AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ಸ್ಕ್ಯಾಮ್ ಬೆಳಕಿಗೆ: 1 ರೂ. ಕುಳುಹಿಸಿ ಸಾವಿರಾರು ರೂ. ದೋಚುತ್ತಾರೆ ವಂಚಕರು, ಹುಷಾರ್​!

ಇಷ್ಟು ದಿನ ಆನ್​ಲೈನ್​ನಲ್ಲಿ 'ಗೇಮ್' ಆಡುತ್ತಿದ್ದವರು ಈಗ ಮನೆ ಬಾಗಿಲಿಗೇ ಬಂದು ವಂಚನೆ ಮಾಡುತ್ತಾರೆ. 1 ರೂ. ಪಡೆದು ನಂತರ ಸಾವಿರಾರು ರೂ. ದೋಚುತ್ತಾರೆ. ಟೆಕ್ನಾಲಜಿ ಸರಿಯಾಗಿ ಗೊತ್ತಿಲ್ಲದೆ ಇರುವ ಜನರೇ ಇವರ ಟಾರ್ಗೆಟ್. ಪೇಟಿಎಂ ಏಜೆಂಟ್ ಎಂದು ಹೇಳಿ ಸಾವಿರಾರು ರೂ. ದೋಚುತ್ತಾರೆ ಹುಷಾರಾಗಿರಿ.

ಮತ್ತೊಂದು ಸ್ಕ್ಯಾಮ್ ಬೆಳಕಿಗೆ: 1 ರೂ. ಕುಳುಹಿಸಿ ಸಾವಿರಾರು ರೂ. ದೋಚುತ್ತಾರೆ ವಂಚಕರು, ಹುಷಾರ್​!
ಸೈಬರ್ ವಂಚನೆ
Follow us
Jagadisha B
| Updated By: ಗಂಗಾಧರ​ ಬ. ಸಾಬೋಜಿ

Updated on: Apr 09, 2024 | 4:24 PM

ಬೆಂಗಳೂರು, ಏಪ್ರಿಲ್ 09: ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಅದೇ ತಂತ್ರಜ್ಞಾನವನ್ನು ಬಳಸಿಕೊಂಡು ಅಮಾಯಕ ಜನರನ್ನು ಮೋಸ ಮಾಡುತ್ತಿದ್ದಾರೆ. ಮಾಡುವ ವಂಚನೆಯ ಮಾದರಿ ಜನರಿಗೆ ಅರಿವಾಗುವ ಮುನ್ನವೇ ಮತ್ತೊಂದು ಹೊಸ ವಿಧಾನ ಸೃಷ್ಟಿ ಮಾಡಲಾಗುತ್ತಿದೆ. ಬ್ಯಾಂಕ್ ಸಿಬ್ಬಂದಿ, ಕ್ರೆಡಿಟ್ ಕಾರ್ಡ್, ಒಟಿಪಿ‌, ಡ್ರಗ್ಸ್, ಜಾಬ್ ಆಫರ್ ವಂಚನೆಗಳು ಸದ್ಯ ಹಳೆಯದಾಗಿವೆ. ಇದೀಗ ಸೈಬರ್ ವಂಚಕರಿಂದ (Cyber scam) ಮತ್ತೊಂದು ಸ್ಕ್ಯಾಮ್ ಸೃಷ್ಟಿ ಮಾಡಿದ್ದು, ಸ್ಕ್ಯಾಮ್​​ಗಳನ್ನು ಹುಟ್ಟು ಹಾಕಲೆಂದೇ ಸೈಬರ್ ವಂಚಕರ ತಂಡ ಇದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ?

ಇಷ್ಟು ದಿನ ಆನ್​ಲೈನ್​ನಲ್ಲಿ ‘ಗೇಮ್’ ಆಡುತ್ತಿದ್ದವರು ಈಗ ಮನೆ ಬಾಗಿಲಿಗೇ ಬಂದು ವಂಚನೆ ಮಾಡುತ್ತಾರೆ. 1 ರೂ. ಪಡೆದು ನಂತರ ಸಾವಿರಾರು ರೂ. ದೋಚುತ್ತಾರೆ. ಟೆಕ್ನಾಲಜಿ ಸರಿಯಾಗಿ ಗೊತ್ತಿಲ್ಲದೆ ಇರುವ ಜನರೇ ಇವರ ಟಾರ್ಗೆಟ್. ಪೇಟಿಎಂ ಏಜೆಂಟ್ ಎಂದು ಹೇಳಿ ಸಾವಿರಾರು ರೂ. ದೋಚುತ್ತಾರೆ ಹುಷಾರಾಗಿರಿ.

