ವಿಜಯಪುರ: ದೇವರ ಪಲ್ಲಕ್ಕಿ ತೊಳೆಯಲು ತೆರಳಿದ್ದ ಇಬ್ಬರು ಸಹೋದರರ ಸಾವು
ಯುಗಾದಿ ಅಮಾವಾಸ್ಯೆಯಂದು ವಿಜಯಪುರ ಜಿಲ್ಲೆಯಲ್ಲಿ ದುರಂತವೊಂದು ನಡೆದಿದೆ. ಜಿಲ್ಲೆಯ ಕೊಲ್ಹಾರ ಪಟ್ಟಣದ ಬಳಿಯ ಕೃಷ್ಣಾನದಿಯಲ್ಲಿ ದೇವರ ಪಲ್ಲಕ್ಕಿ ತೊಳೆಯಲು ಹಾಗೂ ಪುಣ್ಯಸ್ನಾನ ಮಾಡಲು ನದಿಗೆ ಇಳಿದಿದ್ದ ಸಹೋದರರಿಬ್ಬರು ಬಾಲಕರು ನದಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿಜಯಪುರ, ಏಪ್ರಿಲ್ 08: ಯುಗಾದಿ ಅಮಾವಾಸ್ಯೆಯಂದು ವಿಜಯಪುರ ಜಿಲ್ಲೆಯಲ್ಲಿ ದುರಂತವೊಂದು ನಡೆದಿದೆ. ಜಿಲ್ಲೆಯ ಕೊಲ್ಹಾರ ಪಟ್ಟಣದ ಬಳಿಯ ಕೃಷ್ಣಾನದಿಯಲ್ಲಿ ದೇವರ ಪಲ್ಲಕ್ಕಿ ತೊಳೆಯಲು ಹಾಗೂ ಪುಣ್ಯಸ್ನಾನ ಮಾಡಲು ನದಿಗೆ ಇಳಿದಿದ್ದ ಸಹೋದರರಿಬ್ಬರು ಬಾಲಕರು ನದಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ (death). ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ನಿವಾಸಿಗಳಾದ ಯಶಸ್ವಿ ರಾಜು ಮಾದರ(13) ಮತ್ತು ಶ್ರೀಧರ ಶಿವಪ್ಪ ಮಾದರ ಅಲಿಯಾಸ್ ದೊಡ್ಡಮನಿ(10) ಮೃತರು. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಯಗಾದಿ ಹಬ್ಬದ ಹಿನ್ನಲೆ ಇಲ್ಲಿನ ಗ್ರಾಮೀಣ ಭಾಗದಲ್ಲಿ ದೇವರ ಪಲ್ಲಕ್ಕಿಯೊಂದಿಗೆ ನದಿಗೆ ಆಗಮಿಸಿ ಪಲ್ಲಕ್ಕಿ ತೊಳೆದು ಸ್ನಾನ ಮಾಡುವುದು ವಾಡಿಕೆ. ಆದರೆ ಇಂದು ಬಬಲೇಶ್ವರ ತಾಲೂಕಿ ಕಾರಜೋಳ ಗ್ರಾಮದಿಂದ ದೇವರ ಪಲ್ಲಕ್ಕಿಯೊಂದಿಗೆ ಆಗಮಿಸಿದ್ದ ಸಹೋದರರು ಮೃತಪಟ್ಟಿದ್ದಾರೆ. ಇಬ್ಬರು ಬಾಲಕರ ಶವಗಳನ್ನು ಪತ್ತೆ ಮಾಡಿದ ಪೊಲೀಸರು ಶವಗಳನ್ನು ಮೇಲೆ ತಂದಿದ್ದಾರೆ.
