AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡದಲ್ಲಿ ಯುಗಾದಿಯಂದು ಗೊಂಬೆ ಹೇಳುತೈತೆ: ಕುತೂಹಲ ಮೂಡಿಸಿದ ರಾಜಕೀಯ ಭವಿಷ್ಯ

ರಾಜಕೀಯ, ಮಳೆ, ಬೆಳೆಯ ಬಗ್ಗೆ ನಾಳೆ  ಗೊಂಬೆಗಳ ಭವಿಷ್ಯ ನಿರ್ಧಾರವಾಗಲಿದೆ. ಗ್ರಾಮಸ್ಥರು ಎತ್ತು, ಗೊಂಬೆ, ವಿವಿಧ ಮಳೆಗಳ ಹೆಸರಿನ ಮೇಲೆ ಕಾಳನ್ನು ಹಳ್ಳದಲ್ಲಿಡುತ್ತಾರೆ. ಸದ್ಯ ಫಲ ಭವಿಷ್ಯದ ಪ್ರತಿಷ್ಠಾಪನೆ ಮಾಡಿರೋ ಗ್ರಾಮದ ಪ್ರಮುಖರು, ನಾಳೆ ಬೆಳಗ್ಗೆ ಭವಿಷ್ಯ ಗೊತ್ತಾಗಲಿದೆ.

ಧಾರವಾಡದಲ್ಲಿ ಯುಗಾದಿಯಂದು ಗೊಂಬೆ ಹೇಳುತೈತೆ: ಕುತೂಹಲ ಮೂಡಿಸಿದ ರಾಜಕೀಯ ಭವಿಷ್ಯ
ಗೊಂಬೆ ಭವಿಷ್ಯ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಗಂಗಾಧರ​ ಬ. ಸಾಬೋಜಿ|

Updated on: Apr 08, 2024 | 9:32 PM

Share

ಧಾರವಾಡ, ಏಪ್ರಿಲ್ 08: ಪ್ರತಿ ವರ್ಷದಂತೆ ಈ ವರ್ಷವು ಧಾರವಾಡ ತಾಲೂಕಿನ ಹನುಮನಕೊಪ್ಪ ಗ್ರಾಮದ ಹಳ್ಳದಲ್ಲಿ ಸೇನಾಧಿಪತಿ ಗೊಂಬೆ (Gombe), ಮಣ್ಣಿನ ಎತ್ತು ಮಾಡಿ ಗ್ರಾಮಸ್ಥರು ಫಲ ಕಟ್ಟುತ್ತಾರೆ. ಈ ಸಲದ ಗೊಂಬೆ ಭವಿಷ್ಯ ಏನಾಗಲಿದೆ ಅನ್ನೋ ಕುತೂಹಲ  ಎಲ್ಲರಿಗೂ ಇದೆ. ರಾಜಕೀಯ, ಮಳೆ, ಬೆಳೆಯ ಬಗ್ಗೆ ನಾಳೆ  ಗೊಂಬೆಗಳ ಭವಿಷ್ಯ ನಿರ್ಧಾರವಾಗಲಿದೆ. ಗ್ರಾಮಸ್ಥರು ಎತ್ತು, ಗೊಂಬೆ, ವಿವಿಧ ಮಳೆಗಳ ಹೆಸರಿನ ಮೇಲೆ ಕಾಳನ್ನು ಹಳ್ಳದಲ್ಲಿಡುತ್ತಾರೆ. ಸದ್ಯ ಫಲ ಭವಿಷ್ಯದ ಪ್ರತಿಷ್ಠಾಪನೆ ಮಾಡಿರೋ ಗ್ರಾಮದ ಪ್ರಮುಖರು, ನಾಳೆ ಬೆಳಗ್ಗೆ ಭವಿಷ್ಯ ಗೊತ್ತಾಗಲಿದೆ.

