ಪರಪ್ಪನ ಅಗ್ರಹಾರ ಜೈಲಿನಲ್ಲಿ ಕರ್ಮಕಾಂಡ ಬೆನ್ನಲ್ಲೇ ಅಧೀಕ್ಷಕರ ಎತ್ತಂಗಡಿ: ಹೊಸಬರ ನೇಮಕ

ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್‌ ಜೈಲಿಗೆ ಹೊಸ ಮುಖ್ಯ‌ ಅಧೀಕ್ಷಕರಾಗಿ ಅಂಶುಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಅಧೀಕ್ಷಕರಾಗಿದ್ದ ಕೆ. ಸುರೇಶ್‌ರನ್ನು ವರ್ಗಾವಣೆಗೊಳಿಸಿ, ಆ ಸ್ಥಾನಕ್ಕೆ ಅಂಶುಕುಮಾರ್‌ರನ್ನು ನಿಯೋಜಿಸಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕರ್ಮಕಾಂಡ ಬೆನ್ನಲ್ಲೇ ಅಧೀಕ್ಷಕರ ಎತ್ತಂಗಡಿ: ಹೊಸಬರ ನೇಮಕ
ಪರಪ್ಪನ ಅಗ್ರಹಾರ ಸೆಂಟ್ರಲ್‌ ಜೈಲು
Updated By: ರಮೇಶ್ ಬಿ. ಜವಳಗೇರಾ

Updated on: Nov 28, 2025 | 8:54 PM

ಬೆಂಗಳೂರು, ನವೆಂಬರ್ 10: ಪರಪ್ಪನ ಅಗ್ರಹಾರ ಜೈಲು (Parappana Agrahara jail) ಅನ್ನೋದು ಐಷಾರಾಮಿ ಸೌಲಭ್ಯಗಳ ತಾಣವಾಗಿದೆ. ಇಲ್ಲಿನ ಹೈಫೈ ಲೈಫ್‌ನ ವಿಡಿಯೋಗಳು ದಿನಕ್ಕೊಂದರಂತೆ ರಿವೀಲ್ ಆಗುತ್ತಿವೆ. ಅಷ್ಟೇ ಅಲ್ಲದೆ ಜೈಲಿನ ಮೂವರು ಅಧಿಕಾರಿಗಳ ತಲೆದಂಡವಾಗಿದೆ. ಇದರ ಬೆನ್ನಲ್ಲೇ ಇದೀಗ ಪರಪ್ಪನ ಅಗ್ರಹಾರ ಸೆಂಟ್ರಲ್‌ ಜೈಲಿಗೆ ಮುಖ್ಯ‌ ಅಧೀಕ್ಷರಾಗಿ ಅಂಶುಕುಮಾರ್ (Anshu Kumar) ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಮುಖ್ಯ ಅಧೀಕ್ಷಕ ಸುರೇಶ್‌ರನ್ನ ವರ್ಗಾವಣೆ ಮಾಡಿರುವ ಸರ್ಕಾರ, ಆ ಜಾಗಕ್ಕೆ ಐಪಿಎಸ್ ಅಧಿಕಾರಿಗಳನ್ನು ನೇಮಕ ಮಾಡುವುದಾಗಿ ತಿಳಿತ್ತು. ಇದೀಗ ಹೊಸ ಮುಖ್ಯ‌ ಅಧೀಕ್ಷರ ನೇಮಕವಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಅಂಶುಕುಮಾರ್​ರನ್ನು ನೇಮಿಸಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಜೈಲುಗಳ ಸುರಕ್ಷತೆ ವಿಚಾರದಲ್ಲಿ SOP ಅನುಷ್ಠಾನ ಮಾಡಿ: ಕೇಂದ್ರ ಗೃಹ ಸಚಿವ ಅಮಿತ್​ ಶಾಗೆ ಶೊಭಾ ಕರಂದ್ಲಾಜೆ ಪತ್ರ

ಗೃಹ ಸಚಿವ ಡಾ. ಜಿ. ಪರಮೇಶ್ವರ್​ ಇಂದು ಕಾರಾಗೃಹ ಇಲಾಖೆ ಎಡಿಜಿಪಿ ಬಿ. ದಯಾನಂದ್‌ ಅನುಪಸ್ಥಿತಿಯಲ್ಲೇ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ಮಾಡಿದ್ದರು. ವೈರಲ್ ಆಗಿರುವ ಫೋಟೋ, ವಿಡಿಯೋಗಳನ್ನೇ ತೋರಿಸಿ ಜೈಲು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲ ಕರ್ತವ್ಯ ಲೋಪ ಆರೋಪದಲ್ಲಿ ಇಬ್ಬರನ್ನ ಸಸ್ಪೆಂಡ್‌ ಮಾಡಲಾಗಿದೆ.

ಇದನ್ನೂ ಓದಿ: ಜೈಲಲ್ಲಿ ಎಣ್ಣೆ ಪಾರ್ಟಿ ಕೇಸ್​ಗೆ ಸ್ಫೋಟಕ ಟ್ವಿಸ್ಟ್​: ಬಾಟಲಿಯಲ್ಲಿ ಇದ್ದಿದ್ದು ಮದ್ಯವಲ್ಲ, ಮೂತ್ರ?

ಕಾರಾಗೃಹ ಮುಖ್ಯ ಅಧೀಕ್ಷಕ ಸುರೇಶ್‌ರನ್ನ ತಕ್ಷಣಕ್ಕೆ ಎತ್ತಂಗಡಿ ಮಾಡಿರುವ ಸರ್ಕಾರ, ಕಾರಾಗೃಹ ಸೂಪರಿಂಟೆಂಡೆಂಟ್ ಇಮಾಮ್‌ಸಾಬ್‌ ಮ್ಯಾಗೇರಿ ಮತ್ತು ಸಹಾಯಕ ಅಧೀಕ್ಷಕ ಅಶೋಕ್ ಭಜಂತ್ರಿಯನ್ನ ಸಸ್ಪೆಂಡ್ ಮಾಡಲಾಗಿದೆ.

ಹೈಫೈ ಸೌಲಭ್ಯದ ವಿಡಿಯೋ ವೈರಲ್‌: ನಾಲ್ಕು ಕೇಸ್‌!

ಜೈಲಿನಲ್ಲಿ ಕೈದಿಗಳ ಡ್ಯಾನ್ಸ್ ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ 3 NCR, 1 ಎಫ್ಐಆರ್ ದಾಖಲಾಗಿದೆ. ಸದ್ಯ ಸಸ್ಪೆಂಡ್ ಆಗಿರುವ ಜೈಲಿನ ಅಧೀಕ್ಷಕ ಇಮಾಮ್‌ಸಾಬ್‌ ಮ್ಯಾಗೇರಿ, ಅಮಾನತಿಗೂ ಮುನ್ನ ನೀಡಿದ ದೂರಿನ ಅನ್ವಯ ಎಫ್​ಐಆರ್​​ ದಾಖಲಾಗಿದೆ. ಸಜಾ ಕೈದಿ ಪ್ಯಾಟ್ರಿಕ್ ಟೀಂನಿಂದಲೇ ಮೋಜುಮಸ್ತಿ ನಡೆದಿದ್ದು, ಪ್ಯಾಟ್ರಿಕ್‌ ಟೀಂ ವಿರುದ್ಧ ಕೇಸ್‌ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:33 pm, Mon, 10 November 25