Ugadi in 2024: ಯುಗಾದಿ ಹಬ್ಬಕ್ಕೆ ಕೆಎಸ್​ಆರ್​ಟಿಸಿಯಿಂದ ಹೆಚ್ಚುವರಿ ಬಸ್, ಪ್ರಯಾಣಿಕರಿಗೆ ಗುಡ್ ನ್ಯೂಸ್

KSRTC special bus: ಯುಗಾದಿ, ರಂಜಾನ್, ದೀರ್ಘ ವಾರಾಂತ್ಯ ಹೀಗೆ ಸಾಲು ರಜೆಗಳಲ್ಲಿ ಊರುಗಳಿಗೆ ತೆರಳಲು ಹಾಗೂ ಪ್ರವಾಸಕ್ಕೆ ಯೋಜನೆ ಹಾಕಿಕೊಂಡವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶುಭ ಸುದ್ದಿ ನೀಡಿದೆ. ನಾಲ್ಕೂ ನಿಗಮಗಳು ಒಟ್ಟಾಗಿ 2000ಕ್ಕೂ ಹೆಚ್ಚು ವಿಶೇಷ ಬಸ್​​ಗಳನ್ನು ಒದಗಿಸಲಿವೆ.

Ugadi in 2024: ಯುಗಾದಿ ಹಬ್ಬಕ್ಕೆ ಕೆಎಸ್​ಆರ್​ಟಿಸಿಯಿಂದ ಹೆಚ್ಚುವರಿ ಬಸ್, ಪ್ರಯಾಣಿಕರಿಗೆ ಗುಡ್ ನ್ಯೂಸ್
ಕೆಎಸ್​ಆರ್​ಟಿಸಿ
Follow us
Kiran Surya
| Updated By: Ganapathi Sharma

Updated on:Apr 05, 2024 | 9:27 AM

ಬೆಂಗಳೂರು, ಏಪ್ರಿಲ್ 5: ಯುಗಾದಿ ಹಬ್ಬದ (Ugadi in 2024) ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ವಿವಿಧ ಊರುಗಳಿಗೆ 2000ಕ್ಕೂ ಹೆಚ್ಚು ವಿಶೇಷ ಬಸ್​ಗಳ ವ್ಯವಸ್ಥೆ ಮಾಡಿದೆ. ಯುಗಾದಿ ಹಬ್ಬ ಹಾಗೂ ಸಾಲು ರಜೆಗಳ ಕಾರಣ ಊರಿಗೆ ತೆರಳುವವರಿಗೆ ಹಾಗೂ ಪ್ರವಾಸ ತೆರಳುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಎಸ್​​ಆರ್​ಟಿಸಿ ಈ ಕ್ರಮಕ್ಕೆ ಮುಂದಾಗಿದೆ. ಕೆಎಸ್‌ಆರ್‌ಟಿಸಿ ಸೇರಿ ನಾಲ್ಕು ನಿಗಮಗಳು ವಿಶೇಷ ಬಸ್‌ಗಳು ಕಾರ್ಯಾಚರಣೆಗೆ ಸಜ್ಜಾಗಿವೆ.

ಏಪ್ರಿಲ್ 9ರಂದು ಮಂಗಳವಾರ ಯುಗಾದಿ ಹಬ್ಬ ಇರಲಿದೆ. ಶನಿವಾರ, ಭಾನುವಾರ ಹೇಗೂ ರಜೆಯಾದ್ದರಿಂದ ಸೋಮವಾರ ಒಂದು ದಿನ ರಜೆ ಮಾಡಿದರೆ 4 ದಿನ ರಜೆ ಸಿಕ್ಕಂತಾಗುತ್ತದೆ. ಮುಂದಿನ ವಾರ, ಏಪ್ರಿಲ್ 11 ರ ಗುರುವಾರ ಮುಸ್ಲಿಮರ ಹಬ್ಬ ರಂಜಾನ್ ಸಹ ಇರಲಿದೆ. ಮತ್ತೆ ದೀರ್ಘ ವಾರಾಂತ್ಯ ರಜೆ ಸಿಗಲಿದೆ. 13 ರಂದು ಎರಡನೇ ಶನಿವಾರ ರಜೆ ಹಾಗೂ14 ರಂದು ಭಾನುವಾರ ರಜೆ‌ ಇದೆ. ಈ ಎಲ್ಲ ಕಾರಣಗಳನ್ನು ಮತ್ತು ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಕೆಎಸ್​ಆರ್​ಟಿಸಿ ಹೆಚ್ಚುವರಿ ಬಸ್ ನಿಯೋಜನೆ ಮಾಡಿದೆ.

