ಅಕ್ಕಿ ಬದಲು ಹಣ ನೀಡಿದ್ರೆ ರಾಜ್ಯ ಸರ್ಕಾರಕ್ಕೆ ಭರ್ಜರಿ ಉಳಿತಾಯ: ಹೇಗೆ? ಇಲ್ಲಿದೆ ವಿವರ

| Updated By: ರಮೇಶ್ ಬಿ. ಜವಳಗೇರಾ

Updated on: Jul 02, 2023 | 11:19 AM

ಐದು ಕೆಜಿ ಅಕ್ಕಿ ಬದಲಿಗೆ ಹಣ ನೀಡಲು ಸಿದ್ದರಾಮಯ್ಯನವರ ಸರ್ಕಾರ ತೀರ್ಮಾನಿಸಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಭರ್ಜರಿ ಹಣ ಉಳಿತಾಯವಾಗಲಿದೆ. ಅಕ್ಕಿ ನೀಡಿದರೆ ಎಷ್ಟು ಹಣ ಬೇಕು? ಅಕ್ಕಿ ಬದಲಿಗೆ ಹಣ ನೀಡಿದರೆ ಸರ್ಕಾರ ಎಷ್ಟು ಉಳಿಯಾ? ಎನ್ನುವ ವಿವರ ಇಲ್ಲಿದೆ.

ಅಕ್ಕಿ ಬದಲು ಹಣ ನೀಡಿದ್ರೆ ರಾಜ್ಯ ಸರ್ಕಾರಕ್ಕೆ ಭರ್ಜರಿ ಉಳಿತಾಯ: ಹೇಗೆ? ಇಲ್ಲಿದೆ ವಿವರ
Follow us on

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ (Congress Government )ಮಹತ್ವಾಕಾಂಕ್ಷಿ ಯೋಜನೆ ಅದರಲ್ಲೂ ಸಿಎಂ ಸಿದ್ದರಾಮಯ್ಯನವರ (Siddaramaiah) ಕನಸಿ ಯೋಜನೆಯಾದ ಅನ್ನಭಾಗ್ಯ(anna Bhagya scheme) ಜುಲೈ 1ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಐದು ಕೆಜಿ ಅಕ್ಕಿ (Rice) ಜೊತೆಗೆ ಇನ್ನೂ ಐದು ಕೆಜಿ ಅಕ್ಕಿ ಬದಲು 170 ರೂಪಾಯಿ ಬಿಪಿಎಲ್​ ಕಾರ್ಡ್​ದಾರರಿಗೆ ಸಿಗಲಿದೆ. ಹತ್ತು ಕೆ.ಜಿ ಅಕ್ಕಿ ಕೊಡಬೇಕಿತ್ತು. ಆದ್ರೆ, ಅಕ್ಕಿ ದಾಸ್ತುನು ಕೊರತೆ ಇರುವುದರಿಂದ ಐದು ಕೆಜೆ ಅಕ್ಕಿ ಬದಲಿಗೆ ಹಣ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ವಿಷಯ ಅಂದ್ರೆ ಇವತ್ತೇ ಬಿಪಿಎಲ್‌ ಕಾರ್ಡ್‌ದಾರರ ಅಕೌಂಟ್‌ಗೆ ಅಕ್ಕಿ ಹಣ ಜಮೆ ಆಗಲಿದೆ ಎಂದು ಜನ ಅಂದುಕೊಂಡಿದ್ರು. ಆದ್ರೆ ಇದಕ್ಕೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ ಜುಲೈ 10 ರಿಂದ ಹಣ ಜಮೆ ಪ್ರಕ್ರಿಯೆ ಶುರುವಾಗುತ್ತೆ ಎಂದಿದ್ದಾರೆ. ಆದ್ರೆ ಸಚಿವ ಸತೀಶ್‌ ಜಾರಕಿಹೊಳಿ ಮಾತ್ರ ಮುಂದಿನ ತಿಂಗಳು ಹಣ ಸಿಗುತ್ತೆ ಎಂದು ಟ್ವಿಸ್ಟ್‌ ಕೊಟ್ಟಿದ್ದಾರೆ. ಇದರೆಲ್ಲದರ ಮಧ್ಯೆ ಅಕ್ಕಿ ಬದಲಿಗೆ ಹಣ ನೀಡುವುದಕ್ಕೆ ಎಷ್ಟು ಹಣ ಬೇಕು? ಹೇಗೆ ಹಾಕುತ್ತಾರೆ? ಇದರಿಂದ ಸರ್ಕಾರಕ್ಕೆ ಎಷ್ಟು ಉಳಿತಾಯ? ಸರ್ಕಾರದ ಬೊಕ್ಕಸಕ್ಕೆ ಎಷ್ಟು ಹೊರೆಯಾಗಲಿದೆ ಎನ್ನುವ ವಿವರ ಈ ಕೆಳಗಿನಂತಿದೆ.

