ಈ ಹೋರಿ ಹೋದಲ್ಲೆಲ್ಲ ಬಹುಮಾನ ತಂದೆ ತರುತ್ತದೆ ಎನ್ನುವ ನಂಬಿಕೆ ಹೋರಿ ಅಭಿಮಾನಿಗಳಲ್ಲಿತ್ತು. ರಾಕಸ್ಟಾರ್ ಹೋರಿ ಹಬ್ಬದಲ್ಲಿ ಭಾಗವಹಿಸುತ್ತದೆ ಎಂದರೆ ಸಾಕು ಅದರ ಮಿಂಚಿನ ಓಟ ನೋಡಲೆಂದೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇಂಥ ಮರಿಯಲಾಗದ ಮಾಣಿಕ್ಯ ಚಿರ ನಿದ್ದೆಗೆ ಜಾರಿದ್ದು, ಲಕ್ಷಾಂತರ ಅಭಿಮಾನಿಗಳಿಗೆ ತುಂಬಲಾರದ ನಷ್ಟವಾಗಿದೆ. ಅದರಲ್ಲೂ ಮಾಲೀಕರ ಗೋಳಾಟ ಹೇಳತೀರದು.