ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್: ಸಿಸಿಬಿ ಪೊಲೀಸರಿಂದ ಮತ್ತೋರ್ವ ವಿದೇಶಿ ಡ್ರಗ್ ಪೆಡ್ಲರ್ ಸೆರೆ..

ಚಿಡಿಬೈರ್ ಆ್ಯಮರೋಸ್ ಬಂಧಿತ ವಿದೇಶಿ ಆರೋಪಿಯಾಗಿದ್ದು, ಆ್ಯಮರೋಸ್ ಪ್ರಕರಣದ 21 ಆರೋಪಿಯಾಗಿದ್ದಾನೆ. ಆರೋಪಿ ಹಲವು ಪಾರ್ಟಿಗಳಿಗೆ ಡ್ರಗ್ ಸಪ್ಲೇ ಮಾಡಿದ್ದ.

ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್: ಸಿಸಿಬಿ ಪೊಲೀಸರಿಂದ ಮತ್ತೋರ್ವ ವಿದೇಶಿ ಡ್ರಗ್ ಪೆಡ್ಲರ್ ಸೆರೆ..
ಬಂಧಿತ ಆರೋಪಿ ಚಿಡಿಬೈರ್ ಆ್ಯಮರೋಸ್
Follow us
ಪೃಥ್ವಿಶಂಕರ
|

Updated on: Jan 18, 2021 | 8:10 AM

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವಿದೇಶಿ ಡ್ರಗ್ ಪೆಡ್ಲರ್​ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಚಿಡಿಬೈರ್ ಆ್ಯಮರೋಸ್ ಬಂಧಿತ ವಿದೇಶಿ ಆರೋಪಿಯಾಗಿದ್ದು, ಆ್ಯಮರೋಸ್ ಪ್ರಕರಣದ 21 ಆರೋಪಿಯಾಗಿದ್ದಾನೆ. ಆರೋಪಿ ಹಲವು ಪಾರ್ಟಿಗಳಿಗೆ ಡ್ರಗ್ ಸಪ್ಲೇ ಮಾಡಿದ್ದ. ಲೂಮ್ ಪೆಪ್ಪರ್ ಹಾಗೂ ಬೊನಾಲ್ಡ್ ಜೊತೆಗೆ ಆ್ಯಮರೋಸ್​ ನಿಂದ ಡ್ರಗ್ ಸಪ್ಲೇ ಆಗುತ್ತಿತ್ತು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿ ಆ್ಯಮರೋಸ್​ನನ್ನು ಬಂಧಿಸಿದ್ದಾರೆ.

ಆರೋಪಿ ಬಂಧನದ ವೇಳೆ 10ಗ್ರಾಂ ನಷ್ಟು LSD ಪತ್ತೆಯಾಗಿದ್ದು, LSDಯನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಆ್ಯಮರೋಸ್ ಮತ್ತಷ್ಟು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ಹಲವು ಪ್ರತಿಷ್ಟಿತ ಹೋಟೆಲ್​ಗಳ ಪಾರ್ಟಿಗೆ ಡ್ರಗ್ ಪೆಡ್ಲಿಂಗ್ ಮಾಡಲಾಗಿದೆ. ನಟಿ ಮಣಿಯರ ಪಾರ್ಟಿಗೆ ಈತನಿಂದಲೂ ಡ್ರಗ್ಸ್ ಸಪ್ಲೇ ಆಗಿತ್ತಂತೆ. ಸದ್ಯ ಆರೋಪಿಯನ್ನು ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.