ಕೆಎಸ್‌ಆರ್‌ಟಿಸಿಯಿಂದ 1,750ಬಸ್, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 145 ಬಸ್, ಕೆಕೆಆರ್‌ಟಿಸಿಯ 200 ಬಸ್ ಹಾಗೂ ಬಿಎಂಟಿಸಿಯ 180 ವಿಶೇಷ ಬಸ್‌ಗಳು ಸಂಚಾರ ಮಾಡಲಿವೆ. ಒಟ್ಟು ನಾಲ್ಕು ನಿಗಮಗಳಿಂದ 2,275 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.

ಹಬ್ಬಗಳು ಹಾಗೂ ವಾರಾಂತ್ಯದ ಕಾರಣ ಏಪ್ರಿಲ್ 7 ರಿಂದ ಏಪ್ರಿಲ್ 14ರ ವರೆಗೆ ಬರೋಬ್ಬರಿ 5 ರಜೆಗಳು ಸಿಗಲಿವೆ. ವಿದ್ಯಾರ್ಥಿಗಳಿಗೆ ಬೇಸಗೆ ರಜೆಯೂ ಶುರುವಾದ ಕಾರಣ ಮಕ್ಕಳ ಜೊತೆ ಪ್ರವಾಸಕ್ಕೆ ತೆರಳು ಪೋಷಕರು ಯೋಜನೆ ಹಾಕಿಕೊಂಡಿದ್ದಾರೆ. ಹೀಗಾಗಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿಶೇಷ ಬಸ್ ಸೇವೆ ಒದಗಿಸಲಾಗುತ್ತಿದೆ.

ಎಲ್ಲಿಗೆಲ್ಲ ವಿಶೇಷ ಬಸ್​?

ನಗರದ ಕೆಂಪೇಗೌಡ ನಿಲ್ದಾಣ, ಸ್ಯಾಟಲೈಟ್ ನಿಲ್ದಾಣ, ಶಾಂತಿನಗರದಿಂದ ವಿಶೇಷ ಬಸ್ ಸೇವೆ ದೊರೆಯಲಿದೆ. ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ ಸೇರಿ‌ ಹಲವು ಸ್ಥಳಗಳಿಗೆ ಹೆಚ್ಚುವರಿ ಬಸ್ ಸೇವೆ ದೊರೆಯಲಿದೆ. ನೆರೆರಾಜ್ಯಗಳ ನಗರಗಳಾದ ಹೈದರಾಬಾದ್, ಚೆನ್ನೈ,‌ ಗೋವಾ ಪಣಜಿ, ಶಿರಡಿ, ಎರ್ನಾಕುಲಂಗೆ ವಿಶೇಷ ಬಸ್ ಸೇವೆ ಇರಲಿದೆ.

ಇದನ್ನೂ ಓದಿ: ಮೈಸೂರು ಚೆನ್ನೈ ಮಧ್ಯೆ ಇಂದಿನಿಂದ ಮತ್ತೊಂದು ವಂದೇ ಭಾರತ್ ಎಕ್ಸ್​ಪ್ರೆಸ್

ಸಾಮಾನ್ಯವಾಗಿ ಹಬ್ಬಗಳು, ಸಾಲು ರಜೆಗಳ ಸಂದರ್ಭ ಕೆಎಸ್​ಆರ್​​ಟಿಸಿ ವಿಶೇಷ ಬಸ್​ ಸೇವೆ ಒದಗಿಸುತ್ತಿದೆ. ಈ ಹಿಂದೆಯೂ ದಸರಾ, ದೀಪಾವಳಿ ಮತ್ತಿತರ ಹಬ್ಬಗಳ ಸಂದರ್ಭ ಹೆಚ್ಚುವರಿ ಬಸ್ ಸೇವೆ ಒದಗಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:26 am, Fri, 5 April 24

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