ರಂಜಾನ್ಗೆ ಪ್ರಾಮುಖ್ಯತೆ, ಯುಗಾದಿ ಕಡೆಗಣನೆ: ರೇಷ್ಮೆ ಇಲಾಖೆ ಉಪ ನಿರ್ದೇಶಕರ ವಿರುದ್ಧ ಆರೋಪ
ಏಪ್ರಿಲ್ 09 ರಂದು ನಡೆಯಲಿರುವ ಯುಗಾದಿ ಹಬ್ಬದ ಪ್ರಯುಕ್ತ ಇ- ಹರಾಜನ್ನು ಬೆಳಿಗ್ಗೆ 9 ಗಂಟೆಗೆ ಪ್ರಾರಂಭಿಸಲಾಗುತ್ತದೆ. ಅದೇ ರೀತಿಯಾಗಿ ಏಪ್ರಿಲ್ 11 ರಂದು ನಡೆಯಲಿರುವ ಇ-ಹರಾಜನ್ನು ರಂಜಾನ್ ಹಬ್ಬದ ಪ್ರಯುಕ್ತ ಮಧ್ಯಾಹ್ನ 2 ಗಂಟೆಗೆ ಪ್ರಾರಂಭಿಸಲಾಗುತ್ತದೆ. ರೈತ ಬಾಂಧವರು ಹಾಗೂ ರೀಲರ್ಗಳು ಸಹಕರಿಸಬೇಕಾಗಿ ಕೋರಲಾಗಿದೆ.
ರಾಮನಗರ, ಏಪ್ರಿಲ್ 08: ಮುಸ್ಲಿಂ ರ ಪ್ರವಿತ್ರ ಹಬ್ಬ ರಂಜಾನ್ (Ramzan) ಮತ್ತು ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬವು ಈ ಸಲ ಎರಡು ಹಬ್ಬಗಳು ಒಂದು ದಿನ ಬಿಟ್ಟು ಒಂದು ದಿನ ಬಂದಿವೆ. ಇದರ ನಡುವೆ ರಂಜಾನ್ ಹಬ್ಬಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಯುಗಾದಿ ಹಬ್ಬ ಕಡೆಗಣನೆ ಆರೋಪ ಕೇಳಿಬಂದಿದೆ. ರಾಮನಗರದ ರೇಷ್ಮೆ ಇಲಾಖೆಯ ಉಪ ನಿರ್ದೇಶಕರ ವಿರುದ್ಧ ಆರೋಪ ಮಾಡಲಾಗಿದೆ.
ರಂಜಾನ್ ಪ್ರಯುಕ್ತ ಮಧ್ಯಾಹ್ನ 2 ಗಂಟೆಗೆ ಹರಾಜು ಎಂದು ಆದೇಶಿಸಲಾಗಿದ್ದು, ಯುಗಾದಿ ಹಬ್ಬದಂದು ಬೆಳಗ್ಗೆ 9 ಗಂಟೆಗೆ ಇ-ಹರಾಜು ಎಂದು ಸೂಚನೆ ನೀಡಲಾಗಿದೆ. ರೇಷ್ಮೆ ಗೂಡು ಇ-ಹರಾಜಿನ ಸಮಯದಲ್ಲಿ ತಾರತಮ್ಯ ಆರೋಪ ಮಾಡಿದ್ದು, ರೈತರು ಸಹಕರಿಸುವಂತೆ ರೇಷ್ಮೆ ಇಲಾಖೆ ಉಪ ನಿರ್ದೇಶಕರಿಂದ ಪ್ರಕಟಣೆ ಹೊರಡಿಸಲಾಗಿದೆ.
ಪ್ರಕಟಣೆಯಲ್ಲಿ ಏನಿದೆ?
