Ugadi 2024 : ಯುಗಾದಿ ಹಬ್ಬಕ್ಕೆ ಮನೆಯನ್ನು ಸಾಂಪ್ರದಾಯಿಕವಾಗಿ ಅಲಂಕರಿಸುವುದು ಹೇಗೆ?

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಕಣ್ಣು ಮುಚ್ಚಿ ತೆರೆಳುವುದರೊಳಗೆ ಯುಗಾದಿ ಹಬ್ಬಕ್ಕೆ ಬಂದೆ ಬಿಟ್ಟಿತು. ಈ ಹಬ್ಬವನ್ನು ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ವಿಜೃಂಭಣೆಯ ಹಬ್ಬವಾಗಿದೆ. ಯುಗಾದಿಯಂದು ಸಾಂಪ್ರದಾಯಿಕವಾಗಿ ಮನೆಯನ್ನು ಸಿಂಗರಿಸಿದರೆ ಹಬ್ಬದ ಕಳೆಯು ಬರುತ್ತದೆ. ಹಬ್ಬದ ದಿನ ಮನೆಯ ಅಲಂಕಾರಕ್ಕಾಗಿ ಸರಳ ಸಲಹೆಗಳು * ಮನೆಯ ಮುಂಭಾಗದಲ್ಲಿ ರಂಗೋಲಿಯಿರಲಿ : ಹಬ್ಬದ ರಂಗು ಹೆಚ್ಚಿಸುವುದೇ ಬಣ್ಣ ಬಣ್ಣದ ರಂಗೋಲಿಗಳು. ಆಕರ್ಷಕವಾಗಿ ರಂಗೋಲಿ ಬಿಡಿಸುವುದು ಬರುವುದಿಲ್ಲ ಎಂದಾದರೆ ಫ್ಲೋರ್ ಆರ್ಟ್ ಸ್ಟೆನ್ಸಿಲ್ ಗಳನ್ನು ಖರೀದಿಸಿ […]

Ugadi 2024 : ಯುಗಾದಿ ಹಬ್ಬಕ್ಕೆ ಮನೆಯನ್ನು ಸಾಂಪ್ರದಾಯಿಕವಾಗಿ ಅಲಂಕರಿಸುವುದು ಹೇಗೆ?
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 06, 2024 | 6:02 PM

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಕಣ್ಣು ಮುಚ್ಚಿ ತೆರೆಳುವುದರೊಳಗೆ ಯುಗಾದಿ ಹಬ್ಬಕ್ಕೆ ಬಂದೆ ಬಿಟ್ಟಿತು. ಈ ಹಬ್ಬವನ್ನು ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ವಿಜೃಂಭಣೆಯ ಹಬ್ಬವಾಗಿದೆ. ಯುಗಾದಿಯಂದು ಸಾಂಪ್ರದಾಯಿಕವಾಗಿ ಮನೆಯನ್ನು ಸಿಂಗರಿಸಿದರೆ ಹಬ್ಬದ ಕಳೆಯು ಬರುತ್ತದೆ.

ಹಬ್ಬದ ದಿನ ಮನೆಯ ಅಲಂಕಾರಕ್ಕಾಗಿ ಸರಳ ಸಲಹೆಗಳು

* ಮನೆಯ ಮುಂಭಾಗದಲ್ಲಿ ರಂಗೋಲಿಯಿರಲಿ : ಹಬ್ಬದ ರಂಗು ಹೆಚ್ಚಿಸುವುದೇ ಬಣ್ಣ ಬಣ್ಣದ ರಂಗೋಲಿಗಳು. ಆಕರ್ಷಕವಾಗಿ ರಂಗೋಲಿ ಬಿಡಿಸುವುದು ಬರುವುದಿಲ್ಲ ಎಂದಾದರೆ ಫ್ಲೋರ್ ಆರ್ಟ್ ಸ್ಟೆನ್ಸಿಲ್ ಗಳನ್ನು ಖರೀದಿಸಿ ಅದಕ್ಕೆ ಬಣ್ಣ ತುಂಬಿದರೆ ಮನೆಯ ಮುಂಭಾಗದಲ್ಲಿ ಸುಂದರವಾದ ರಂಗೋಲಿ ಸಿದ್ಧವಾಗುತ್ತದೆ.

* ಅಲಂಕಾರಕ್ಕಾಗಿ ಮಾವಿನ ಎಲೆ ಮತ್ತು ಬೇವಿನ ಎಲೆಗಳನ್ನು ಬಳಸಿ: ಹೊಸ ವರ್ಷದ ಮೊದಲ ಹಬ್ಬ ಯುಗಾದಿಗೆ ಪ್ರಕೃತಿಯು ಸಜ್ಜಾಗಿರುತ್ತದೆ. ಹೀಗಾಗಿ ಹೊಸ ವರ್ಷಕ್ಕೆ ಮನೆಯ ಬಾಗಿಲಿಗೆ ಮಾವಿನೆಲೆ ತೋರಣ, ಬೇವಿನಎಲೆಯ ಅಲಂಕಾರ ಮಾಡುವುದು ಒಳ್ಳೆಯದು.

* ಬಾಳೆ ಎಲೆಗಳಿಂದ ಅಲಂಕಾರ ಮಾಡಿ: ಸರಳವಾಗಿ ಅಲಂಕಾರವನ್ನು ಇಷ್ಟ ಪಡುವವರು ಈ ಬಾಳೆ ಎಲೆಯನ್ನು ಬಳಸಬಹುದು. ಬಾಳೆ ಎಲೆಗಳಿಂದ ಮನೆಯ ಮುಖ್ಯದ್ವಾರವನ್ನು ಅಲಂಕರಿಸಬಹುದು. ಇಲ್ಲದಿದ್ದರೆ ಮನೆಯ ಮುಂಭಾಗದಲ್ಲಿ ಬಾಳೆಗಿಡಗಳನ್ನು ನೆಟ್ಟರೆ ಹಬ್ಬದ ಕಳೆಯು ತುಂಬಿ ತುಳುಕುತ್ತದೆ.

ಇದನ್ನೂ ಓದಿ: ಯುವಜನರಲ್ಲಿ ಹೃದಯಾಘಾತಕ್ಕೆ ಕಾರಣವೇನು? ಈ ತಪ್ಪು ಮಾಡಬೇಡಿ

* ಮನೆಯನ್ನು ಹೂವುಗಳಿಂದ ಕೂಡ ಅಲಂಕರಿಸಿ : ಮನೆಯ ಮುಖ್ಯ ಬಾಗಿಲು ಮತ್ತು ಪೂಜಾ ಕೋಣೆಯನ್ನು ಅಲಂಕರಿಸಲು ತಾಜಾ ಹೂವುಗಳನ್ನು ಬಳಸಿದರೆ ಉತ್ತಮ. ಆ ಹೂವುಗಳಿಗೆ ದೀಪಾಲಂಕಾರ ಮಾಡಿದರೆ ಸೌಂದರ್ಯವನ್ನು ಹೆಚ್ಚಿಸಬಹುದು. ಈ ರೀತಿಯ ಅಲಂಕಾರವು ಮನೆಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM