ಬಿಸಿಲಿನ ತಾಪಕ್ಕೆ ಮೂಕ ಪ್ರಾಣಿಗಳ ಗೋಳಾಟ: ಆಹಾರಕ್ಕಾಗಿ ಮಂಗಗಳ ಪರದಾಟ
ಗದಗ ಜಿಲ್ಲೆಯಲ್ಲಿ 38-39 ಡಿಗ್ರಿ ತಾಪಮಾನ ಇದೆ. ಬೆಳಗ್ಗೆ 11 ಗಂಟೆಯಾದ್ರೆ ಸಾಕು ಸೂರ್ಯ ಬೆಂಕಿ ಉಗುಳೋಕೆ ಆರಂಭಿಸ್ತಾನೆ. ಬಿಸಿ ಗಾಳಿ, ಉರಿ ಬಿಸಿಲಿಗೆ ಮಾನವ ಕುಲವೇ ಕಂಗಾಲಾಗಿ ಹೋಗಿದೆ. ಇನ್ನೂ ಮೂಕ ಪ್ರಾಣಿಗಳ ವೇದನೆ, ನರಳಾಟ, ಗೋಳಾಟದ ದೃಶ್ಯಗಳು ಕಲ್ಲು ಹೃದಯಗಳು ಕರಗುವಂತಾಗಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗೆ ಗ್ರಾಮದ ಬಳಿ ಕೋತಿಗಳು ಆಹಾರವಿಲ್ಲದೇ ವಿಲವಿಲ ಎನ್ನುತ್ತಿವೆ.
ಗದಗ, ಏಪ್ರಿಲ್ 08: ಸೂರ್ಯನ ಪ್ರತಾಪಕ್ಕೆ ಮಾನವ ಕುಲವೇ ತತ್ತರಿಸಿ ಹೋಗಿದೆ. ಉರಿ ಬಿಸಿಲಿಗೆ ನೀರು ನೀರು ಎನ್ನುವಂತಾಗಿದೆ. ಆದರೆ ಮೂಕ ಪ್ರಾಣಿಗಳ ಸ್ಥಿತಿ ಆ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಬೆಂಕಿ ಬಿಸಿಲಿನ ತಾಪಕ್ಕೆ ಆಹಾರ ಇಲ್ಲದೇ ಪ್ರಾಣಿ, ಪಕ್ಷಿಗಳು ವಿಲವಿಲ ಅಂತಿವೆ. ಮಂಗವೊಂದು (Monkey) ಆಹಾರಕ್ಕಾಗಿ ಒದ್ದಾಡುತ್ತಿರೋ ದೃಶ್ಯ ಟಿವಿ9 ಕ್ಯಾಮರಾದಲ್ಲಿ ಸೆರೆ ಸಿಕ್ಕಿದ್ದು, ಮಂಗನ ನರಳಾಟ ನೋಡಿದರೆ ಮನಕಲುವಂತಿದೆ. ಟಿವಿ9 ತಂಡ ನೀಡಿದ ಬಾಳೆ ಹಣ್ಣು ತಿಂದು ಮಂಗಗಳು ಸ್ವಲ್ಪ ನಿರಾಳವಾದ್ವು. ಇನ್ನೂ ಪಕ್ಷಿಗಳು, ಜಾನುವಾರಗಳು ದಾಹ ನೀಗಿಸಿಕೊಳ್ಳಲು ನೀರು ಹುಡುಕಿಕೊಂಡು ಬರುವ ದೃಶ್ಯಗಳು ಎಂಥ ಕಲ್ಲು ಹೃದಯಗಳು ಚುರ್ ಎನ್ನುವಂತಿವೆ.
ಗದಗ ಜಿಲ್ಲೆಯಲ್ಲಿ 38-39 ಡಿಗ್ರಿ ತಾಪಮಾನ ಇದೆ. ಬೆಳಗ್ಗೆ 11 ಗಂಟೆಯಾದ್ರೆ ಸಾಕು ಸೂರ್ಯ ಬೆಂಕಿ ಉಗುಳೋಕೆ ಆರಂಭಿಸ್ತಾನೆ. ಬಿಸಿ ಗಾಳಿ, ಉರಿ ಬಿಸಿಲಿಗೆ ಮಾನವ ಕುಲವೇ ಕಂಗಾಲಾಗಿ ಹೋಗಿದೆ. ಇನ್ನೂ ಮೂಕ ಪ್ರಾಣಿಗಳ ವೇದನೆ, ನರಳಾಟ, ಗೋಳಾಟದ ದೃಶ್ಯಗಳು ಕಲ್ಲು ಹೃದಯಗಳು ಕರಗುವಂತಾಗಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗೆ ಗ್ರಾಮದ ಬಳಿ ಕೋತಿಗಳು ಆಹಾರವಿಲ್ಲದೇ ವಿಲವಿಲ ಎನ್ನುತ್ತಿವೆ.
