ಯುವರಾಜ್ ಕೇಸ್​ನಲ್ಲಿ ತಳಕು ಹಾಕಿಕೊಂಡಿದೆ ಮತ್ತೊಬ್ಬ ನಟಿಯ ಹೆಸರು, ಯಾರದು?

ಯುವರಾಜ್ ಅಲಿಯಾಸ್ ಸ್ವಾಮಿ ಜತೆ ಸ್ಯಾಂಡಲ್ ವುಡ್​ನ ಮತ್ತೊಬ್ಬ ಖ್ಯಾತ ನಟಿಯಿಂದ ಹಣಕಾಸು ವ್ಯವಹಾರ ನಡೆದಿದೆಯಂತೆ. ಆ ನಟಿ ಯುವರಾಜ್​ಗೆ ಕರೆ ಮಾಡಿ ಹಲವು ಬಾರಿ ಚರ್ಚೆ ಮಾಡಿದ್ದಾರೆಂಬ ಮಾಹಿತಿ ಸಿಕ್ಕಿದೆ.

ಯುವರಾಜ್ ಕೇಸ್​ನಲ್ಲಿ ತಳಕು ಹಾಕಿಕೊಂಡಿದೆ ಮತ್ತೊಬ್ಬ ನಟಿಯ ಹೆಸರು, ಯಾರದು?
ಯುವರಾಜ್
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Jan 07, 2021 | 10:18 AM

ಬೆಂಗಳೂರು: ಯುವರಾಜ್ ಜತೆ ಹಣಕಾಸು ವ್ಯವಹಾರ ಆರೋಪದ ವಿಚಾರವಾಗಿ ನಟಿ ರಾಧಿಕಾ ಕುಮಾರಸ್ವಾಮಿ ಸದ್ಯ ಭಾರಿ ಸುದ್ದಿಯಲ್ಲಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಮತ್ತೊಂದು ನಟಿಯ ಹೆಸರು ಕೇಳಿ ಬಂದಿದೆ. ಯುವರಾಜ್ ಕೇಸ್​ನಲ್ಲಿ ಮತ್ತೊಬ್ಬ ನಟಿ ಹೆಸರು ತಳಕು ಹಾಕಿಕೊಂಡಿದೆ. ನಟೀಮಣಿಯಿಂದ ಯುವರಾಜ್​ಗೆ ಹಲವು ಬಾರಿ ಕರೆ ಬಂದಿದೆ ಎಂಬ ಮಾಹಿತಿ ಸಿಕ್ಕಿದೆ.

ಯುವರಾಜ್ ಅಲಿಯಾಸ್ ಸ್ವಾಮಿ ಜತೆ ಸ್ಯಾಂಡಲ್ ವುಡ್​ನ ಮತ್ತೊಬ್ಬ ಖ್ಯಾತ ನಟಿಯಿಂದ ಹಣಕಾಸು ವ್ಯವಹಾರ ನಡೆದಿದೆಯಂತೆ. ಆ ನಟಿ ಯುವರಾಜ್​ಗೆ ಕರೆ ಮಾಡಿ ಹಲವು ಬಾರಿ ಚರ್ಚೆ ಮಾಡಿದ್ದಾರೆಂಬ ಮಾಹಿತಿ ಸಿಕ್ಕಿದೆ. ಆದರೆ ಆ ನಟಿಯ ಹೆಸರು ಮಾತ್ರ ಎಲ್ಲೂ ರಿವೀಲ್ ಆಗಿಲ್ಲ.

ಇನ್ನು ಯುವರಾಜ್​ಗೆ ಸಂಬಂಧಿಸಿದ ಐಶಾರಾಮಿ ಲ್ಯಾಂಡ್ ರೋವರ್ ಮತ್ತು ಬೆಂಜ್​ ಕಾರುಗಳನ್ನು ಸೀಜ್ ಮಾಡಿ ಸಿಸಿಬಿ ಕಚೇರಿ ಬಳಿ ನಿಲ್ಲಿಸಲಾಗಿದೆ. ಲ್ಯಾಂಡ್ ರೋವರ್ ಕಾರು ಯುವರಾಜ್ ಸ್ವಾಮಿಯ ಪತ್ನಿ ಪ್ರೇಮ ಎಂಬುವವರ ಹೆಸರಿನಲ್ಲಿದೆ.

ಸ್ವಾಮೀಜಿ ಹೇಳಿದ್ದೆಲ್ಲಾ ಆಗುತ್ತಿತ್ತು.. ಡಿಸೆಂಬರ್​ನಲ್ಲಿ ನಿಮ್ಮ ಟೈಂ ಸರಿ ಇಲ್ಲ ಅಂತಾನೂ ಹೇಳಿದ್ರು: ರಾಧಿಕಾ ಕುಮಾರಸ್ವಾಮಿ

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us