುತಿಸಿಕೊಂಡು ಬಂದವರು. ಕಾಡಿನಲ್ಲಿ ಶ್ರೀರಾಮ, ಲಕ್ಷ್ಮಣರಿಗೆ ಭುಜಕ್ಕೆ ಭುಜ ಕೊಟ್ಟು ಅವರಿಗೆ ನೆರವಾದವರು ಎಂಬ ಐತಿಹ್ಯವಿದೆ. ಹಾಗಾಗಿ, ಆ ಜನಾಂಗದ ಜನರಲ್ಲಿ ರಾಮನ ಬಗ್ಗೆ ವಿಶೇಷ ಪ್ರೀತಿ ಗೌರವ ಇದೆ. ಈ ಕಾರಣಕ್ಕಾಗಿಯೇ ರಮೇಶ್​ ಜಾರಕಿಹೊಳಿ ಇಂಥದೊಂದು ಸಂದೇಶ ನೀಡಿದ್ದಾರೆ..

ಏಕಪತ್ನಿ ವ್ರತಸ್ತ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದು ಶುಭಾಶಯ ತಿಳಿಸಿದ ರಮೇಶ್ ಜಾರಕಿಹೊಳಿ
ಶ್ರೀರಾಮನ ಜನ್ಮದಿನದಂದು ಶುಭಾಶಯ ತಿಳಿಸಿದ ರಮೇಶ್ ಜಾರಕಿಹೊಳಿ
ಸಾಧು ಶ್ರೀನಾಥ್​
|

Updated on: Apr 21, 2021 | 4:00 PM

Share

ಬೆಂಗಳೂರು: ಏಕಪತ್ನಿ ವ್ರತಸ್ತ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ನಾಡಿನ ಜನತೆಗೆ ಶುಭಾಶಯ ತಿಳಿಸಿದ್ದಾರೆ. ಸುಮಾರು ಎರಡು‌ ತಿಂಗಳ‌ ಬಳಿಕ ಇಂದು‌ ತಮ್ಮ ಟ್ವಿಟರ್ ಖಾತೆಯನ್ನು ಆಕ್ಟೀವ್ ಮಾಡಿದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ‘ಶ್ರೀರಾಮನ ಆಶೀರ್ವಾದ ನಿಮ್ಮ ಕುಟುಂಬದ ಮೇಲಿರಲಿ, ನಿಮ್ಮ ಕನಸು ನೆರವೇರಲು ಆ ಭಗವಂತ ಸಹಕರಿಸಲಿ’ ಎಂದು ಶ್ರೀ ರಾಮನವಮಿಯ ಶುಭಾಶಯ ಕೋರಿದ್ದಾರೆ.

ಮ್ಯಾಸ ನಾಯಕ ಜನಾಂಗದವರು ಶ್ರೀರಾಮ, ಲಕ್ಷ್ಮಣ ಮತ್ತು ವಾಲ್ಮೀಕಿ ಜೊತೆ ಗುರುತಿಸಿಕೊಂಡು ಬಂದವರು. ಕಾಡಿನಲ್ಲಿ ಶ್ರೀರಾಮ, ಲಕ್ಷ್ಮಣರಿಗೆ ಭುಜಕ್ಕೆ ಭುಜ ಕೊಟ್ಟು ಅವರಿಗೆ ನೆರವಾದವರು ಎಂಬ ಐತಿಹ್ಯವಿದೆ. ಹಾಗಾಗಿ, ಆ ಜನಾಂಗದ ಜನರಲ್ಲಿ ರಾಮನ ಬಗ್ಗೆ ವಿಶೇಷ ಪ್ರೀತಿ ಗೌರವ ಇದೆ. ಈ ಕಾರಣಕ್ಕಾಗಿಯೇ ರಮೇಶ್​ ಜಾರಕಿಹೊಳಿ ಇಂಥದೊಂದು ಸಂದೇಶ ನೀಡಿದ್ದಾರೆ..

ತಮ್ಮ ಮೇಲೆ ಆರೋಪ ಬಂದಾಗಿನಿಂದ ಜಾರಕಿಹೊಳಿ ಸಾಮಾಜಿಕ ಜಾಲತಾಣದಿಂದ ದೂರ ಇದ್ದರು. ಆದರೆ, ರಾಮ ನವಮಿ ದಿನವೇ ತಮ್ಮ ಸಾಮಾಜಿಕ ಜಾಲತಾಣಕ್ಕೆ ಹಿಂದಿರುಗಿ ಕ್ರಿಯಾತ್ಮಕವಾಗಲು ನಿಶ್ಚಯಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಲೈಂಗಿಕ ಸಿಡಿ ಹಗರಣದಲ್ಲಿ ಸಿಲುಕಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದು, ಪ್ರಸ್ತುತ ತಮ್ಮ ಸ್ವಕ್ಷೇತ್ರವಾದ ಗೋಕಾಕ್​ನಲ್ಲಿದ್ದಾರೆ.