ಇದನ್ನೂ ಓದಿ: ನಕಲಿ ಪೊಲೀಸ್ನಿಂದ ಲೈಂಗಿಕ ಕಿರುಕುಳ ಆರೋಪ: ರಕ್ಷಣೆಕೋರಿ ಮನವಿ ಮಾಡಿದ ಮಂಗಳಮುಖಿಯರು
ಕಾನೂನು ಪ್ರಕಾರ ಮರಣೋತ್ತರ ಪರೀಕ್ಷೆ ನಡೆಸಿ ಬಾಲಕರ ಪೋಷಕರಿಗೆ ಶವಗಳನ್ನು ಹಸ್ತಾಂತರ ಮಾಡಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟಪ್ರಭಾ ನದಿಯಲ್ಲಿ ಈಜುತ್ತಿದ್ದ ಬಾಲಕ ನಾಪತ್ತೆ
ಬಾಗಲಕೋಟೆ: ನದಿಯಲ್ಲಿ ಈಜುತ್ತಿದ್ದ ಬಾಲಕ ನಾಪತ್ತೆ ಆಗಿರುವಂತಹ ಘಟನೆ ಬಾಗಲಕೋಟೆ ತಾಲೂಕಿನ ಹಳೆ ಮುರನಾಳ ಬಳಿಯ ಘಟಪ್ರಭಾ ನದಿಯಲ್ಲಿ ನಡೆದಿದೆ. ಹಳೆ ಮುರನಾಳದ ಮಹೇಶ್ ಮಾದರ(20) ನಾಪತ್ತೆಯಾದ ಯುವಕ. ಸ್ಥಳೀಯ ಮೀನುಗಾರರು, ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಹುಡುಕಾಟ ಮಾಡಲಾಗಿದೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮಾಂತರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದ ಆರೋಪ: ವ್ಯಕ್ತಿ ಸಾವು
ಕೋಲಾರ: ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದ ಆರೋಪದ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ನಗರದ ಹೋಪ್ ಹೆಲ್ತ್ ಕೇರ್ ಆಸ್ಪತ್ರೆ ವೈದ್ಯರ ನಿರ್ಲ್ಯಕ್ಷದ ಆರೋಪ ಕೇಳಿ ಬಂದಿದ್ದು, ಶ್ರೀನಿವಾಸಪುರ ತಾಲ್ಲೂಕಿನ ಕಮ್ಮತಮ್ಮಪಲ್ಲಿ 32 ವರ್ಷಸ ಗ್ರಾಮದ ವೆಂಕಟರಮಣಪ್ಪ ಮೃತಪಟ್ಟಿದ್ದಾರೆ. ಇಂದು ಮುಂಜಾನೆ ಹೊಟ್ಟೆ ನೋವು, ಹೊಟ್ಟೆ ಉಬ್ಬಸ ಎಂದು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಆಸ್ಪತ್ರೆಗೆ ಬಂದ ಕೆಲವೇ ಹೊತ್ತಿನಲ್ಲಿ ರೋಗಿ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ನ 19ನೇ ಮಹಡಿಯಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ
ಅನ್ನೋದು ಸಂಬಂಧಿಕರ ಆರೋಪವಾಗಿತ್ತು. ವೈದ್ಯರು ನೀಡಿದ್ದ ಇಂಜೆಕ್ಷನ್‌ನಿಂದಲೇ ಸಾವನ್ನಿಪ್ಪಿದ್ದಾರೆ ಎಂಬುದು ಕುಟುಂಬಸ್ಥರ ಆರೋಪವಾಗಿದೆ. ಮೃತ ವ್ಯಕ್ತಿಯ ಕುಟುಂಬಸ್ಥರಿಂದ ಆಸ್ಪತ್ರೆಯಲ್ಲಿನ ಕಿಟಕಿ ಗಾಜು ಹೊಡೆದು ಹಾಕಿ ಆಕ್ರೋಶ ಹೊರ ಹಾಕಿದ್ದು, ಸ್ಥಳಕ್ಕೆ ಕೋಲಾರ ನಗರ ಠಾಣೆ ಪೋಲೀಸರ ಭೇಟಿ ನೀಡಿದ್ರು, ವೈದ್ಯರ ಮೇಲೆ ಹಲ್ಲೆಗೆ ಮುಂದಾದ ಮೃತರ ಸಂಬಂಧಿಕರು ಹಲ್ಲೆ ಮಾಡಿದ್ದಾರೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಲಾಗಿದೆ.
ವೈದ್ಯರ ಮೇಲೆ ಹಲ್ಲೆಗೆ ಮುಂದಾದ ಹಿನ್ನೆಲೆ ಹೋಪ್ ಆಸ್ಪತ್ರೆ ವೈದ್ಯ ಯಶವಂತ್ ಅವರಿಂದ ದೂರು ನೀಡಲಾಗಿದೆ. ವೈದ್ಯರ ನಿರ್ಲ್ಯಕ್ಷದ ಆರೋಪ ಹಿನ್ನೆಲೆ ಆಸ್ಪತ್ರೆ ವೈದ್ಯರ ವಿರುದ್ದ ಮೃತರ ಕುಟುಂಬಸ್ಥರು ಸಹ ದೂರು ನೀಡಲಾಗಿದೆ. ಇನ್ನೂ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದ್ದು, ಪೊಲೀಸರ ಅಂಗಳದಲ್ಲಿ ನ್ಯಾಯ ಪಂಚಾಯತ ಹಮ್ಮಿಕೊಳ್ಳಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:32 pm, Mon, 8 April 24