ಅನಿಮೇಟೆಡ್ ವಿಡಿಯೋ ಟ್ವೀಟ್ ಪ್ರಕರಣ: ಬೆಂಗಳೂರು ಪೊಲೀಸರ ನೋಟಿಸ್​ ಸ್ವೀಕರಿಸದ ಅಮಿತ್ ಮಾಳವೀಯ

ಟ್ವಿಟರ್​​ನಲ್ಲಿ ಸಮುದಾಯಗಳಿಗೆ ಸಂಬಂಧಿಸಿ ಪೋಸ್ಟ್ ಮಾಡಿದ್ದ ಆರೋಪವನ್ನು ಮಾಳವೀಯ ಎದುರಿಸುತ್ತಿದ್ದಾರೆ. ಟ್ವಿಟರ್​​ನಲ್ಲಿ ಕರ್ನಾಟಕ ಬಿಜೆಪಿ ಘಟಕ ವಿಡಿಯೋ ಪೋಸ್ಟ್ ಮಾಡಿತ್ತು. ಅದರಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಮುಸ್ಲಿಮರು ಎಂಬಂತೆ ಬಿಂಬಿಸಲಾಗಿತ್ತು.

ಅನಿಮೇಟೆಡ್ ವಿಡಿಯೋ ಟ್ವೀಟ್ ಪ್ರಕರಣ: ಬೆಂಗಳೂರು ಪೊಲೀಸರ ನೋಟಿಸ್​ ಸ್ವೀಕರಿಸದ ಅಮಿತ್ ಮಾಳವೀಯ
ಅಮಿತ್ ಮಾಳವೀಯ
Edited By:

Updated on: May 11, 2024 | 11:53 AM

ಬೆಂಗಳೂರು, ಮೇ 11: ಮುಸ್ಲಿಂ ಮೀಸಲಾತಿ (Muslim Reservation) ಕುರಿತಾದ ಅನಿಮೇಟೆಡ್ ವಿಡಿಯೋ ಟ್ವೀಟ್ ವಿಚಾರಕ್ಕೆ ಸಂಬಂಧಿಸಿ ಹೈಗ್ರೌಂಡ್ಸ್​​ ಠಾಣೆ ಪೊಲೀಸರು (Bengaluru Police) ನೀಡಿದ ನೋಟಿಸನ್ನು ಸ್ವೀಕರಿಸಲು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ (Amit Malviya) ನಿರಾಕರಿಸಿದ್ದಾರೆ. ಪಶ್ಚಿಮ ಬಂಗಾಳದ ಕೃಷ್ಣನಗರ ಹೋಟೆಲ್​ನಲ್ಲಿ ಅಮಿತ್ ಮಾಳವೀಯಾರನ್ನು ಭೇಟಿಯಾದ ಬೆಂಗಳೂರಿನ ಹೈಗ್ರೌಂಡ್ಸ್​​ ಠಾಣೆ ಪೊಲೀಸರು ನೋಟಿಸ್ ನೀಡಲು ಮುಂದಾದರು. ಆದರೆ, ಪೊಲೀಸರು ತಂದಿದ್ದ ನೋಟಿಸ್ ಸ್ವೀಕರಿಸದ ಅಮಿತ್ ಮಾಳವೀಯಾ, ಈಗಾಗಲೇ ಇ-ಮೇಲ್ ಮೂಲಕ ನನಗೆ ನೋಟಿಸ್ ಬಂದಿದೆ. ನೋಟಿಸ್​ಗೆ ಉತ್ತರ ನೀಡಲು ಏಳು ದಿನಗಳ ಕಾಲ ಅವಕಾಶ ಇದೆ ಎಂದರು.

ನೋಟಿಸ್​ಗೆ ನಮ್ಮ ವಕೀಲರು ಉತ್ತರ ನೀಡುತ್ತಾರೆ ಎಂದು ಮಾಳವೀಯಾ ಹೇಳಿದರು. ಹೀಗಾಗಿ ನೋಟಿಸ್​ ನೀಡಲು ಹೋಗಿದ್ದ ಹೈಗ್ರೌಂಡ್ಸ್ ಠಾಣೆ ಪೊಲೀಸರು ವಾಪಸಾಗಿದ್ದಾರೆ.

ಟ್ವಿಟರ್​​ನಲ್ಲಿ ಸಮುದಾಯಗಳಿಗೆ ಸಂಬಂಧಿಸಿ ಪೋಸ್ಟ್ ಮಾಡಿದ್ದ ಆರೋಪವನ್ನು ಮಾಳವೀಯ ಎದುರಿಸುತ್ತಿದ್ದಾರೆ. ಟ್ವಿಟರ್​​ನಲ್ಲಿ ಕರ್ನಾಟಕ ಬಿಜೆಪಿ ಘಟಕ ವಿಡಿಯೋ ಪೋಸ್ಟ್ ಮಾಡಿತ್ತು. ಅದರಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಮುಸ್ಲಿಮರು ಎಂಬಂತೆ ಬಿಂಬಿಸಲಾಗಿತ್ತು.

ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದ್ದ ಅನಿಮೇಷನ್ ವಿಡಿಯೋದಲ್ಲಿ ಒಂದು ಗೂಡಿನಲ್ಲಿ 3 ಮೊಟ್ಟೆಗಳಿರುತ್ತವೆ. ಆ ಮೊಟ್ಟೆಗಳನ್ನು SC, ST ಮತ್ತು OBC ಎಂದು ಟ್ಯಾಗ್ ಮಾಡಲಾಗಿದೆ. ಮುಸ್ಲಿಮರನ್ನು ಪ್ರತಿನಿಧಿಸುವ ಮತ್ತೊಂದು ಮೊಟ್ಟೆಯನ್ನು ಆ ಗೂಡಿಗೆ ಸೇರಿಸಲಾಗುತ್ತದೆ. ಆ ಮೊಟ್ಟೆಯೊಡೆದ ನಂತರ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ಕೋಳಿಗೆ ಮಾತ್ರ ಆಹಾರ ನೀಡುತ್ತಿರುವುದು ಒಂದು ಸಮುದಾಯದ ಕಡೆಗೆ ಒಲವು ತೋರುತ್ತಿದೆ ಎಂಬುದರ ಸಂಕೇತವಾಗಿತ್ತು.

ಇದನ್ನೂ ಓದಿ: ಕೂಡಲೇ ಕರ್ನಾಟಕ ಬಿಜೆಪಿಯ ಅನಿಮೇಟೆಡ್ ವಿಡಿಯೋ ಡಿಲೀಟ್ ಮಾಡಿ; ಎಕ್ಸ್​ಗೆ ಚುನಾವಣಾ ಆಯೋಗ ಸೂಚನೆ

ಈ ಪೋಸ್ಟ್ ವಿರುದ್ಧ ಕೆಪಿಸಿಸಿ ಕಾನೂನು ಘಟಕದ ರಮೇಶ್ ಬಾಬು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದರು.

ವಿಡಿಯೋವನ್ನು ತಕ್ಷಣ ತೆಗೆದುಹಾಕುವಂತೆ ಚುನಾವಣಾ ಆಯೋಗ ಕಳೆದ ವಾರ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ಗೆ (ಟ್ವಿಟ್ಟರ್​) ಸೂಚಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:52 am, Sat, 11 May 24

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us