ಸರ್ಕಾರಕ್ಕೆ ಭರ್ಜರಿ ಉಳಿತಾಯ

ಅಕ್ಕಿ ಬದಲು ಹಣ ನೀಡಿದ್ರೆ ರಾಜ್ಯ ಸರ್ಕಾರಕ್ಕೆ ಆಗುತ್ತೆ ಭರ್ಜರಿ ಉಳಿತಾವಾಗುತ್ತೆ. ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಿಂದ ಸರ್ಕಾರಕ್ಕೆ ತಿಂಗಳಿಗೆ 123 ಕೋಟಿ ರೂ. ಉಳಿತಾಯವಾಗುತ್ತೆ. ರಾಜ್ಯದಲ್ಲಿ 1.14 ಕೋಟಿ ಪಡಿತರ ಚೀಟಿಗಳಿದ್ದು, 4.30 ಕೋಟಿ ಫಲಾನುಭವಿಗಳಿದ್ದಾರೆ. ತಲಾ 5 ಕೆಜಿಯಂತೆ ಅಕ್ಕಿ ವಿತರಣೆ ಮಾಡಲು 2.28 ಲಕ್ಷ ಮೆಟ್ರಿಕ್ ಟನ್ ಬೇಕು. ಅಕ್ಕಿ ಕೊಡಲು ಸಾಧ್ಯವಿಲ್ಲದ ಕಾರಣ ಪ್ರತಿ ವ್ಯಕ್ತಿಗೆ 170 ರೂಪಾಯಿ ನೀಡಲು ತೀರ್ಮಾನಿಸಲಾಗಿದೆ. ಸಾಗಣೆ ವೆಚ್ಚ, ಕಮೀಷನ್ ಎಲ್ಲ ಲೆಕ್ಕ ಹಾಕಿದರೆ ಮಾಸಿಕ 123 ಕೋಟಿ ರೂ. ಉಳಿತಾಯವಾಗಲಿದೆ.

ಹಣ ವರ್ಗಾವಣೆ ‌ಮಾಡಲು ಮಾಸಿಕ 733 ಕೋಟಿ ರೂಪಾಯಿ ಸರ್ಕಾರಕ್ಕೆ ವೆಚ್ಚವಾಗಲಿದೆ. ಅಕ್ಕಿ ಸಿಕ್ಕಿದ್ದರೆ ಈ ಮೊತ್ತ 856 ಕೋಟಿ ರೂಪಾಯಿ ಆಗುತ್ತಿತ್ತು. ಅಕ್ಕಿ ಸಿಕ್ಕಿದ್ದರೆ ಸಾಗಣೆ ವೆಚ್ಚ, ಸಗಟು ಮತ್ತು ಚಿಲ್ಲರೆ ಕಮೀಷನ್ ಕೊಡಬೇಕಾಗಿತ್ತು. ಸಾಗಣೆ ವೆಚ್ಚ ಪ್ರತಿ ಕೆಜಿಗೆ 1.10 ರೂಪಾಯಿ ಆಗುತ್ತದೆ. ಸಗಟು ಕಮೀಷನ್ 35 ಪೈಸೆ ಹಾಗೂ ಚಿಲ್ಲರೆ ಕಮೀಷನ್ 1.84 ರೂ. ನೀಡಲಾಗುತ್ತಿತ್ತು. ಹಣ ನೀಡುವುದರಿಂದ ಪ್ರತಿ ಕೆಜಿಗೆ 2.69 ಪೈಸೆ ಈಗ ಸರ್ಕಾರಕ್ಕೆ ಉಳಿತಾಯವಾಗುತ್ತೆ.

ಹಣ ಜಮೆ ಯಾವಾಗ?

ಬಿಪಿಎಲ್ ಬಳಕೆದಾರರ ಆಧಾರ್ ಹಾಗೂ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆ. ಇನ್ನೂ 6 ಲಕ್ಷದಷ್ಟು ಬಿಪಿಎಲ್ ಬಳಕೆದಾರರು ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿಸಿಲ್ಲ. ಇನ್ನು ಈಗಾಗಲೇ ಲಿಂಕ್ ಆಗಿರುವ ಅಕೌಂಟ್‌ಗಳನ್ನ ಪರಿಶೀಲಿಸಬೇಕಾಗಿದೆ. ಹೀಗಾಗಿ ಸೇವಾ ಸಿಂಧು ಆ್ಯಪ್‌ನಲ್ಲಿ ಇವುಗಳ ವೆರಿಫಿಕೇಷನ್ ಮಾಡಿಸಲು ಆಹಾರ ಇಲಾಖೆ ಮುಂದಾಗಿದೆ. ಈ ವೆರಿಫಿಕೇಷನ್ ಪ್ರಕ್ರಿಯೆಗೆ ಮೂರು ದಿನಗಳ ಸಮಯ ಹಿಡಿಯಲಿದೆ. ಬಿಪಿಎಲ್‌ ಕಾರ್ಡ್‌ನಲ್ಲಿರುವ ಸದಸ್ಯರ ಸಂಖ್ಯೆ ಪರಿಶೀಲನೆ ನಡೆಸಿ ಹಣ ಜಮಾವಣೆ ಮಾಡಲು 10 ದಿನಗಳ ಸಮಯ ಹಿಡಿಯಲಿದೆ. ಸದ್ಯ ಬ್ಯಾಂಕ್ ಖಾತೆಗಳನ್ನು ಲಿಂಕ ಮಾಡಿಸಿರೋರಿಗೆ ಮೊದಲು ಹಣ ಜಮಾವಣೆ ಮಾಡಿ ಉಳಿದ ಅಕೌಂಟ್‌ಗಳಿಗೆ ನಂತರದಲ್ಲಿ ಹಣ ಜಮಾವಣೆ ಮಾಡುವ ಸಾಧ್ಯತೆ ಇದೆ.