ಇದನ್ನೂ ಓದಿ: ಕಲಬುರಗಿ: ಜಗಳ ಬಿಡಿಸಲು ಹೋದ ಪೊಲೀಸ್ ಪೇದೆ ಮೇಲೆ ಹಲ್ಲೆ

ಪ್ರತಿ ದಿನ ವ್ಯಾಪಾರ ಮಾಡುವ ವ್ಯಾಪಾರಿಗಳು ಮತ್ತು ಅಂಗಡಿಯಲ್ಲಿ ಯಾರು ಯುಪಿಐ ಬಳಸುತ್ತಾರೆ ಅವರೇ ಇವರ ಟಾರ್ಗೆಟ್. ಯಾವ ಯುಪಿಐ ಇರುತ್ತೋ ನಾವು ಅದರ ಏಜೆಂಟ್​ಗಳು ಎಂದು ಹೇಳಿಕೊಂಡು ಬರುತ್ತಾರೆ. ನಂತರ ನಿಮ್ಮ ಯುಪಿಐ ಸ್ಕ್ಯಾನರ್​ ಅಪ್ಡೇಟ್ ಆಗಿಲ್ಲ. ಅಪ್ಡೇಟ್ ಮಾಡಿಲ್ಲ ಎಂದರೆ ನಿಮಗೆ ಹಣ ಬರುವುದಿಲ್ಲ ಎಂದು ನಂಬಿಸುತ್ತಾರೆ. ಇದನ್ನ ನಂಬಿದ ವ್ಯಾಪಾರಿಗಳು ಅವರು ಹೇಳುವಂತೆ ಮಾಡುತ್ತಾರೆ.

ಇದನ್ನೂ ಓದಿ: ಕಾರವಾರ: ಹಜ್ ಯಾತ್ರೆಗೆ ತೆರಳಿದ್ದ ಮುಂಡಗೋಡದ ಒಂದೇ ಕುಟುಂಬದ ಮೂವರು ಸಾವು

ನಾವು ಅಪ್ಡೇಟ್ ಮಾಡಿಕೊಡುತ್ತೇವೆ ಎಂದು ಹೇಳಿ ಮೊದಲಿಗೆ ಒಂದು ರೂ. ಕಳಿಸುತ್ತಾರೆ. ಬಳಿಕ ನಿಮ್ಮ ಪೇಟಿಎಂ ಅಪ್ಡೇಟ್ ಆಗಿದೆ ಎಂದು ಅಲ್ಲಿಂದ ಎಸ್ಕೇಪ್ ಆಗುತ್ತಾರೆ. ನಂತರ ನಡೆಯುವುದೇ ಅಸಲಿ ಆಟ. ಅವರ ಕ್ಯೂ ಆರ್​ ಕೋಡ್ ಸ್ಕ್ಯಾನರ್​ನ್ನು ಬಳಸಿ ಅವರ ಅಕೌಂಟ್​​ನಿಂದಲೇ ಹಣ ದೋಚುತ್ತಾರೆ.

48 ಸಾವಿರ ರೂ. ದೋಚಿದ ಖದೀಮರು

ಈಗಾಗಲೇ ಮಂಜುನಾಥ್​ ಟಿಫನ್ ಸೆಂಟರ್ ಮಾಲೀಕರ ಹಣವನ್ನು ಖದೀಮರು ದೋಚಿದ್ದಾರೆ. ಭಾಸ್ಕರ್ ಎಂಬುವವರ ಅಕೌಂಟ್​ನಿಂದ ಹಂತ ಹಂತವಾಗಿ 48 ಸಾವಿರ ರೂ. ದೋಚಿದ್ದಾರೆ. ಈ ಸಂಬಂಧ ಭಾಸ್ಕರ್ ಎಂಬುವವರಿಂದ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸದ್ಯ ಹೊಸ ಸ್ಕ್ಯಾಮ್ ನಿಂದಾಗಿ ಜನರು ಬೇಸತ್ತಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.