ಇದನ್ನೂ ಓದಿ: ಹೊರ ರಾಜ್ಯದಲ್ಲೂ ಫಾಲೋವರ್ಸ್ ಹೊಂದಿದ್ದ ಹಾವೇರಿ ರಾಕ್ ಸ್ಟಾರ್ ಹೋರಿ ಇನ್ನಿಲ್ಲ: ಇದರ ವಿಶೇಷತೆ ಏನು ಗೊತ್ತಾ?
ಕೋತಿಯೊಂದು ಆಹಾರ ಹುಡುಕಾಡುವ ದೃಶ್ಯ ಕರಳು ಚುರ್ ಎನ್ನುವಂತಿದೆ. ಬೈಕ್ ಮೇಲೆ ಹತ್ತಿದ ಕೋತಿ ಬ್ಯಾಗ್ ನಲ್ಲಿ ಏನಾದ್ರೂ ಇದ್ರೆ ತಿಂದು ಬಿಡೋಣ ಅಂತ ಹುಡುಕಾಡುತ್ತಿರೋ ನೋಡಿದ್ರೆ, ಅಯ್ಯೋ ಪ್ರಾಣಿಗಳ ಸಂಕಷ್ಟ, ನೋವು ಎಷ್ಠಿದೆ ಎನ್ನೋದು ಗೋತ್ತಾಗುತ್ತೆ. ಇಲ್ಲಿ ಕೋತಿಗಳ ಹಿಂಡೇ ಇದೆ. ಆದರೆ ಪಕ್ಕದಲ್ಲೇ ನದಿ ಇದೆ. ನೀರಿಗೆ ಬರವಿಲ್ಲ. ಸೂಕ್ತ ಆಹಾವಿಲ್ಲದೇ ಬಿಸಿಲಿನ ಝಳಕ್ಕೆ ಒದ್ದಾಡುತ್ತಿವೆ. ಕೋತಿಗಳ ಸ್ಥಿತಿ ನೋಡಿ ಟಿವಿ9 ತಂಡ ಬಾಳೆ ಹಣ್ಣುಗಳ ನೀಡುವ ಮೂಲಕ ಪ್ರಾಣಿಗಳ ಸ್ವಲ್ಪ ಮಟ್ಟಿನ ಹಸಿವು ನೀಗಿಸದಂತಾಗಿದೆ. ಹೀಗಾಗಿ, ಪ್ರಾಣಿ, ಪಕ್ಷಿ ಪ್ರೇಮಿಗಳು ಭೀಕರ ಬಿಸಿಲಿನ ಹೊಡತೆಕ್ಕೆ ಸಿಲುಕಿ ಆಹಾರವಿಲ್ಲದೇ ನರಳಾಡುತ್ತಿರೋ ಮೂಕ ಪ್ರಾಣಿಗಳಿಗೆ ಆಹಾರ, ನೀರು ನೀಡುವ ಮೂಲಕ ಮಾನವೀಯತೆ ತೋರಬೇಕಿದೆ. ಹಳ್ಳಿ ಹಳ್ಳಿಗಳಲ್ಲೂ ಪ್ರಾಣಿ, ಪಕ್ಷಿಗಳ ಮೂಕ ರೋಧನೆಯ ದೃಶ್ಯಗಳು ಮನಕಲುಕುವಂತಿದೆ.
ಜಾನುವಾರಗಳ, ಕುರಿಗಳ ಸ್ಥಿತಿಯೂ ಇದಕ್ಕೂ ಭಿನ್ನವಾಗಿದೆ. ಹೊಲ ಹೊಲ ಸುತ್ತಾಡಿ ಕುರಿ ಹಿಂಡುಗಳ ಮೇಯಿಸುತ್ತಿರೋ ಕುರಿಗಾಹಿಗಳು ಬಿಸಿಲಿನ ಹೊಡೆತಕ್ಕೆ ಬೆಂಡಾಗಿ ಹೋಗಿದ್ದಾರೆ. ಜಮೀನುಗಳಲ್ಲಿ ನೀರಿನ ಸಮಸ್ಯೆ ಎದುರಾಗಿರೋದ್ರಿಂದ ಈಗ ನದಿ ಪಾತ್ರದಲ್ಲಿ ಕುರಿಗಳ ಮೇಯಿಸುವಂತಾಗಿದೆ. ಆದ್ರೆ, ನದಿ ಪಾತ್ರಗಳಲ್ಲಿ ನೀರು ಸಿಕ್ರೆ ಕುರಿಗಳಿಗೆ ಮೇವು ಸಿಗೋದು ಕಷ್ಟ. ಹೀಗಾಗಿ ಕುರಿಗಾಹಿಗಳು ಕಂಗಾಲಾಗಿದ್ದಾರೆ. ಇನ್ನೂ ಬೆಂಕಿಯ ಬಿಸಿಲಿನಲ್ಲಿ ಕುರಿಗಳು ಮೇಯಿಸುವ ಕುರಿಗಾಹಿಗಳು ಬೆವತು ಬೆಂಡಾಗುತ್ತಿದ್ದಾರೆ.