ಏಪ್ರಿಲ್ 09 ರಂದು ನಡೆಯಲಿರುವ ಯುಗಾದಿ ಹಬ್ಬದ ಪ್ರಯುಕ್ತ ಇ- ಹರಾಜನ್ನು ಬೆಳಿಗ್ಗೆ 9 ಗಂಟೆಗೆ ಪ್ರಾರಂಭಿಸಲಾಗುತ್ತದೆ. ಅದೇ ರೀತಿಯಾಗಿ ಏಪ್ರಿಲ್ 11 ರಂದು ನಡೆಯಲಿರುವ ಇ-ಹರಾಜನ್ನು ರಂಜಾನ್ ಹಬ್ಬದ ಪ್ರಯುಕ್ತ ಮಧ್ಯಾಹ್ನ 2 ಗಂಟೆಗೆ ಪ್ರಾರಂಭಿಸಲಾಗುತ್ತದೆ. ರೈತ ಬಾಂಧವರು ಹಾಗೂ ರೀಲರ್ಗಳು ಸಹಕರಿಸಬೇಕಾಗಿ ಕೋರಲಾಗಿದೆ.
ಇದನ್ನೂ ಓದಿ: Ugadi in 2024: ಯುಗಾದಿ ಹಬ್ಬಕ್ಕೆ ಕೆಎಸ್ಆರ್ಟಿಸಿಯಿಂದ ಹೆಚ್ಚುವರಿ ಬಸ್, ಪ್ರಯಾಣಿಕರಿಗೆ ಗುಡ್ ನ್ಯೂಸ್
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಕಣ್ಣು ಮುಚ್ಚಿ ತೆರೆಳುವುದರೊಳಗೆ ಯುಗಾದಿ ಹಬ್ಬಕ್ಕೆ ಬಂದೆ ಬಿಟ್ಟಿತು. ಈ ಹಬ್ಬವನ್ನು ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ವಿಜೃಂಭಣೆಯ ಹಬ್ಬವಾಗಿದೆ. ಪ್ರತಿ ವರ್ಷ ಹಿಂದೂ ಧರ್ಮದಲ್ಲಿ, ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದಾ ದಿನದಂದು ಅಂದರೆ ಈ ಬಾರಿ ಏ. 9 ರಂದು ಮಂಗಳವಾರ ಯುಗಾದಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ದಿನ ಎಲ್ಲರ ಮನೆಗಳನ್ನು ಅಲಂಕರಿಸುವ ಮೂಲಕ, ಹೊಸ ಬಟ್ಟೆ ಧರಿಸಿ ಹಬ್ಬ ಮಾಡಲಾಗುತ್ತದೆ.
ಇದನ್ನೂ ಓದಿ: Ugadi 2024 : ಯುಗಾದಿ ಹಬ್ಬಕ್ಕೆ ಮನೆಯನ್ನು ಸಾಂಪ್ರದಾಯಿಕವಾಗಿ ಅಲಂಕರಿಸುವುದು ಹೇಗೆ?
ರಂಜಾನ್ ಇಸ್ಲಾಂನಲ್ಲಿ ಅತ್ಯಂತ ಪವಿತ್ರವಾದ ತಿಂಗಳಾಗಿದೆ. ಲಕ್ಷಾಂತರ ಮುಸ್ಲಿಮರಿಗೆ ಇದು ಬಹಳ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದ ದಿನವಾಗಿದೆ. ಈ ಹಬ್ಬ 29ರಿಂದ 30 ದಿನಗಳವರೆಗೆ ಇರುತ್ತದೆ. ರಂಜಾನ್ ಉಪವಾಸ, ಪ್ರಾರ್ಥನೆ, ಪ್ರತಿಬಿಂಬ ಮತ್ತು ಸಮುದಾಯದ ಅವಧಿಯಾಗಿದೆ. ಇಸ್ಲಾಮಿಕ್ ನಂಬಿಕೆಯ ಪ್ರಕಾರ ಪ್ರವಾದಿ ಮುಹಮ್ಮದ್‌ಗೆ ಕುರಾನ್‌ನ ಮೊದಲ ಬಹಿರಂಗಪಡಿಸುವಿಕೆಯ ಸ್ಮರಣಾರ್ಥವಾಗಿ ಇದನ್ನು ಆಚರಿಸಲಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.