ಸೊಲ್ಲಾಪುರ, ಮುಂಬೈನ ಅರ್ಧ ಭಾಗ ಕರ್ನಾಟಕ ರಾಜ್ಯಕ್ಕೆ ಸೇರಬೇಕು: ವಾಟಾಳ್ ನಾಗರಾಜ್

ಮೊದಲು ಸೊಲ್ಲಾಪುರ ಕರ್ನಾಟಕ ರಾಜ್ಯಕ್ಕೆ ಸೇರಬೇಕು. ಮುಂಬೈನ ಅರ್ಧ ಭಾಗ ಕರ್ನಾಟಕ ರಾಜ್ಯಕ್ಕೆ ಸೇರಬೇಕು. ಇದರ ಬಗ್ಗೆ ಮೊದಲು ತೀರ್ಮಾನ ಮಾಡಲಿ ಎಂದು ವಾಟಾಳ್​ ನಾಗರಾಜ್ ಗುಡುಗಿದ್ದಾರೆ.

ಸೊಲ್ಲಾಪುರ, ಮುಂಬೈನ ಅರ್ಧ ಭಾಗ ಕರ್ನಾಟಕ ರಾಜ್ಯಕ್ಕೆ ಸೇರಬೇಕು: ವಾಟಾಳ್ ನಾಗರಾಜ್
ವಾಟಾಳ್​ ನಾಗರಾಜ್​
Follow us
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​

Updated on:Jan 18, 2021 | 11:25 AM

ಬೆಂಗಳೂರು: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಗಡಿ ಕ್ಯಾತೆ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.

ಮೊದಲು ಸೊಲ್ಲಾಪುರ ಕರ್ನಾಟಕ ರಾಜ್ಯಕ್ಕೆ ಸೇರಬೇಕು. ಮುಂಬೈನ ಅರ್ಧ ಭಾಗ ಕರ್ನಾಟಕ ರಾಜ್ಯಕ್ಕೆ ಸೇರಬೇಕು. ಇದರ ಬಗ್ಗೆ ಮೊದಲು ತೀರ್ಮಾನ ಮಾಡಲಿ ಎಂದು ವಾಟಾಳ್​ ನಾಗರಾಜ್ ಗುಡುಗಿದ್ದಾರೆ. ಬೆಳಗಾವಿ ಜಿಲ್ಲೆ ರಾಜಕಾರಣಿಗಳು ಮರಾಠ ಏಜೆಂಟ್‌ಗಳು. ನಿನ್ನೆ ಸಮಾವೇಶದಲ್ಲಿ ಅಮಿತ್ ಶಾ ಮರಾಠ ಪೇಟ ಕಟ್ಟಿದ್ದರು. ಒಬ್ಬರಾದ್ರೂ ಈ ಬಗ್ಗೆ ಮಾತಾಡಿದ್ರಾ ಎಂದು ವಾಟಾಳ್ ನಾಗರಾಜ್ ಆಕ್ರೋಶ ಹೊರಹಾಕಿದರು.

ಬಿಜೆಪಿಯವರಿಂದ ಕರ್ನಾಟಕ ರಾಜ್ಯ ಹಾಳಾಗ್ತಿದೆ. ಕನ್ನಡಿಗರ ಪರವಾಗಿ ಸಿಎಂ ಕೇವಲ ನಾಟಕವಾಡುತ್ತಿದ್ದಾರೆ. ನಾವು ಯಾವುದೇ ಕಾರಣಕ್ಕೂ ಬೆಳಗಾವಿ ಬಿಟ್ಟುಕೊಡಲ್ಲ. ಬಾಳಾ ಠಾಕ್ರೆ ಮತ್ತೆ ಹುಟ್ಟಿಬಂದರೂ ಪಡೆಯಲಾಗಲ್ಲ. ಈ ವಿಚಾರವನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ಎಂಇಎಸ್ ಕ್ಯಾತೆ ತೆಗೆದರೆ ಅವರನ್ನು ಹೊರಗೆ ಹಾಕಬೇಕು.

ಕರ್ನಾಟಕದಲ್ಲಿ ಮರಾಠ ಅಭಿವೃದ್ಧಿ ನಿಗಮ ಮಾಡುತ್ತಾರೆ. ಆದ್ರೆ ಮಹಾರಾಷ್ಟ್ರದವರು ಬೆಳಗಾವಿ ಬೇಕು ಅಂತಾರೆ. ಸಿಎಂ ಯಡಿಯೂರಪ್ಪ ಬಹಳ ನೀಚ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಸಿಎಂ ಸಚಿವ ಸಂಪುಟ ಸಭೆಯನ್ನು ಕರೆಯಬೇಕು. ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕೆಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

Published On - 8:39 am, Mon, 18 January 21