ಇದನ್ನೂ ಓದಿ: ತುಂಗಭದ್ರಾ ನದಿಯ ಒಡಲು ಖಾಲಿ! ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ
ಜಾನುವಾರಗಳಿಗೂ ನೀರು, ಮೇವಿನ ಬಿಸಿ ತಟ್ಟಿದೆ. ರೈತರು ನದಿ ತೀರಕ್ಕೆ ಜಾನುವಾರಗಳ ತಂದು ಮೇಯಿಸುತ್ತಿದ್ದಾರೆ. ಆದ್ರೆ, ತುಂಗಭದ್ರಾ ನದಿಯಲ್ಲೂ ಹನಿ ನೀರು ಇಲ್ಲ. ಅಲ್ಲೋ ಇಲ್ಲೋ ನದಿಯಲ್ಲಿ ವರ್ತಿ ನೀರು ತೆಗೆದು ಪ್ರಾಣಿ, ಜಾನುವಾರಗಳಿಗೆ ಕುಡಿಸುವ ಕೆಲಸ ನಡೆದಿದೆ. ಈ ಬಾರಿಗೆ ಬೆಂಕಿ ಬಿಸಿಲು ಮಾನವ ಕುಲ ಮಾತ್ರವಲ್ಲ ಪ್ರಾಣಿ, ಪಕ್ಷಿಗಳ ಸಂಕಲವೂ ಕಂಗಾಲಾಗಿ ಹೋಗಿದೆ. ಹೀಗಾಗಿ ಪ್ರಾಣಿ, ಪಕ್ಷಿಗಳಿಗೆ ಆಹಾರ, ನೀರು ಹಾಕುವ ಮೂಲಕ ಪ್ರಾಣಿ, ಪಕ್ಷಿಗಳ ಸಂಕುಲ ಉಳಿಸಿ ಬೆಳೆಸಬೇಕು ಅಂತ ಪ್ರಾಣಿ ಪ್ರೀಯರು ಕರೆ ನೀಡಿದ್ದಾರೆ..
ಆಹಾರಕ್ಕಾಗಿ ಪ್ರಾಣಿ, ಪಕ್ಷಿಗಳ ಮೂಕ ರೋಧನ ಹೇಳತೀರದಾಗಿದೆ. ಆಹಾರ, ನೀರು ಇಲ್ಲದೇ ಪ್ರಾಣಿ, ಪಕ್ಷಿಗಳ ನರಳಾಟ, ಗೋಳಾಟ ನೋಡಿದ್ರೆ ಕಲ್ಲು ಹೃದಯವೂ ಕರಗುವಂತಿದೆ. ಅದ್ರಲ್ಲೂ ಊರು ಹೊರಗಡೆ ಇರೋ ಕೋತಿ, ಮಂಗಳು ಆಹಾರವಿಲ್ಲದೇ ಒದ್ದಾಡುತ್ತಿವೆ. ಯಾರಾದ್ರೂ ಬಂದ್ರೆ, ಏನಾದ್ರೂ ಆಹಾರ ಸಿಗುತ್ತೋ ಏನೋ ಆಸೆಗಣ್ಣಿನಿಂದ ನೋಡುವ ಕೋತಿಗಳ ಸ್ಥಿತಿ ನೋಡಿದ್ರೆ ಅಯ್ಯೋ ಎನ್ನುವಂತಿದೆ. ಹೀಗಾಗಿ ನೀವು ಪ್ರಾಣಿ, ಪಕ್ಷಿಗಳಿಗೆ ಆಹಾರ, ನೀರು ನೀಡುವ ಮೂಲಕ ಪ್ರಾಣಿ ಸಂಕುಲ ಉಳಿಸಿ ಬೆಳೆಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.