Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಗಾದಿ ಅಮಾವಾಸ್ಯೆಯಂದೇ ಹಲವೆಡೆ ಅಗ್ನಿ ಅವಘಡ: ಹೊತ್ತಿ ಉರಿದ ಕಾರು

ಬಾರೀ ಬೆಂಕಿ ಅವಘಡ.ಯುಗಾದಿ ಅಮಾವಾಸ್ಯೆಯಂದೇ ಹಲವೆಡೆ ಅಗ್ನಿ ಅವಘಡಗಳು ಸಂಭವಿಸಿವೆ. ಬಿಸಿಲಿನ ತಾಪಕ್ಕೆ ಚಲಿಸುತ್ತಿದ್ದ ಕಾರು ಹೊತ್ತಿಉರಿದಿದ್ದು, ಕಾರಿನಲ್ಲಿದ್ದ ಮೂವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪಟ್ಟಣದಲ್ಲಿ ನಡೆದಿದೆ.

ಯುಗಾದಿ ಅಮಾವಾಸ್ಯೆಯಂದೇ ಹಲವೆಡೆ ಅಗ್ನಿ ಅವಘಡ: ಹೊತ್ತಿ ಉರಿದ ಕಾರು
ಬೆಂಕಿ ಅವಘಡ
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಗಂಗಾಧರ​ ಬ. ಸಾಬೋಜಿ

Updated on: Apr 08, 2024 | 7:52 PM

ಕಾರವಾರ, ಏಪ್ರಿಲ್​ 08: ಬಿಸಿಲಿನ ತಾಪಕ್ಕೆ ಚಲಿಸುತ್ತಿದ್ದ ಕಾರು ಹೊತ್ತಿಉರಿದಿದ್ದು (fire), ಕಾರಿನಲ್ಲಿದ್ದ ಮೂವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪಟ್ಟಣದಲ್ಲಿ ನಡೆದಿದೆ. ದಾಂಡೇಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದೇ ರೀತಿ ಮತ್ತೊಂದು ಪ್ರಕರಣದಲ್ಲಿ ಶಾರ್ಟ್​ ಸರ್ಕ್ಯೂಟ್​ನಿಂದ ಡಸ್ಟರ್​​ ಕಾರು ಹೊತ್ತಿ ಉರಿದಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ರಾಯಿ ಕಂಗಿತ್ತಿಲು ಬಳಿ ನಡೆದಿದೆ. ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಗೆ ಕಾಣಿಸಿಕೊಳ್ತಿದ್ದಂತೆ ಮೂವರು ಕಾರಿನಿಂದ ಇಳಿದಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ನಡು ರಸ್ತೆಯಲ್ಲೇ ಧಗಧಗನೇ ಹೊತ್ತಿ ಉರಿದ ಟಾಟಾ ಎಸ್ ವಾಹನ

ಯಾದಗಿರಿ: ಶಹಾಪುರ ತಾಲೂಕಿನ ಖಾನಾಪುರ ಗ್ರಾಮದಲ್ಲಿ ಪ್ಲಾಸ್ಟಿಕ್ ಊಟದ ತಟ್ಟೆ ಸಾಗಿಸುತ್ತಿದ್ದ ವಾಹನ ಬೆಂಕಿಗಾಹುತಿ ಆಗಿರುವಂತಹ ಘಟನೆ ನಡೆದಿದೆ. ಭತ್ತ ಕಟಾವು ಮಾಡಿದ ಗದ್ದೆಗೆ ಹಚ್ಚಿದ ಬೆಂಕಿ‌ ತಗುಲಿರುವ ಶಂಕೆ ವ್ಯಕ್ತವಾಗಿದೆ. ಅದೃಷ್ಟವಶಾತ್​ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಸುಮಾರು 3 ಲಕ್ಷ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ ಆಗಿವೆ.

ಬಾರಿ ಬೆಂಕಿ ಅವಘಡ: 15 ಲಕ್ಷ ರೂ ಗೂ ಹೆಚ್ಚಿನ ಹಾನಿ

ಉತ್ತರ ಕನ್ನಡ: ಶಿರಸಿ ನಗರದಲ್ಲಿ ಬಾರಿ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗಿಗೆ ಕನ್ನಿಕಾ ಪ್ರಿಟಿಂಗ್ ಪ್ಲೆಕ್ಸ್ ಸುಟ್ಟು ಕರಕಲಾಗಿದೆ. ಸುಮಾರು 15 ಲಕ್ಷ ರೂ ಗೂ ಹೆಚ್ಚಿನ ಹಾನಿ ಉಂಟಾಗಿದೆ. ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಶಿರಸಿ ನಗರದ ಸೀತಾರಾಮ ಇವರಿಗೆ ಪ್ರಿಟಿಂಗ್ ಪ್ಲೆಕ್ಸ್ ಸೇರಿದೆ. ಬೆಂಕಿ ಕಾಣಿಸಿಕೊಂಡ ಬಗ್ಗೆ ಇದುವರೆಗೂ ಕಾರಣ ತಿಳಿದು ಬಂದಿಲ್ಲ.

ಶಾರ್ಟ್ ಸಕ್ಯೂರ್ಟ್​: ಸುಟ್ಟು ಕರಕಲಾದ ಮೊಬೈಲ್ ಅಂಗಡಿ

ಬೀದರ್​: ಶಾರ್ಟ್ ಸಕ್ಯೂರ್ಟ್​ನಿಂದ ಮೊಬೈಲ್ ಅಂಗಡಿ ಬೆಂಕಿ ತಗುಲಿ ಲಕ್ಷಾಂತರ ರೂ. ಮೊಬೈಲ್ ಸುಟ್ಟು ಕರಕಲಾದ ಘಟನೆ ಬೀದರ್​ನಲ್ಲಿ ನಡೆದಿದೆ. ನಗರದ ಹೊಸ ಬಸ್ ನಿಲ್ದಾಣದ ಬಳಿ ಇರುವ ಲೈಕ್ ಪಾಶಾ ಎಂಬುವರಿಗೆ ಸೇರಿದ ಮೊಬೈಲ್ ಅಂಗಡಿ ಸುಟ್ಟು ಕರಕಲಾಗಿದ್ದು 200ಕ್ಕೂ ಹೆಚ್ಚು ಮೊಬೈಲ್ ಸುಟ್ಟುಹೋಗಿವೆ.

ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್​ನ 19ನೇ ಮಹಡಿಯಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ

ರಾತ್ರಿ ವೇಳೆಯಲ್ಲಿ ಮೊಬೈಲ್ ಅಂಗಡಿಗೆ ಬೆಂಕಿ ಹತ್ತಿದ ಪರಿಣಾಮದಿಂದಾ ಬೆಂಕಿ ನಂದಿಸಲು ಯಾರು ಇರಲಿಲ್ಲ ಹೀಗಾಗಿ ಇಡೀ ಮೊಬೈಲ್ ಅಂಗಡಿ ಸುಟ್ಟು ಕರಕಲಾಗಿದೆ. ಈ ಕುರಿತು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.