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುವುದನ್ನು, ಕಳೆದ ಸಲ ರಾಜ್ಯದಲ್ಲಿ ಅಧಿಕಾರ ಬದಲಿ, ಇಂದಿರಾ ಗಾಂಧಿ ನಿಧನದ ಸುದ್ದಿಯನ್ನೂ ಮುಂಚಿತವಾಗಿ ಗೊಂಬೆಗಳು ಭವಿಷ್ಯ ನುಡಿದಿದ್ದವು. ಆಯಾ ದಿಕ್ಕಿನಲ್ಲಿ ಪ್ರತಿಷ್ಠಾಪನೆಯಾಗುವ ಸೇನಾಪತಿ ಗೊಂಬೆಗಳು, ಯಾವ ದಿಕ್ಕಿನ ಗೊಂಬೆಗೆ ಪೆಟ್ಟಾಗುತ್ತೋ ಅದರ ಮೇಲೆ ಭವಿಷ್ಯ ನಿರ್ಧಾರ ಮಾಡಲಾಗುತ್ತದೆ.

ಇದನ್ನೂ ಓದಿ: ಬಿಸಿಲಿನ ತಾಪಕ್ಕೆ ಮೂಕ ಪ್ರಾಣಿಗಳ ಗೋಳಾಟ: ಆಹಾರಕ್ಕಾಗಿ ಮಂಗಗಳ ಪರದಾಟ

ಒಂದು ವೇಳೆ ಯಾವುದೇ ದಿಕ್ಕಿಗೆ ಪೆಟ್ಟಾಗದೇ ಹೋದರೆ ಯಾವುದೇ ಬದಲಾವಣೆ ಇಲ್ಲ ಅಂತ ಭವಿಷ್ಯ ನಿರ್ಧಾರ. ನೂರಾರು ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ.

ಸಾಮಾನ್ಯವಾಗಿ ಯುಗಾದಿ ಅಂದರೆ ಹಿಂದು ವರ್ಷದ ಆರಂಭ ಇದ್ದಂತೆ. ಈ ಸಮಯದಲ್ಲಿ ರೈತರು ವರ್ಷದ ಕೃಷಿ ಲೆಕ್ಕಾಚಾರಗಳನ್ನು ಹಾಕುವುದು ರೂಢಿ. ಆಯಾ ವರ್ಷ ಏನು ಬೆಳೆ ತೆಗೆಯಬೇಕು ಅನ್ನೋದನ್ನು ಅನೇಕ ಕಡೆ ಅನೇಕ ರೀತಿಯಲ್ಲಿ ನೋಡುತ್ತಾರೆ. ಅಂತಹುದೇ ಒಂದು ಪದ್ಧತಿ ಧಾರವಾಡ ತಾಲೂಕಿನ ಹನುಮನಕೊಪ್ಪ ಗ್ರಾಮದಲ್ಲಿದೆ.

ಇದನ್ನೂ ಓದಿ: ರಂಜಾನ್​ಗೆ ಪ್ರಾಮುಖ್ಯತೆ, ಯುಗಾದಿ ಕಡೆಗಣನೆ: ರೇಷ್ಮೆ ಇಲಾಖೆ ಉಪ ನಿರ್ದೇಶಕರ ವಿರುದ್ಧ ಆರೋಪ

ಇಲ್ಲಿನ ತುಪ್ಪರಿಹಳ್ಳದಲ್ಲಿ ಗ್ರಾಮಸ್ಥರೆಲ್ಲ ಸೇರಿ ಯುಗಾದಿ ಅಮಾವಾಸ್ಯೆಯ ಸಂಜೆ ಹೊತ್ತು ಹೋಗಿ ಮಣ್ಣಿನಿಂದ ಗೊಂಬೆ ತಯಾರಿಸಿ, ಆಯಾ ಮಳೆಗಳ ಹೆಸರಿನಲ್ಲಿ ಎಕ್ಕೆ ಎಲೆಯಲ್ಲಿ ಕಾಳುಗಳನ್ನು ಹಾಕಿ ಮಳೆ ಬೆಳೆ ನೋಡುತ್ತಾರೆ. ಈ ಫಲ ಭವಿಷ್ಯದಲ್ಲಿಯೇ ರಾಜಕೀಯ ಭವಿಷ್ಯ ನೋಡಿಕೊಂಡು ಬರುವ ರೂಢಿ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